ಪಾಕಿಸ್ತಾನ ಮತ್ತೆ ಸಂಕಷ್ಟ 
ಕ್ರಿಕೆಟ್

ICC Champions Trophy 2025: ಟೂರ್ನಿಯಿಂದ ಪಾಕಿಸ್ತಾನ ಹೊರಕ್ಕೆ; 3 ವರ್ಷಗಳ ಪ್ರಯತ್ನ ನೀರುಪಾಲು, PCBಗೆ ಮತ್ತೆ ಸಂಕಷ್ಟ!

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಭಾನುವಾರ ನಡೆದ ಸಾಂಪ್ರದಾಯಿತ ಎದುರಾಳಿ ಭಾರತ ತಂಡದ ವಿರುದ್ಧವೂ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ.

ಕರಾಚಿ: ಚಾಂಪಿಯನ್ಸ್ ಟ್ರೋಫಿ ಆರಂಭವಾದ ಐದೇ ದಿನಗಳಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದಲೇ ಹೊರಬಿದ್ದಿದ್ದು, ತನ್ನ ದೇಶದಲ್ಲೇ ಟೂರ್ನಿ ಆಯೋಜನೆಗಾಗಿ ಹರಸಾಹಸ ಪಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ.

ಹೌದು.. ಸತತ 29 ವರ್ಷಗಳ ಬಳಿಕ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸಲು ಹರಸಾಹಸ ಪಟ್ಟಿದ್ದ ಪಾಕಿಸ್ತಾನ ಕೊನೆಗೂ ತನ್ನ ದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಟೂರ್ನಿ ಆಯೋಜನೆಯಾದ ಕೇವಲ ಐದೇ ದಿನದಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದಿದ್ದು ಮತ್ತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಂಕಷ್ಟಕ್ಕೆ ಸಿಲುಕಿದೆ.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಪಾಕಿಸ್ತಾನ ಭಾನುವಾರ ನಡೆದ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧವೂ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದೆ. ಇದೀಗ ಪಾಕಿಸ್ತಾನದಲ್ಲಿ ಪಾಕಿಸ್ತಾನ ತಂಡವಿಲ್ಲದೇ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದ್ದು, ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರ ಅಭಾವ ಎದುರಾಗುವ ಭೀತಿ ಆರಂಭವಾಗಿದೆ.

ಕನಿಷ್ಠ ಪಕ್ಷ ಭಾರತ ತಂಡವಿದಿದ್ದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣಕ್ಕೆ ಧಾವಿಸುತ್ತಿದ್ದರು. ಆದರೆ ಭದ್ರತೆ ಮತ್ತು ಉಭಯ ದೇಶಗಳ ರಾಜಕೀಯ ವೈರುಧ್ಯಗಳ ಕಾರಣದಿಂದಾಗಿ ಇದೀಗ ಭಾರತ ಕೂಡ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುತ್ತಿಲ್ಲ. ಇದು ಪಾಕಿಸ್ತಾನಕ್ಕೆ ಮರ್ಮಾಘಾತವನ್ನೇ ನೀಡಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತಷ್ಟು ಆರ್ಥಿಕ ಮುಗ್ಗಟ್ಟಿಗೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಗಾಯದ ಮೇಲೆ ಬರೆ

ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸುದೀರ್ಘ ಸಮಯಗಳ ಕಾಲ ತವರು ಟೂರ್ನಿಗಳಿಲ್ಲದೆ ಹೈರಾಣಾಗಿತ್ತು. ಶ್ರೀಲಂಕಾ ತಂಡದ ಮೇಲಿನ ಉಗ್ರರ ದಾಳಿ ಬಳಿಕ ವಾಕಿಸ್ತಾನದಲ್ಲಿ ಕ್ರಿಕೆಟ್ ಸಂಪೂರ್ಣ ನೆಲ ಕಚ್ಟಿತ್ತು. ಈಗ್ಗೆ ಕೆಲ ವರ್ಷಗಳಿಂದಷ್ಟೇ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಟೂರ್ನಿಗಳ ಆಯೋಜನೆಯಾಗುತ್ತಿದೆ. ಇಂತಹ ಸಂದರ್ಭದಲ್ಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಪಟ್ಟು ಹಿಡಿದು, ಕೊನೆಗೂ ತನ್ನಲ್ಲಿಯೇ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿತ್ತು. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ಐಸಿಸಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆ ಮಾಡಿ ಭಾರತ ತಂಡದ ಪಂದ್ಯಗಳನ್ನು ದುಬೈನಲ್ಲಿ ಉಳಿದ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜಿಸಿತ್ತು.

ಎಂಟು ತಂಡಗಳ ಚಾಂಪಿಯನ್ಸ್ ಟ್ರೋಫಿ 1996 ರ ವಿಶ್ವಕಪ್ ನಂತರ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮೊದಲ ಐಸಿಸಿ ಕಾರ್ಯಕ್ರಮವಾಗಿದೆ ಮತ್ತು ತವರು ತಂಡವು ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ನಿರೀಕ್ಷೆಗಳಿದ್ದವು. ಆದರೆ ಇದೀಗ ಅತಿಥೇಯ ತಂಡ ಪಾಕಿಸ್ತಾನವೇ ಟೂರ್ನಿಯಿಂದ ಹೊರಬಿದ್ದಿದ್ದು, ಭಾರತ ತಂಡದ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ಕ್ರೀಡಾಂಗಣಗಳು ಪ್ರೇಕ್ಷಕರ ಕೊರತೆ ಎದುರಿಸುವ ಆತಂಕಕ್ಕೀಡಾಗಿದೆ. ಈಗಾಗಲೇ ಟೂರ್ನಿಗಾಗಿ ಸಾವಿರಾರು ಕೋಟಿ ರೂ ಸಾಲ ಮಾಡಿ ತನ್ನ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಿತ್ತು. ಇದೀಗ ಪಾಕಿಸ್ತಾನಕ್ಕೆ ಪ್ರೇಕ್ಷಕರ ಕೊರತೆ ಎದುರಾಗುತ್ತಿದ್ದು, ಪ್ರೇಕ್ಷಕರನ್ನೇ ನೆಚ್ಚಿಕೊಂಡು ಟೂರ್ನಿ ಆಯೋಜಿಸಿದ್ದ ಪಿಸಿಬಿಗೆ ಇದೀಗ ಗಂಭೀರ ಆರ್ಥಿಕ ಹೊರೆ ಎದುರಾಗುವ ಭೀತಿ ಎದುರಾಗಿದೆ.

ಪಾಕಿಸ್ತಾನ ತಂಡದ ಬ್ರಾಂಡ್ ನದ್ದೇ ಚಿಂತೆ

"ನಮಗೆ ಹೋಸ್ಟಿಂಗ್ ಶುಲ್ಕಗಳು, ಟಿಕೆಟ್ ಮಾರಾಟ ಸೇರಿದಂತೆ ಐಸಿಸಿ ಆದಾಯದಲ್ಲಿ ನಮ್ಮ ಪಾಲು ಖಾತರಿಪಡಿಸಲಾಗಿದೆ. ಆದರೆ ಮೆಗಾ ಈವೆಂಟ್‌ನಲ್ಲಿ ಜನರು ಆಸಕ್ತಿ ಕಳೆದುಕೊಳ್ಳುವುದು, ಪ್ರಸಾರಕರು ಅರ್ಧ ತುಂಬಿದ ಕ್ರೀಡಾಂಗಣಗಳನ್ನು ತೋರಿಸುವುದು ಇತ್ಯಾದಿ ಸಮಸ್ಯೆಗಳು ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಅದಕ್ಕಿಂತ ದೊಡ್ಡ ಚಿಂತೆಯೆಂದರೆ ಇಲ್ಲಿ ಕ್ರಿಕೆಟ್‌ನ ಮೇಲಿನ ಕ್ರೇಜ್ ಹೊರತಾಗಿಯೂ, ಭವಿಷ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಅನ್ನು ಬ್ರ್ಯಾಂಡ್ ಆಗಿ ಮಾರಾಟ ಮಾಡುವುದು ಸುಲಭವಲ್ಲ" ಎಂದು ಪಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪಿಸಿಬಿ ಅಧ್ಯಕ್ಷರು ಕೆಂಡಾಮಂಡಲ

