ಒಲಿಂಪಿಕ್ಸ್ ಗೆ ಕ್ರಿಕೆಟ್ 
ಕ್ರಿಕೆಟ್

LA28: 128 ವರ್ಷಗಳ ಬಳಿಕ Olympics ಗೆ ಮರಳಿದ ಕ್ರಿಕೆಟ್, ವೇಳಾಪಟ್ಟಿ ಪ್ರಕಟ!

2028 ರ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಅಧಿಕೃತವಾಗಿ ಮರಳಿದ್ದು, ಕ್ರಿಕೆಟ್ ದಿನಾಂಕಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ನವದೆಹಲಿ: 128 ವರ್ಷಗಳ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಮರಳಿದ್ದು, 2028ರ ಕ್ರೀಡಾಕೂಟದಲ್ಲಿ ಕ್ರಿಕೆಟ್ ನ ವೇಳಾಪಟ್ಟಿ ಬಿಡುಗಡೆಯಾಗಿದೆ.

ಹೌದು.. 2028 ರ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಅಧಿಕೃತವಾಗಿ ಮರಳಿದ್ದು, ಕ್ರಿಕೆಟ್ ದಿನಾಂಕಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಈ ಹಿಂದೆ ಅಂದರೆ ಏಪ್ರಿಲ್‌ನಲ್ಲಿ ದೃಢಪಡಿಸಿದ ತಂಡಗಳ ಸಂಖ್ಯೆ ಮತ್ತು LA28 ಸ್ಥಳಗಳ ಘೋಷಣೆ ಮಾಡಲಾಗಿತ್ತು. ಇದೀಗ ವೇಳಾಪಟ್ಟಿ ಬಿಡುಗಡೆಯಾಗಿದೆ.

ಅದರಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) LA28 ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಿಗೆ T20 ಸ್ಪರ್ಧೆಗಳು ಜುಲೈ 12 ರಿಂದ ಜುಲೈ 29, 2028 ರವರೆಗೆ ನಡೆಯಲಿವೆ ಎಂದು ಘೋಷಿಸಿದೆ.

ಪದಕ ಪಂದ್ಯಗಳು ಕ್ರಮವಾಗಿ ಜುಲೈ 20 (ಮಹಿಳೆಯರು) ಮತ್ತು ಜುಲೈ 29 (ಪುರುಷರು) ರಂದು ನಡೆಯಲಿವೆ.

128 ವರ್ಷಗಳ ಬಳಿಕ ಮರಳಿದ ಕ್ರಿಕೆಟ್

ಈ ಘೋಷಣೆಯು ಕ್ರಿಕೆಟ್ ಕ್ರೀಡೆಗೆ ಮತ್ತೊಂದು ಹೆಗ್ಗುರುತಿನ ಕ್ಷಣವಾಗಿದ್ದು, ಇತಿಹಾಸದಲ್ಲಿ ಕ್ರಿಕೆಟ್ ಎರಡನೇ ಬಾರಿಗೆ ಒಲಿಂಪಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಹಿಂದೆ 1900 ರಲ್ಲಿ ಪ್ಯಾರಿಸ್‌ನಲ್ಲಿ ಪಾದಾರ್ಪಣೆ ಮಾಡಿದ್ದ ಕ್ರಿಕೆಟ್ ಕ್ರೀಡೆಯನ್ನು ಬಳಿಕ ಕೈಬಿಡಲಾಗಿತ್ತು. ಅಂದಿನ ಚೊಚ್ಚಲ ಟೂರ್ನಿಯಲ್ಲಿ ಫ್ರಾನ್ಸ್ ವಿರುದ್ಧದ ಏಕೈಕ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಗೆದ್ದು ಚಿನ್ನ ಪದಕಕ್ಕೆ ಭಾಜನವಾಗಿತ್ತು. ಇದಾದ 128 ವರ್ಷಗಳ ನಂತರ, ನಂತರ ಮತ್ತೆ ಕ್ರಿಕೆಟ್ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದೆ.

ನೂತನ ವೇಳಾಪಟ್ಟಿ

ಈ ನೂತನ ವೇಳಾಪಟ್ಟಿ ಅನ್ವಯ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ 6 ತಂಡಗಳು ಪ್ರಶಸ್ತಿಗೆ ಸ್ಪರ್ಧಿಸುತ್ತಿವೆ. ಪ್ರತಿ ಪಂದ್ಯಾವಳಿಗೆ 90 ಅಥ್ಲೀಟ್ ಕೋಟಾಗಳನ್ನು ನಿಗದಿಪಡಿಸಲಾಗಿದೆ, ಇದು ರಾಷ್ಟ್ರಗಳು 15 ಸದಸ್ಯರ ತಂಡಗಳನ್ನು ಹೆಸರಿಸಲು ಅನುವು ಮಾಡಿಕೊಡುತ್ತದೆ. ಎಲ್ಲಾ ಪಂದ್ಯಗಳನ್ನು ಲಾಸ್ ಏಂಜಲೀಸ್‌ನ ಡೌನ್‌ಟೌನ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಪೊಮೊನಾ ಫೇರ್‌ಪ್ಲೆಕ್ಸ್‌ ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಹೇಳಲಾಗಿದೆ.

ಈ ಪೈಕಿ ಅಂದರೆ ಈ ಮಾದರಿಯು ಹೆಚ್ಚಿನ ಪಂದ್ಯಗಳ ದಿನಗಳಲ್ಲಿ ಡಬಲ್-ಹೆಡರ್‌ಗಳನ್ನು ಒಳಗೊಂಡಿರುತ್ತದೆ. ಅಂದರೆ ಒಂದೇ ದಿನ ಒಂದಕ್ಕಿಂತ ಹೆಚ್ಚಿನ ಪಂದ್ಯಗಳು ಆಯೋಜನೆಯಾಗುತ್ತವೆ. ಪಂದ್ಯಗಳು ಸ್ಥಳೀಯ ಸಮಯ ಬೆಳಿಗ್ಗೆ 9:00 ಮತ್ತು ಸಂಜೆ 6:30 ಕ್ಕೆ ಪ್ರಾರಂಭವಾಗುತ್ತವೆ ಎಂದು ಹೇಳಲಾಗುತ್ತಿದೆ.

ಐಸಿಸಿ ಚರ್ಚೆ

LA28 ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವ ವಿಧಾನವನ್ನು ಇನ್ನೂ ದೃಢೀಕರಿಸಲಾಗಿಲ್ಲ, ಆದರೆ ಜುಲೈ 17 ರಂದು ಸಿಂಗಾಪುರದಲ್ಲಿ ಪ್ರಾರಂಭವಾಗುವ ICC ಯ ವಾರ್ಷಿಕ ಸಮ್ಮೇಳನದಲ್ಲಿ ಕುರಿತು ಚರ್ಚಿಸಲಾಗುವುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT