ಭೂತಾನ್ ಸ್ಪಿನ್ನರ್ ಸೋನಮ್ ಯೆಶೆ 
ಕ್ರಿಕೆಟ್

4 ಓವರ್‌ 8 ವಿಕೆಟ್‌: ಹೊಸ ದಾಖಲೆ ಬರೆದ 22 ವರ್ಷದ ಭೂತಾನ್ ಸ್ಪಿನ್ನರ್ ಸೋನಮ್ ಯೆಶೆ!

ಯೆಶೆ ಅವರ ಸಾಧನೆಗೂ ಮುನ್ನ, ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಏಳು ವಿಕೆಟ್ ಗೊಂಚಲು ಪಡೆದಿದ್ದು ಸಾಧನೆಯಾಗಿತ್ತು.

ಭೂತಾನ್‌ನ ಎಡಗೈ ಸ್ಪಿನ್ನರ್ ಸೋನಮ್ ಯೆಶೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಂತರರಾಷ್ಟ್ರೀಯ ಅಥವಾ ಇತರ ಟಿ20 ಪಂದ್ಯಗಳಲ್ಲಿ ಎಂಟು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 22 ವರ್ಷದ ಯೆಶೆ ಶುಕ್ರವಾರ ಗೆಲೆಫುವಿನಲ್ಲಿ ಮ್ಯಾನ್ಮಾರ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ.

ಅಸಾಧಾರಣವಾಗಿ ಬೌಲಿಂಗ್ ಮಾಡಿದ ಯೆಶೆ, 4 ಓವರ್‌ಗಳಲ್ಲಿ ಕೇವಲ 7 ರನ್‌ಗಳನ್ನು ನೀಡಿ 8 ವಿಕೆಟ್‌ಗಳನ್ನು ಕಬಳಿಸಿದರು. ಅವರ ಪ್ರದರ್ಶನವು ಮ್ಯಾನ್ಮಾರ್‌ನ ಬ್ಯಾಟಿಂಗ್ ಲೈನ್‌ಅನ್ನು ನಾಶಮಾಡಿತು. ಭೂತಾನ್‌ ನೀಡಿದ್ದ ಸಾಧಾರಣ 127 ರನ್‌ ಗುರಿಯನ್ನು ಬೆನ್ನಟ್ಟಲು ಪ್ರಯತ್ನಿಸುತ್ತಿದ್ದಾಗ ಮ್ಯಾನ್ಮಾರ್‌ ಅನ್ನು ಕೇವಲ 45 ರನ್‌ಗಳಿಗೆ ಕಟ್ಟಿಹಾಕಿದರು. ಅವರು ತಮ್ಮ ಬೌಲಿಂಗ್‌ನಿಂದ ಭೂತಾನ್‌ಗೆ ಪಂದ್ಯವನ್ನು ಬಹುತೇಕ ಏಕಾಂಗಿಯಾಗಿ ಗೆದ್ದರು. ಅವರು ನಾಲ್ಕು ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೊನೆಯ ಪಂದ್ಯ ಸೋಮವಾರ ನಿಗದಿಯಾಗಿದೆ.

ಯೆಶೆ ಅವರ ಸಾಧನೆಗೂ ಮುನ್ನ, ಪುರುಷರ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಏಳು ವಿಕೆಟ್ ಗೊಂಚಲು ಪಡೆದಿದ್ದು ಸಾಧನೆಯಾಗಿತ್ತು. ಕೇವಲ ಎರಡು ಬಾರಿ ಮಾತ್ರ ಸಯಾಜ್ರುಲ್ ಇದ್ರಸ್ (2023 ರಲ್ಲಿ ಚೀನಾ ವಿರುದ್ಧ ಮಲೇಷ್ಯಾ ಪರ 8 ರನ್ ನೀಡಿ 7 ವಿಕೆಟ್) ಮತ್ತು ಅಲಿ ದಾವೂದ್ (2025ರಲ್ಲಿ ಭೂತಾನ್ ವಿರುದ್ಧ ಬಹ್ರೇನ್ ಪರ 19 ರನ್ ನೀಡಿ 7 ವಿಕೆಟ್) ಈ ಸಾಧನೆ ಮಾಡಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್ ಹೊರತುಪಡಿಸಿ, ಬೌಲರ್ ಒಬ್ಬ ಪಂದ್ಯದಲ್ಲಿ ಏಳು ವಿಕೆಟ್ ಪಡೆದಿರುವುದು ಕೇವಲ ಎರಡು ಬಾರಿ ಮಾತ್ರ. 2019 ರಲ್ಲಿ ಬರ್ಮಿಂಗ್ಹ್ಯಾಮ್ ಬೇರ್ಸ್ ವಿರುದ್ಧ ಲೀಸೆಸ್ಟರ್‌ಶೈರ್ ಪರ ಕಾಲಿನ್ ಅಕರ್‌ಮನ್ 18 ರನ್‌ಗಳಿಗೆ 7 ವಿಕೆಟ್‌ಗಳನ್ನು ಪಡೆದರು. 2025 ರಲ್ಲಿ ಢಾಕಾ ಕ್ಯಾಪಿಟಲ್ಸ್ ವಿರುದ್ಧ ದರ್ಬಾರ್ ರಾಜ್‌ಶಾಹಿ ಪರ ತಸ್ಕಿನ್ ಅಹ್ಮದ್ 19 ರನ್‌ಗಳಿಗೆ 7 ವಿಕೆಟ್‌ಗಳನ್ನು ಪಡೆದರು.

