ಭಾರತ ಕ್ರಿಕೆಟ್ ತಂಡ 
ಕ್ರಿಕೆಟ್

ICC Champions Trophy 2025: 'Group Of death' ನಲ್ಲಿ ಭಾರತ; ಒಂದೇ ಒಂದು ಸೋಲು.. ಸರಣಿಯಿಂದಲೇ ಟೀಂ ಇಂಡಿಯಾ ಔಟ್!

ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ODI ಸರಣಿಯನ್ನು 3-0 ಅಂತರದಿಂದ ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಭರ್ಜರಿಯಾಗಿ ಸಿದ್ದರಾಗಿದ್ದಾರೆ.

ನವದೆಹಲಿ: ಇಂಗ್ಲೆಂಡ್ ವಿರುದ್ದದ ಟಿ20 ಮತ್ತು ಏಕದಿನ ಸರಣಿ ಗೆಲುವಿನ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿ ಗೆಲ್ಲುನ ನೆಚ್ಚಿನ ತಂಡ ಎಂದು ಬೀಗುತ್ತಿರುವ ಭಾರತ ಕ್ರಿಕೆಟ್ ತಂಡ ಸರಣಿಯಲ್ಲಿ 'Group Of death' ನಲ್ಲಿದ್ದು, ಒಂದೇ ಒಂದು ಪ್ರಮಾದ ಕೂಡ ತಂಡವನ್ನೂ ಸರಣಿಯಿಂದಲೇ ಔಟ್ ಮಾಡುತ್ತದೆ.

ಹೌದು.. ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ODI ಸರಣಿಯನ್ನು 3-0 ಅಂತರದಿಂದ ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಭರ್ಜರಿಯಾಗಿ ಸಿದ್ದರಾಗಿದ್ದಾರೆ.

ಅಂತೆಯೇ ಬಹುದಿನಗಳಿಂದ ರನ್ ಕೊರತೆ ಎದುರಿಸುತ್ತಿದ್ದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕದ ಮೂಲಕ ಫಾರ್ಮ್ ಗೆ ಮರಳಿದ್ದು, ಅಂತೆಯೇ ಕಳಪೆ ಬ್ಯಾಟಿಂಗ್ ನಿಂದಾಗಿ ಟೀಕೆ ಎದುರಿಸುತ್ತಿದ್ದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೂಡ ಇದೇ ಸರಣಿಯಲ್ಲಿ ಅರ್ಧಶತಕ ಸಿಡಿಸಿ ಫಾರ್ಮ್ ಗೆ ಮರಳಿದ್ದಾರೆ. ಇದು ತಂಡಕ್ಕೆ ಆನೆ ಬಲ ತಂದಿದೆಯಾದರೂ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ತಂಡದ ಒಂದೇ ಒಂದು ಪ್ರಮಾಣ ಇಡೀ ತಂಡವನ್ನು ಟೂರ್ನಿಯಿಂದಲೇ ಹೊರ ಹಾಕುವ ಅಪಾಯವಿದೆ.

ಹೈಬ್ರೀಡ್ ಮಾದರಿಯಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ತಪ್ಪು ಮಾಡಲು ಅವಕಾಶವಿಲ್ಲ ಎಂಬುದನ್ನು ಟೀಮ್ ಇಂಡಿಯಾ ನೆನಪಿನಲ್ಲಿಟ್ಟುಕೊಳ್ಳಬೇಕು. ಫೆಬ್ರವರಿ 19 ರಿಂದ ಪ್ರಾರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಗ್ರೂಪ್ ಆಫ್ ಡೆತ್

ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳಿವೆ. ಈ ಗ್ರೂಪ್ ಅನ್ನು ಕ್ರಿಕೆಟ್ ವಿಶ್ಲೇಷಕರು ಗ್ರೂಪ್ ಆಫ್ ಡೆತ್ ಎಂದು ವಿಶ್ಲೇಷಣೆ ಮಾಡುತ್ತಿದ್ದು, ಇಲ್ಲಿ ಒಂದು ಸೋಲು ಕೂಡ ಯಾವುದೇ ತಂಡದ ಅಭಿಯಾನವನ್ನು ಕೊನೆಗೂಳಿಸುತ್ತದೆ.

ಭಾರತ ತಂಡ ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಾದ ನಂತರ ಭಾರತ ಫೆಬ್ರವರಿ 23 ರಂದು ಪಾಕಿಸ್ತಾನ ಮತ್ತು ಮಾರ್ಚ್ 2 ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಯಾವುದೇ ಅಡೆತಡೆಗಳಿಲ್ಲದೆ ಸೆಮಿಫೈನಲ್ ತಲುಪಲು ಭಾರತ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು. ಒಂದೇ ಒಂದು ಸೋಲು ಕೂಡ ಭಾರತಕ್ಕೆ ಅಪಾಯವಾಗುವ ಸಾದ್ಯತೆ ಇದ್ದು, ಇತರ ತಂಡಗಳ ಸೋಲು-ಗೆಲುವಿನ ಸಮೀಕರಣಗಳನ್ನು ಅವಲಂಬಿಸುವಂತೆ ಮಾಡುತ್ತದೆ.

ಈ ಗ್ರೂಪ್ ನಲ್ಲಿರುವ ಇತರೆ ತಂಡಗಳ ವಿಚಾರಕ್ಕೆ ಬರುವುದಾದರೆ, ಭಾರತವು ಇಂಗ್ಲೆಂಡ್ ವಿರುದ್ಧದ ತನ್ನ ಪ್ರದರ್ಶನದ ಮೂಲಕ ತನ್ನ ತಯಾರಿ ಹೇಗಿದೆ ಎಂಬುದನ್ನು ತೋರಿಸಿದೆ. ಪಾಕಿಸ್ತಾನ ತಂಡ ಯಾವಾಗಲೂ ತವರಿನಲ್ಲಿ ಉತ್ತಮವಾಗಿ ಆಡುತ್ತದೆ. ಈಗಾಗಲೇ ಅವರು ದಕ್ಷಿಣ ಆಫ್ರಿಕಾ ವಿರುದ್ಧ 350 ರನ್‌ಗಳಿಗಿಂತ ದೊಡ್ಡ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿ ಗುರಿ ಸಾಧಿಸುವ ಮೂಲಕ ಅದನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ಪಾಕಿಸ್ತಾನ ಪ್ರವಾಸದಲ್ಲೂ ನ್ಯೂಜಿಲೆಂಡ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ಕೂಡ ತಲುಪಿದೆ.

ಅಂತೆಯೇ ಗ್ರೂಪ್ ಎ ನ ನಾಲ್ಕನೇ ತಂಡವಾದ ಬಾಂಗ್ಲಾದೇಶ ಕೂಡ ಉತ್ತಮವಾಗಿ ಕಾಣುತ್ತಿದ್ದು, ಯಾವುದೇ ಕ್ಷಣದಲ್ಲೂ ಎದುರಾಳಿಗಳಿಗೆ ಅಚ್ಚರಿ ಮತ್ತು ಆಘಾತ ನೀಡುವ ಸಾಮರ್ಥ್ಯ ಹೊಂದಿದೆ. 2007 ರ ವಿಶ್ವಕಪ್‌ನಲ್ಲಿ, ಭಾರತವನ್ನು ಹೊರದಬ್ಬಿದ್ದೇ ಬಾಂಗ್ಲಾದೇಶ ಎಂಬುದನ್ನು ಮರೆಯಬಾರದು. ಇದೇ ಕಾರಣಕ್ಕೆ ಭಾರತ ವಿರುವ ಗ್ರೂಪ್ ಎ ಅನ್ನು ಡೆತ್ ಗ್ರೂಪ್ ಎಂದು ಕರೆಯಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT