ಬೆರಳಿನ ಗಾಯದಿಂದಾಗಿ ತೀವ್ರ ನೋವನ್ನು ಅನುಭವಿಸುತ್ತಿದ್ದರೂ, ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳ ನೀರಿಳಿಸಿದರು. ನಿಯಮಿತವಾಗಿ ಬೌಂಡರಿಗಳನ್ನು ಬಾರಿಸಿ ತಮ್ಮ 17ನೇ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು. ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನ 3ನೇ ದಿನದಂದು ಊಟದ ವಿರಾಮಕ್ಕೂ ಮುನ್ನ 66ನೇ ಓವರ್‌ನ ಮೂರನೇ ಎಸೆತದಲ್ಲಿ, ರಿಷಭ್ ಪಂತ್ ಅವರು ಆಫ್-ಸೈಡ್‌ನಲ್ಲಿ ಶೋಯೆಬ್ ಬಶೀರ್ ಅವರ ಎಸೆತವನ್ನು ಡಿಫೆಂಡ್ ಮಾಡಿದರು. ಕವರ್ ಪಾಯಿಂಟ್‌ನಲ್ಲಿ ಸ್ಟೋಕ್ಸ್ ಚೆಂಡನ್ನು ನಾನ್-ಸ್ಟ್ರೈಕರ್‌ನ ತುದಿಗೆ ಎಸೆದರು. ಆಗ ಪಂತ್ 74 ರನ್‌ಗಳಿಗೆ ಔಟಾದರು.
ಭಾರತದ ಮಾಜಿ ನಾಯಕ ಮತ್ತು ಕೋಚ್ ಅನಿಲ್ ಕುಂಬ್ಳೆ ಪಂತ್ ಅವರನ್ನು ಟೀಕಿಸಿದರು.
'ಆರಂಭದಲ್ಲಿ ರಿಷಭ್ ಪಂತ್ ರನ್‌ಗೆ ಕರೆ ನೀಡಿ ನಂತರ ರನ್ ಇಲ್ಲ ಎಂದು ಭಾವಿಸಿ ನಿಧಾನ ಮಾಡಿದರು ಎಂದು ನಾನು ಭಾವಿಸುತ್ತೇನೆ. ಅಷ್ಟೊತ್ತಿಗಾಗಲೇ ಕೆಎಲ್ ರಾಹುಲ್ ಮುಂದೆ ಚಲಿಸಿದ್ದರು. ರಿಷಭ್ ಪಂತ್ ಅವರ ಆರಂಭಿಕ ಹಿಂಜರಿಕೆಯು ಬಹುಶಃ ಅವರ ಪ್ರತಿಕ್ರಿಯೆಯನ್ನು ವಿಳಂಬಗೊಳಿಸಿತು. ನಂತರ ಕೆಎಲ್ ಗುರಿಯತ್ತ ಓಡುತ್ತಿದ್ದರಿಂದ ಅವರು ಟೇಕ್ ಆಫ್ ಮಾಡಬೇಕಾಯಿತು. ಇದು ಖಂಡಿತವಾಗಿಯೂ ಅನಗತ್ಯವಾಗಿತ್ತು. ಏಕೆಂದರೆ, ನೀವು ಮುಂದಿನ ಮೂರು ಎಸೆತಗಳನ್ನು ನಿರ್ಬಂಧಿಸಬಹುದಿತ್ತು ಮತ್ತು ಊಟಕ್ಕೆ ಹೋಗಬಹುದಿತ್ತು ಮತ್ತು ನಂತರ ನೀವು ಮಾಡಬೇಕಾದದ್ದನ್ನು ಮಾಡಬಹುದಿತ್ತು ಅಥವಾ ಆ ಮೊದಲ ಸೆಷನ್‌ನಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮಾಡಿದ ಉತ್ತಮ ಕೆಲಸವನ್ನು ಮುಂದುವರಿಸಬಹುದಿತ್ತು' ಎಂದು ಕುಂಬ್ಳೆ ಪ್ರಸಾರದಲ್ಲಿ ಹೇಳಿದರು.