ಮಹಿಳಾ ಕ್ರಿಕೆಟ್‌ನಲ್ಲಿ, ಬೌಲಿಂಗ್ ಪ್ರದರ್ಶನದಲ್ಲಿ ಅತ್ಯುನ್ನತ ಪ್ರದರ್ಶನವನ್ನು ಇಂಡೋನೇಷ್ಯಾದ ರೋಹ್ಮಾಲಿಯಾ ಹೊಂದಿದ್ದು, ಅವರು 2024ರಲ್ಲಿ ಮಂಗೋಲಿಯಾ ವಿರುದ್ಧ ಒಂದೇ ಒಂದು ರನ್ ಬಿಟ್ಟುಕೊಡದೆ 7 ವಿಕೆಟ್‌ಗಳನ್ನು ಕಬಳಿಸಿದರು. ಇದು ಮಹಿಳಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮತ್ತು ಎಲ್ಲ ಟಿ20 ಪಂದ್ಯಗಳಲ್ಲಿ ದಾಖಲಾದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

ಮಹಿಳಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಫ್ರೆಡೆರಿಕ್ ಓವರ್‌ಡಿಜ್ಕ್ (ನೆದರ್ಲ್ಯಾಂಡ್ಸ್ ವಿರುದ್ಧ ಫ್ರಾನ್ಸ್‌ ಪರ 7 ರನ್ ನೀಡಿ 3 ವಿಕೆಟ್), ಅಲಿಸನ್ ಸ್ಟಾಕ್ಸ್ (ಪೆರು ವಿರುದ್ಧ ಅರ್ಜೆಂಟೀನಾ ಪರ 7 ರನ್ ನೀಡಿ 3) ಮತ್ತು ಸಮಂತಿ ಡುನುಕೆಡೆನಿಯಾ (ಜೆಕ್ ಗಣರಾಜ್ಯ ವಿರುದ್ಧ ಸೈಪ್ರಸ್‌ಗೆ 15 ರನ್ ನೀಡಿ 7 ವಿಕೆಟ್), ಒಟ್ಟಾರೆ ಮಹಿಳಾ ಟಿ20 ಪಂದ್ಯಗಳಲ್ಲಿ ನಾಲ್ಕು ಇಂತಹ ಸಾಧನೆಗಳು ದಾಖಲಾಗಿವೆ.

ಯೆಶೆ ಜುಲೈ 2022 ರಲ್ಲಿ ಮಲೇಷ್ಯಾ ವಿರುದ್ಧ T20 ಅಂತರರಾಷ್ಟ್ರೀಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು ಮತ್ತು 16 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ತಕ್ಷಣವೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮುಂದಿನ ಕೆಲವು ವರ್ಷಗಳಲ್ಲಿ ಅವರು ನಿರಂತರವಾಗಿ ವಿಕೆಟ್‌ಗಳನ್ನು ಪಡೆಯುವುದನ್ನು ಮುಂದುವರೆಸಿದರು. ಈ ದಾಖಲೆ ಅವರ ಒಟ್ಟು 34ನೇ T20I ಪಂದ್ಯದಲ್ಲಿ ಬಂದಿದ್ದು, ಒಟ್ಟು 37 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನಧಿಕೃತ ಮನೆಗಳ ತೆರವು: ಕೋಗಿಲು ಲೇಔಟ್​​ಗೆ ಡಿ.ಕೆ ಶಿವಕುಮಾರ್ ಭೇಟಿ; ಡಿಸಿಎಂ ಹೇಳಿದ್ದೇನು? Video

'ಅವನನ್ನು ಗಲ್ಲಿಗೇರಿಸುವವರೆಗೂ ಹೋರಾಟ': ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

ಭಾರತೀಯ ಸೇನೆಗೆ 79,000 ಕೋಟಿ ರೂ. ಮೌಲ್ಯದ 'ಆಧುನಿಕ ಶಸ್ತ್ರಾಸ್ತ್ರ' ಖರೀದಿಗೆ DAC ಅನುಮೋದನೆ!

ಬಾಂಗ್ಲಾ ಬಿಕ್ಕಟ್ಟು: '1971ರಲ್ಲೇ ವಶವಾಗಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ'; ಸಿಲಿಗುರಿ ಕಾರಿಡಾರ್ ಕುರಿತು Sadhguru ಮಾತು!

ಉಕ್ರೇನ್ - ರಷ್ಯಾ ಸಮರ ಕೊನೆಗೊಳಿಸಲು ಸಭೆ: ಟ್ರಂಪ್‌ಗೆ 50 ವರ್ಷಗಳ ಭದ್ರತಾ ಗ್ಯಾರಂಟಿ ಕೇಳಿದ ಝೆಲೆನ್ಸ್ಕಿ

SCROLL FOR NEXT