ಸುನೀಲ್ ಗವಾಸ್ಕರ್ 
ಕ್ರಿಕೆಟ್

England vs India: ಐಪಿಎಲ್‌ನಲ್ಲಿ ಇಂಗ್ಲೆಂಡ್ ಆಟಗಾರರು ಇಲ್ಲದಿರುವುದೇ ಈ ದ್ವೇಷಕ್ಕೆ ಕಾರಣ; ಸುನೀಲ್ ಗವಾಸ್ಕರ್ ಹೇಳಿದ್ದೇನು?

ಜಸ್ಪ್ರಿತ್ ಬುಮ್ರಾ ಅವರ ಮೂರನೇ ಎಸೆತವನ್ನು ಎದುರಿಸುವ ಮುನ್ನ ಕ್ರಾಲಿ ನಾಲ್ಕು ಬಾರಿ ಸಮಯ ವ್ಯರ್ಥ ಮಾಡಿದಾಗ ಕೋಪ ಭುಗಿಲೆದ್ದಿತು.

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಕೆಲವು ನಿಮಿಷ ಬಾಕಿ ಇರುವಾಗ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅವರು ಸಮಯ ವ್ಯರ್ಥ ಮಾಡಿದ್ದಕ್ಕೆ ಟೀಂ ಇಂಡಿಯಾದ ನಾಯಕ ಶುಭ್‌ಮನ್ ಗಿಲ್ ಕಿಡಿಕಾರಿದರು.

ಮೊದಲನೇ ಇನಿಂಗ್ಸ್ ಸಮಬಲ ಸಾಧಿಸಿದ ಬಳಿಕ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಮಾಡಲು ಮುಂದಾದಾಗ 3ನೇ ದಿನದಾಟ ಅಂತ್ಯಕ್ಕೆ 10 ನಿಮಿಷ ಬಾಕಿ ಇತ್ತು. ಆಗ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲು ಬಂದರು. ಈ ವೇಳೆ ಜ್ಯಾಕ್ ಕ್ರಾಲಿ ಮತ್ತು‌ ಬೆನ್ ಡಕೆಟ್ ಅವರು ಭಾರತೀಯ ಬೌಲರ್‌ಗಳು ಒಂದಕ್ಕಿಂತ ಹೆಚ್ಚು ಓವರ್ ಬೌಲ್ ಮಾಡಲು ಸಾಧ್ಯವಾಗದಂತೆ, ಸಮಯ ವ್ಯರ್ಥ ಮಾಡಲಾರಂಭಿಸಿದರು. ಇದರಿಂದ ಕೆರಳಿದ ಗಿಲ್‌, ಇಂಗ್ಲೆಂಡ್ ಬ್ಯಾಟರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಗಿಲ್ ಅವರು ಅವಾಚ್ಯ ಶಬ್ದಗಳಿಂದ ಕೂಡಿದ ದಾಳಿ ನಡೆಸಿದರು.

ಜಸ್ಪ್ರಿತ್ ಬುಮ್ರಾ ಅವರ ಮೂರನೇ ಎಸೆತವನ್ನು ಎದುರಿಸುವ ಮುನ್ನ ಕ್ರಾಲಿ ನಾಲ್ಕು ಬಾರಿ ಸಮಯ ವ್ಯರ್ಥ ಮಾಡಿದಾಗ ಕೋಪ ಭುಗಿಲೆದ್ದಿತು. ನಂತರ ಕ್ರಾಲಿ ಗ್ಲೌಸ್‌ಗೆ ಪೆಟ್ಟು ಬಿತ್ತು, ಆದ್ದರಿಂದ ಅವರು ತಮ್ಮ ಕೈಯನ್ನು ಪರಿಶೀಲಿಸಲು ಸ್ವಲ್ಪ ಸಮಯ ತೆಗೆದುಕೊಂಡರು ಮತ್ತು ಫಿಸಿಯೋ ಅವರನ್ನು ಕರೆದರು. ಗಿಲ್ ಬೆನ್ ಡಕೆಟ್ ಜೊತೆಯೂ ಬಿಸಿ ವಾಗ್ವಾದ ನಡೆಸಿದರು.

