ಡಬ್ಲ್ಯುಪಿಎಲ್ ಪಂದ್ಯ online desk
ಕ್ರಿಕೆಟ್

WPL 2025: ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಗೆ 6 ವಿಕೆಟ್ ಗೆಲುವು

ಟಾಸ್ ಗೆದ್ದ ಗುಜರಾತ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಯುಪಿ ವಾರಿಯರ್ಸ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ ಗುಜರಾತ್ ತಂಡ 143 ರನ್ ಗಳಿಗೆ ಕಟ್ಟಿ ಹಾಕಿತು.

ವಡೋದರಾದಲ್ಲಿ ನಡೆದ ಡಬ್ಲ್ಯುಪಿಎಲ್ 2025 ರ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವನ್ನು ಗುಜರಾತ್ ತಂಡ 6 ವಿಕೆಟ್ ಗಳ ಅಂತರದಿಂದ ಮಣಿಸಿದೆ.

ಟಾಸ್ ಗೆದ್ದ ಗುಜರಾತ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಯುಪಿ ವಾರಿಯರ್ಸ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ ಗುಜರಾತ್ ತಂಡ 143 ರನ್ ಗಳಿಗೆ ಕಟ್ಟಿ ಹಾಕಿತು.

ವಾರಿಯರ್ಸ್ ತಂಡದ ಪರ ದೀಪ್ತಿ ಶರ್ಮಾ 39 (27) ರನ್, ಉಮಾ ಚೆಟ್ರಿ 24 (27) ರನ್, ಅಲನಾ ಕಿಂಗ್ 19 (14) ರನ್ ಗಳಿಸಿದರು.

ಸಾಧಾರಣ ಮೊತ್ತ ಬೆನ್ನಟ್ಟಿದ ಗುಜರಾತ್ ತಂಡದ ಪರ, ನಾಯಕಿ ಆಶ್ಲೀ ಗಾರ್ಡ್ನರ್ 32 ಎಸೆತಗಳಲ್ಲಿ 52 ರನ್, ಹರ್ಲೀನ್ ಡಿಯೋಲ್ 30 ಎಸೆತಗಳಲ್ಲಿ 34 ರನ್, ಡಿಯಾಂಡ್ರಾ ಡಾಟಿನ್ 18 ಎಸೆತಗಳಲ್ಲಿ 33 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗುಜರಾತ್ ತಂಡ 18 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 144 ರನ್ ಗಳಿಸಿ ಉತ್ತರ ಪ್ರದೇಶ ತಂಡದ ವಿರುದ್ಧ ಗೆಲುವು ಸಾಧಿಸಿತು.

39 ರನ್ ನೀಡಿ 2 ವಿಕೆಟ್ ಗಳಿಸಿ ಬೌಲಿಂಗ್ ನಲ್ಲೂ ಮಿಂಚಿದ ಆಶ್ಲೀ ಗಾರ್ಡ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

SCROLL FOR NEXT