ಇನ್ನು ಭಾರತ ವಿರುದ್ಧದ ಸೋಲಿನಿಂದ ಅಭಿಮಾನಿಗಳು ಮತ್ತು ವಿಮರ್ಶಕರು ಮಾತ್ರವಲ್ಲ.. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರೂ ಕೂಡ ತಂಡದ ವಿರುದ್ಧ ಕೆಂಡಾಮಂಡಲರಾಗಿದ್ದು, ಅವರು ಪಿಸಿಬಿಯ ಭವಿಷ್ಯದ ಯೋಜನೆಗಳಿಗೆ ಪೂರಕವಾಗಿ ನಿಲ್ಲುವ ಕುರಿತು ಪ್ರಶ್ನೆಗಳು ಏಳುತ್ತಿವೆ ಎನ್ನಲಾಗಿದೆ. ನಖ್ವಿ ವಿರುದ್ಧವೂ ಅಭಿಮಾನಿಗಳು ಕೆಂಡಕಾರುತ್ತಿದ್ದು, ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿನ ಕ್ರೀಡಾಂಗಣಗಳ ನವೀಕರಣದ ಮೇಲೆ ಮಾತ್ರ ಇದ್ದ ಗಮನವನ್ನು ಪಿಸಿಬಿ ಆಟಗಾರರ ಪ್ರದರ್ಶನ ಉತ್ತಮವಾಗಿಸುವತ್ತ ತೋರಿದ್ದರೆ ಪಾಕಿಸ್ತಾನಕ್ಕೆ ಇಂತಹಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಡದ ನಿರಾಶಾದಾಯಕ ಪ್ರದರ್ಶನದ ಹೊರತಾಗಿಯೂ, ಪಿಸಿಬಿ ತನ್ನ ಆತಿಥ್ಯವನ್ನು ಪ್ರದರ್ಶಿಸುವ ಮೂಲಕ ಮತ್ತು ಪ್ರವಾಸಿ ತಂಡಗಳು ಮತ್ತು ಅಧಿಕಾರಿಗಳಿಗೆ ಅತ್ಯುತ್ತಮ ಭದ್ರತಾ ವ್ಯವಸ್ಥೆಗಳು ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಯನ್ನು ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಲು ತನ್ನ ಕೈಲಾದಷ್ಟು ಪ್ರಯತ್ನಿಸಿದೆ. ಕ್ರೀಡಾಂಗಣಗಳನ್ನು ನವೀಕರಿಸಲು ಖರ್ಚು ಮಾಡಿದ ಸುಮಾರು 1.8 ಬಿಲಿಯನ್ ರೂಪಾಯಿಗಳು ಪಾಕಿಸ್ತಾನ ಕ್ರಿಕೆಟ್‌ಗೆ ಸಹಾಯ ಮಾಡುವ ವಿಷಯವಾಗಿದೆ. ಆದರೆ ಅಭಿಮಾನಿಗಳನ್ನು ತಂಡದೊಂದಿಗೆ ಸಂಪರ್ಕದಲ್ಲಿರಿಸಿಕೊಳ್ಳುವುದು ದೊಡ್ಡ ಸವಾಲು ಎಂದು ಮಾರ್ಕೆಟಿಂಗ್ ಜಾಹೀರಾತು ವೃತ್ತಿಪರ ತಹಿರ್ ರೆಜಾ ಹೇಳಿದ್ದಾರೆ.

"ಪಾಕಿಸ್ತಾನದಲ್ಲಿ ಕ್ರಿಕೆಟ್ ಅತ್ಯಂತ ಚಲಾವಣೆಯ ಕ್ರೀಡೆಯಾಗಿದೆ. ಆದರೆ ಅದು ಅಭಿಮಾನಿಗಳು, ಪ್ರಾಯೋಜಕರು, ಜಾಹೀರಾತುದಾರರು, ಪ್ರಸಾರಕರ ಆಸಕ್ತಿ ಮತ್ತು ಬಾಂಧವ್ಯ ಎಲ್ಲವೂ ಪ್ರದರ್ಶನಗಳಿಗೂ ಸಂಬಂಧಿಸಿದ್ದಾಗಿರುತ್ತದೆ. ಪಾಕಿಸ್ತಾನದಲ್ಲಿ ಪ್ರಾಯೋಜಕತ್ವಗಳು, ಜಾಹೀರಾತುಗಳು ಮತ್ತು ಅನುಮೋದನೆಗಳಿಗಾಗಿ ಒಟ್ಟಾರೆ ಬಜೆಟ್ ಈಗಾಗಲೇ ಸಾಕಷ್ಟು ಸೀಮಿತವಾಗಿದೆ, ಆದ್ದರಿಂದ ಕಂಪನಿಗಳು ತಮ್ಮ ಹೂಡಿಕೆಗಳಿಗೆ ಉತ್ತಮ ಮೌಲ್ಯವನ್ನು ಬಯಸುತ್ತವೆ ಎಂದು ಅವರು ಅವರು ಹೇಳಿದರು.

"ತಂಡವು ಪ್ರದರ್ಶನ ನೀಡದಿದ್ದರೆ, ಅದು ಕೂಡ ಚಾಂಪಿಯನ್ಸ್ ಟ್ಫೋಫಿಯಂತಹ ಉನ್ನತ ಮಟ್ಟದ ಈವೆಂಟ್‌ನಲ್ಲಿ, ಪ್ರಾಯೋಜಕರು ಸಂಗೀತ, ಮನರಂಜನೆ, ಇತರ ಕ್ರೀಡೆಗಳು ಮುಂತಾದ ಇತರ ಸಾರ್ವಜನಿಕ ಹಿತಾಸಕ್ತಿ ಕ್ಷೇತ್ರಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಲು ಹಿಂಜರಿಯುವುದಿಲ್ಲ." ಪಾಕಿಸ್ತಾನ ಸೂಪರ್ ಲೀಗ್‌ನ 10 ನೇ ಆವೃತ್ತಿ ಬರುತ್ತಿದ್ದಂತೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಕಳಪೆ ಪ್ರದರ್ಶನವು ಹಣದ ಮಾರುಕಟ್ಟೆಯ ಮೇಲೆ ಎಷ್ಟು ನಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ಈ ಕಾರ್ಯಕ್ರಮವು ತೋರಿಸುತ್ತದೆ ಎಂದು ತಾಹಿರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT