ಶ್ರೇಯಾಂಕಾ ಪಾಟೀಲ್ 
ಕ್ರಿಕೆಟ್

WPL 2025: RCB ಸ್ಟಾರ್ ಸ್ಪಿನ್ನರ್ Shreyanka Patil ಸರಣಿಯಿಂದಲೇ ಔಟ್, ಆಲ್ರೌಂಡರ್ ಎಂಟ್ರಿ!

ಈ ವರೆಗೂ ಆರ್​ಸಿಬಿ ಪರ 15 ಪಂದ್ಯಗಳನ್ನಾಡಿರುವ ಶ್ರೇಯಾಂಕಾ ಬೌಲಿಂಗ್​ನಲ್ಲಿ 19 ವಿಕೆಟ್ ಕಬಳಿಸಿ, ಬ್ಯಾಟ್ ಮೂಲಕ 81 ರನ್ ಕಲೆಹಾಕಿದ್ದಾರೆ.

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) 2025ರಲ್ಲಿ ಶುಭಾರಂಭ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಆರಂಭದಲ್ಲೇ ಭಾರಿ ಆಘಾತ ಎದುರಾಗಿದ್ದು ತಂಡದ ಸ್ಟಾರ್ ಆಟಗಾರ್ತಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ದೂರ ಉಳಿಯುವಂತಾಗಿದೆ.

ಹೌದು.. ಟಗರು ಪುಟ್ಟಿ ಖ್ಯಾತಿಯ ಶ್ರೇಯಾಂಕಾ ಪಾಟೀಲ್ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಇದೀಗ ಇಡೀ ಟೂರ್ನಿಗೆ ಅಲಭ್ಯರಾಗಿದ್ದಾರೆ. ಈ ವರೆಗೂ ಆರ್​ಸಿಬಿ ಪರ 15 ಪಂದ್ಯಗಳನ್ನಾಡಿರುವ ಶ್ರೇಯಾಂಕಾ ಬೌಲಿಂಗ್​ನಲ್ಲಿ 19 ವಿಕೆಟ್ ಕಬಳಿಸಿ, ಬ್ಯಾಟ್ ಮೂಲಕ 81 ರನ್ ಕಲೆಹಾಕಿದ್ದಾರೆ. ಕಳೆದ ಬಾರಿ ಆರ್​ಸಿಬಿ ತಂಡ ಕಪ್ ಗೆಲ್ಲುವಲ್ಲಿ ಕನ್ನಡತಿ ಶ್ರೇಯಾಂಕಾ ಕೊಡುಗೆ ಅಮೂಲ್ಯವಾಗಿತ್ತು. ಆದರೆ ಈ ಬಾರಿ ಶ್ರೇಯಾಂಕಾ ಪಾಟೀಲ್ ತಂಡದ ದೂರ ಉಳಿಯುವಂತಾಗಿದೆ.

ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯೆಯಾಗಿರುವ ಶ್ರೇಯಾಂಕಾ ಪಾಟೀಲ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದಕ್ಕೆ ಕಾರಣ ಗಾಯದ ಸಮಸ್ಯೆ ಎಂದು ತಿಳಿದು ಬಂದಿದೆ. ಈ ಗಾಯದ ಸಮಸ್ಯೆಯ ಕಾರಣ ಅವರು ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಮೊಣಕಾಲಿನ ಗಾಯದ ಸಮಸ್ಯೆಯ ಕಾರಣ ಶ್ರೇಯಾಂಕಾ ಪಾಟೀಲ್ 2024ರ ಮಹಿಳಾ ಟಿ20 ವಿಶ್ವಕಪ್ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸ ಹಾಗೂ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗಳಿಂದಲೂ ಹೊರಗುಳಿದಿದ್ದರು. ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ ನಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಆಲ್ರೌಂಡರ್ ಎಂಟ್ರಿ!

ಗಾಯಾಳು ಶ್ರೇಯಾಂಕಾ ಪಾಟೀಲ್ ಗೆ ಪರ್ಯಾಯವಾಗಿ ಆರ್ ಸಿಬಿ ಫ್ರಾಂಚೈಸಿ ಪ್ರಮುಖ ಆಲ್ರೌಂಡರ್ ಅನ್ನೇ ಕಣಕ್ಕಿಳಿಸುತ್ತಿದ್ದು, ಅನುಭವಿ ಆಲ್​ರೌಂಡರ್ ಸ್ನೇಹ್ ರಾಣಾ ಅವರನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಕಳೆದ ಸೀಸನ್​ನಲ್ಲಿ ಗುಜರಾತ್ ಜೈಂಟ್ಸ್ ಪರ ಆಡಿದ್ದ ಸ್ನೇಹ್ ರಾಣಾ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ ಆರ್​ಸಿಬಿ ತಂಡದ ಮೊದಲ ಪಂದ್ಯದ ವೇಳೆ ಸ್ನೇಹ್ ರಾಣಾ ಡಗೌಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಶ್ರೇಯಾಂಕಾ ಬದಲಿಯಾಗಿ ಸ್ನೇಹ್ ಆರ್​ಸಿಬಿ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT