ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ಉತ್ತಮ ಆರಂಭ ಪಡೆದಿದ್ದು ಕೆಎಲ್ ರಾಹುಲ್ ಶತಕ ಸಿಡಸಿ ಔಟಾದರು. ಕೆಎಲ್ ರಾಹುಲ್ ಔಟ್ ಆದ ಬಳಿಕ ಬಂದ ರವೀಂದ್ರ ಜಡೇಜಾ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಲೀಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 387 ರನ್ ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತ ಪ್ರಸ್ತುತ 80 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 290 ರನ್ ಬಾರಿಸಿದ್ದು 97 ರನ್ ಗಳಿಂದ ಹಿಂದಿದೆ.
ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಸ್ಪಿನ್ನರ್ ಬಶೀರ್ ಅವರ 77.5 ಎಸೆತದಲ್ಲಿ ಜಡೇಜಾ ಜೋರಾಗಿ ಬಾರಿಸಿದ್ದು ನೇರವಾಗಿ ಬಶೀರ್ ಕಡೆ ಹೋಯಿತು. ಈ ವೇಳೆ ಕ್ಯಾಚ್ ಹಿಡಿಯಲು ಯತ್ನಿಸಿದ ಬಶೀರ್ ಕೈಗೆ ಗಾಯವಾಗಿದ್ದು ಬೆರಳುಗಳಿಂದ ರಕ್ತ ಸುರಿಯಲು ಆರಂಭಿಸಿತು. ಕೂಡಲೇ ಅವರು ಮೈದಾನದಿಂದ ಹೊರನಡೆದರು. ಪ್ರಸ್ತುತ ರವಿಂದ್ರ ಜಡೇಜಾ ಅಜೇಯ 27 ಮತ್ತು ನಿತೀಶ್ ಕುಮಾರ್ ಅಜೇಯ 13 ರನ್ ಗಳಿಸಿ ಆಡುತ್ತಿದ್ದಾರೆ.