ಗೊಂಗಡಿ ತ್ರಿಶಾ 
ಕ್ರಿಕೆಟ್

U19 T20 World Cup: ಮಹಿಳಾ ಕ್ರಿಕೆಟ್ ಆಟಗಾರ್ತಿ ತ್ರಿಶಾಗೆ ತೆಲಂಗಾಣ ಸರ್ಕಾರ ಬಂಪರ್ ಬಹುಮಾನ ಘೋಷಣೆ!

ತ್ರಿಶಾ 19 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಹೈದರಾಬಾದ್: ಕೌಲಾಲಂಪುರದಲ್ಲಿ ಇತ್ತೀಚೆಗೆ ನಡೆದ ಐಸಿಸಿ 19 ವರ್ಷದೊಳಗಿನ ಮಹಿಳೆಯರ T20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಹಿಳಾ ಕ್ರಿಕೆಟ್ ಆಟಗಾರ್ತಿ ಗೊಂಗಡಿ ತ್ರಿಶಾಗೆ ತೆಲಂಗಾಣ ಬಂಪರ್ ಬಹುಮಾನದ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಬುಧವಾರ 1 ಕೋಟಿ ರೂ. ನಗದು ಬಹುಮಾನ ಘೋಷಿಸಿದ್ದಾರೆ.

ತೆಲಂಗಾಣದ ಭದ್ರಾಚಲಂ ಮೂಲದ ತ್ರಿಶಾ ಅವರು ಮುಖ್ಯಮಂತ್ರಿಯನ್ನು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ತ್ರಿಷಾ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರೆಡ್ಡಿ, ಭವಿಷ್ಯದಲ್ಲಿ ಅವರು ದೇಶಕ್ಕಾಗಿ ಉತ್ತಮ ಫಾರ್ಮ್ ಮುಂದುವರಿಸಲಿ ಎಂದು ಹಾರೈಸಿದರು.

ತೆಲಂಗಾಣದ 19 ವರ್ಷದೊಳಗಿನವರ ವಿಶ್ವಕಪ್ ತಂಡದ ಸದಸ್ಯೆ ಧೃತಿ ಕೇಸರಿ, ಅಂಡರ್ 19 ವಿಶ್ವಕಪ್ ತಂಡದ ಮುಖ್ಯ ಕೋಚ್ ನೌಶೀನ್ ಮತ್ತು ತರಬೇತುದಾರರಾದ ಶಾಲಿನಿ ಅವರಿಗೆ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸಿಎಂ ಘೋಷಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತ್ರಿಶಾ 19 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ನಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದುಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಶೂ ಎಸೆತ': CJI ಬಿಆರ್ ಗವಾಯಿ ಜೊತೆ ಮಾತನಾಡಿದ ಪ್ರಧಾನಿ ಮೋದಿ; ಹೇಳಿದ್ದೇನು?

ಸಿಸಿಟಿವಿ ಡೇಟಾ ಹೈಕೋರ್ಟ್‌ಗಳೊಂದಿಗೆ ಮಾತ್ರ ಹಂಚಿಕೊಳ್ಳಬಹುದು: CEC ಜ್ಞಾನೇಶ್ ಕುಮಾರ್

ಕಾಂತಾರ: ಚಾಪ್ಟರ್ 1: ಕರ್ನಾಟಕದಲ್ಲಿ 4ನೇ ದಿನಕ್ಕೇ KGF 2 ಕಲೆಕ್ಷನ್‌ ಧೂಳಿಪಟ!

ನಟ ವಿಜಯ್ ದೇವರಕೊಂಡ ಕಾರು ಅಪಘಾತ; ಅದೃಷ್ಟವಶಾತ್ ಅಪಾಯದಿಂದ ಪಾರು!

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು-ಶೀತಕ್ಕೆ ಸಿರಪ್‌ ನೀಡಬೇಡಿ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

SCROLL FOR NEXT