'ಇದು ಬೇಕಾಗಿರಲಿಲ್ಲ. ಇಂಗ್ಲೆಂಡ್ ಇನಿಂಗ್ಸ್‌ನಲ್ಲಿ ಜೋ ರೂಟ್ ಅವರು ಶತಕ ಗಳಿಸಲು ಒಂದು ರಾತ್ರಿ ಕಾಯ್ದರು. ಅಂದು ಅವರು 99 ರನ್ ಗಳಿಸಿದ್ದರು. ಅವರು ತುಂಬಾ ಚೆನ್ನಾಗಿ ಆಡಿದ್ದರು; ಅದು ಅದ್ಭುತ ಜೊತೆಯಾಟವಾಗಿತ್ತು. ಇದು ಎರಡನೇ ಸೆಷನ್‌ಗೆ ಹೋಗುವ ಮೊದಲು ಇಂಗ್ಲೆಂಡ್‌ಗೆ ಸ್ವಲ್ಪ ಆತ್ಮವಿಶ್ವಾಸವನ್ನು ನೀಡಿತು' ಎಂದರು.
ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಬೆನ್ ಸ್ಟೋಕ್ಸ್ ಅವರ ಪ್ರಸೆನ್ಸ್ ಆಫ್ ಮೈಂಡ್ ಅನ್ನು ಶ್ಲಾಘಿಸಿದರು.
'ಸ್ಟೋಕ್ಸ್ ಅವರು ನಾನ್-ಸ್ಟ್ರೈಕರ್ ಕಡೆಗೆ ಬಾಲ್ ಎಸೆದದ್ದು ಅದ್ಭುತವಾಗಿತ್ತು. ಪಂತ್ ಆ ಕ್ಷಣದಲ್ಲಿ ಅಪಾಯಕಾರಿಯಾದ ವ್ಯಕ್ತಿಯಾಗಬಹುದೆಂದು ಅವರು ಅರ್ಥಮಾಡಿಕೊಂಡರು ಮತ್ತು ಅವರು ತಿರುಗಿ ಆ ಕಡೆಗೆ ಬಾಲ್ ಎಸೆದರು. ಅದು ಅದ್ಭುತ ಕ್ರಿಕೆಟ್ ಆಗಿತ್ತು. ಉತ್ತಮ ಪ್ರಸೆನ್ಸ್ ಆಪ್ ಮೈಂಡ್ ಆಗಿತ್ತು' ಎಂದರು.
ಭಾರತ ವಿಕೆಟ್ ಕಳೆದುಕೊಂಡ ನಂತರ ಇಂಗ್ಲೆಂಡ್ ತಂಡವು ಪಂದ್ಯದಲ್ಲಿ ಮತ್ತೆ ಪುಟಿದೇಳುವ ಅವಕಾಶವನ್ನು ಹೊಂದಿತು. ಆ ಅವಧಿಯಲ್ಲಿ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದಿದ್ದರೆ, ಇಂಗ್ಲೆಂಡ್‌ನ ನೈತಿಕ ಸ್ಥೈರ್ಯ ಕುಸಿಯುತ್ತಿತ್ತು. ಆದರೆ, ಆ ವಿಕೆಟ್ ಪತನದಿಂದಾಗಿ ಇಂಗ್ಲೆಂಡ್ ಮತ್ತೆ ಹೆಚ್ಚಿನ ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಿತು. ಭಾರತದ ಇನಿಂಗ್ಸ್ ಅನ್ನು ಬಲವಾಗಿಡಲು ಕೆಎಲ್ ರಾಹುಲ್ ಸ್ಥಿರವಾಗಿ ಬ್ಯಾಟಿಂಗ್ ಮುಂದುವರಿಸಬೇಕಾಗಿತ್ತು' ಎಂದು ಎಂದು ಸ್ಕೈ ಸ್ಪೋರ್ಟ್ಸ್ ಲೈವ್ ಕಾರ್ಯಕ್ರಮದಲ್ಲಿ ಶಾಸ್ತ್ರಿ ಹೇಳಿದರು.
ಪಂತ್ ಗಾಯಗೊಂಡಿರುವುದರಿಂದ, ಅವರ ಸ್ಥಾನಕ್ಕೆ ಧ್ರುವ್ ಜುರೆಲ್ ಅವರನ್ನು ವಿಕೆಟ್ ಕೀಪರ್ ಆಗಿ ನೇಮಿಸಲಾಗಿದೆ.