ನವದೆಹಲಿ: ಗುರುವಾರ ದುಬೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಭಾರತದ ಆರಂಭಿಕ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಶಿಖರ್ ಧವನ್ ಸುಂದರ ಮಹಿಳೆಯ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ.
ಚಾಂಪಿಯನ್ಸ್ ಟ್ರೋಫಿ 2025 ರ ಬ್ರಾಂಡ್ ಅಂಬಾಸಿಡರ್ ಆಗಿರುವ ಧವನ್ ವಿಐಪಿ ಬಾಕ್ಸ್‌ನಲ್ಲಿ ಆ ಮಹಿಳೆ ಜೊತೆಗೆ ಆರಾಮವಾಗಿ ಕುಳಿತಿದ್ದಾರೆ. ಇದು ನೆಟ್ಟಿಗರಲ್ಲಿ ಒಂದು ಬಗೆಯ ಕುತೂಹಲ ಮೂಡಿಸಿದ್ದು, ಯಾರಿದು ಮಹಿಳೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಈ ಕುರಿತು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಕೆಲ ನೆಟ್ಟಿಗರು ಇನ್‌ಸ್ಟಾಗ್ರಾಮ್‌ನಲ್ಲಿ ಧವನ್‌ನನ್ನು ಫಾಲೋ ಮಾಡುವ ಸೋಫಿ ಎಂದು ಹೇಳುತ್ತಿದ್ದಾರೆ. ಪಂದ್ಯದ ವೇಳೆ ಓವರ್‌ಗಳ ನಡುವೆ ಧ್ವನಿವರ್ಧಕದಲ್ಲಿ ಬರುತ್ತಿದ್ದ ಪಂಜಾಬಿ ಹಾಡಿಗೆ 'ಸೋಫಿ' ಮತ್ತು ಶಿಖರ್ ಒಟ್ಟಿಗೆ ತಲೆಯಾಡಿಸಿರುವುದು ಕಂಡುಬಂದಿದೆ.
ಇಬ್ಬರ ನಡುವೆ ಪ್ರಣಯದ ಯಾವುದೇ ದೃಶ್ಯಗಳು ನಡೆದಿಲ್ಲ. ಆದರೆ ಶಿಖರ್ ಅವರ ನೋಟವು ಖಂಡಿತವಾಗಿಯೂ ಸಂಚಲನವನ್ನು ಸೃಷ್ಟಿಸಿದೆ. ವಿವಾಹವಾದ 8 ವರ್ಷಗಳ ನಂತರ ಶಿಖರ್ ಧವನ್ ಹಾಗೂ ಪತ್ನಿ ಆಯಿಷಾ ಮುಖರ್ಜಿ ವಿಚ್ಛೇದನ ಪಡೆದುಕೊಂಡಿದ್ದರು.