ಬುಮ್ರಾ ಎಸೆತದಲ್ಲಿ ಕ್ರಾಲಿ ಗಾಯಗೊಂಡರು. ಬಳಿಕ ಮೂರನೇ ದಿನದಾಟವನ್ನು ಕೊನೆಗೊಳಿಸಿದಾಗ ಗಿಲ್ ವ್ಯಂಗ್ಯವಾಗಿ ಚಪ್ಪಾಳೆ ತಟ್ಟಿ ಪೆವಿಲಿಯನ್ ಕಡೆಗೆ ಸನ್ನೆ ಮಾಡುತ್ತಿದ್ದಂತೆ ಪರಿಸ್ಥಿತಿ ಮತ್ತೆ ಬಿಸಿಯಾಗಲು ಪ್ರಾರಂಭಿಸಿತು.

ಐಪಿಎಲ್‌ನಲ್ಲಿ ಹೆಚ್ಚಿನ ಇಂಗ್ಲೆಂಡ್ ಆಟಗಾರರು ಇಲ್ಲದಿರುವುದೇ ಈ ದ್ವೇಷಕ್ಕೆ ಕಾರಣ ಎಂದು ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

'...ಇಂಗ್ಲೆಂಡ್ ಅದನ್ನೇ ಕೊನೆಯ ಓವರ್ ಮಾಡಲು ಬಯಸಿತ್ತು. ಭಾರತ ತಂಡ ಇದನ್ನು ಸ್ವಲ್ಪ ಆಟವಾಡುವ ಮನೋಭಾವ ಎಂದು ಭಾವಿಸಿದ್ದರು. ಬಹುಶಃ ಅದು ಆಗಿರಬಹುದು' ಎಂದು 3ನೇ ದಿನದ ಅಂತ್ಯದ ನಂತರ ಹೇಳಿದರು.

'ಇದು ಹೀಗಾಗಲು ಒಂದು ಕಾರಣವಿದೆ. ಐಪಿಎಲ್‌ನಲ್ಲಿ ಹೆಚ್ಚಿನ ಇಂಗ್ಲೆಂಡ್ ಆಟಗಾರರು ಸ್ಪರ್ಧಿಸುತ್ತಿಲ್ಲ ಎಂಬುದು ನನ್ನ ಆಲೋಚನೆ. ಈ ಇಂಗ್ಲೆಂಡ್ ತಂಡದಿಂದ ಜೋ ರೂಟ್ ಆಡಲಿಲ್ಲ, ಬೆನ್ ಸ್ಟೋಕ್ಸ್ ಆಡಲಿಲ್ಲ. ಇತರ ತಂಡಗಳ ಬಹಳಷ್ಟು ಆಟಗಾರರು ಐಪಿಎಲ್‌ನಲ್ಲಿದ್ದಾರೆ. ಅವರು ಭಾರತೀಯ ಆಟಗಾರರೊಂದಿಗೆ ಬೆರೆತಿದ್ದಾರೆ, ಅವರೊಂದಿಗೆ ಪ್ರಯಾಣಿಸಿದ್ದಾರೆ. ಅವರು ಡ್ರೆಸ್ಸಿಂಗ್ ರೂಂ ಅನ್ನು ಹಂಚಿಕೊಂಡಿದ್ದಾರೆ. ಇದನ್ನೇ ನಾನು ಹೇಳುತ್ತಲೇ ಇದ್ದೇನೆ. ಐಪಿಎಲ್‌ಗೆ ಮೊದಲು, ಕೆಲವು ಆಟಗಾರರ ನಡುವೆ ಸಾಕಷ್ಟು ದ್ವೇಷವಿತ್ತು. ಆರ್ಚರ್ ಯಶಸ್ವಿ ಜೈಸ್ವಾಲ್ ಅವರಿಗೆ ಬೌಲಿಂಗ್ ಮಾಡುವಾಗ ಆ ತೀವ್ರತೆ ಇನ್ನೂ ಇದೆ. ಐಪಿಎಲ್‌ನಲ್ಲಿ ಆಡದ ಕಾರಣ ಭಾರತ ಮತ್ತು ಇಂಗ್ಲೆಂಡ್ ಆಟಗಾರರ ನಡುವೆ ಸಾಕಷ್ಟು ಘರ್ಷಣೆ ಇದೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

ಕ್ವಾಡ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಯೋಜನೆ ಕೈ ಬಿಟ್ಟ ಟ್ರಂಪ್‌; ನ್ಯೂಯಾರ್ಕ್ ಟೈಮ್ಸ್ ವರದಿ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ರಾಜ್ಯದ ಜನತೆಗ ಮತ್ತೊಂದು ಶಾಕ್: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ; ನಾಳೆಯಿಂದಲೇ ಜಾರಿ

SCROLL FOR NEXT