ಹರ್ಲೀನ್ ಡಿಯೋಲ್ ರನೌಟ್ ಆದ ಕ್ಷಣ 
ಕ್ರಿಕೆಟ್

INDW vs ENGW: ಭಾರತ ತಂಡ ಶುಭಾರಂಭ; ಹರ್ಲೀನ್ ಡಿಯೋಲ್ ವಿರುದ್ಧ ಕಿಡಿ

ಸೌತಾಂಪ್ಟನ್‌ನಲ್ಲಿ ಗುರುವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಬುಧವಾರ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಹರ್ಲೀನ್ ಡಿಯೋಲ್ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಕ್ಸ್ ಬಾರಿಸುವಂತೆ ಕಾಣುತ್ತಿದ್ದ ಡಿಯೋಲ್ ಅನಗತ್ಯವಾಗಿ ಔಟಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

22ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಹರ್ಲೀನ್ ಇನ್ನೊಂದು ತುದಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಜೊತೆ ಚಾರ್ಲಿ ಡೀನ್ ಅವರ ಬೌಲಿಂಗ್‌ನಲ್ಲಿ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ಡೇವಿಡ್ಸನ್ ರಿಚರ್ಡ್ಸ್ ಅವರ ನೇರ ಹೊಡೆತದ ಹೊರತಾಗಿಯೂ ಬ್ಯಾಟರ್ ಸುರಕ್ಷಿತವಾಗಿ ಕ್ರೀಸ್ ತಲುಪಿದಂತೆ ಕಾಣುತ್ತಿತ್ತು. ಆದರೆ, ಮೈದಾನದಲ್ಲಿರುವ ಅಂಪೈರ್ ರಿವ್ಯೂ ತೆಗೆದುಕೊಂಡಾಗ, ಡಿಯೋಲ್ ಅವರ ಪಾದಗಳು ಮತ್ತು ಬ್ಯಾಟ್ ನೆಲದಲ್ಲಿರಲಿಲ್ಲ. ಚೆಂಡು ಸ್ಟಂಪ್‌ಗೆ ಬಡಿಯುವಾಗ ಎರಡೂ ಗಾಳಿಯಲ್ಲಿತ್ತು ಎಂದು ತೋರಿಸಿದೆ. ಇದರಿಂದಾಗಿ ಅನಗತ್ಯವಾಗಿ ಔಟ್ ಆಗಿದ್ದಕ್ಕೆ ಟೀಕೆಗಳು ಕೇಳಿಬಂದಿವೆ.

ಸೌತಾಂಪ್ಟನ್‌ನಲ್ಲಿ ಗುರುವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸುವಲ್ಲಿ ದೀಪ್ತಿ ಶರ್ಮಾ ಅವರ ಅದ್ಭುತ ಅರ್ಧಶತಕ ಮತ್ತು ಆಲ್‌ರೌಂಡರ್ ಸ್ನೇಹ್ ರಾಣಾ ಅವರ ಉತ್ತಮ ಸ್ಪೆಲ್ ಪ್ರಮುಖ ಪಾತ್ರ ವಹಿಸಿತು.

ಈ ಗೆಲುವಿನೊಂದಿಗೆ, ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಕ್ರಾಂತಿ ಗೌಡ ಇಂಗ್ಲೆಂಡ್ ತಂಡವನ್ನು 20/2 ಕ್ಕೆ ಇಳಿಸಿದರು. ಆರಂಭಿಕ ಆಟಗಾರ್ತಿಯರಾದ ಟ್ಯಾಮಿ ಬ್ಯೂಮಾಂಟ್ (5) ಮತ್ತು ಆಮಿ ಜೋನ್ಸ್ (1) ಅವರನ್ನು ಔಟ್ ಮಾಡಿದರು.

ಎಮ್ಮಾ ಲ್ಯಾಂಬ್ (50 ಎಸೆತಗಳಲ್ಲಿ 39, ನಾಲ್ಕು ಬೌಂಡರಿ) ಮತ್ತು ನಾಯಕಿ ನ್ಯಾಟ್ ಸಿವರ್ ಬ್ರಂಟ್ (52 ಎಸೆತಗಳಲ್ಲಿ 41, ಐದು ಬೌಂಡರಿ) ನಡುವಿನ 71 ರನ್‌ಗಳ ಮೂರನೇ ವಿಕೆಟ್ ಜೊತೆಯಾಟ ಇಂಗ್ಲೆಂಡ್ ಸ್ಥಿರವಾಗಲು ಸಹಾಯ ಮಾಡಿತು. ನಂತರ ಸ್ಪಿನ್ನರ್ ಸ್ನೇಹಾ ರಾಣಾ ಇಬ್ಬರನ್ನೂ ಔಟ್ ಮಾಡಿ 20.1 ಓವರ್‌ಗಳಲ್ಲಿ 97/4 ಕ್ಕೆ ಇಳಿಸಿದರು.

ಅಂತಿಮವಾಗಿ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತು. ಭಾರತದ ಪರ ಸ್ನೇಹಾ ರಾಣಾ (2/31) ಮತ್ತು ಕ್ರಾಂತಿ ಗೌಡ (2/55) ತಲಾ ಎರಡು ವಿಕೆಟ್‌ಗಳನ್ನು ಪಡೆದರೆ, ಅಮನ್‌ಜೋತ್ ಕೌರ್ ಮತ್ತು ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದರು.

ಇಂಗ್ಲೆಂಡ್ ನೀಡಿದ 259 ರನ್ ಗಳ ಗುರಿ ಬೆನ್ನಟ್ಟುವ ವೇಳೆ, ಆರಂಭಿಕ ಆಟಗಾರ್ತಿಯರಾದ ಪ್ರತೀಕ ರಾವಲ್ ಮತ್ತು ಸ್ಮೃತಿ ಮಂಧಾನ (24 ಎಸೆತಗಳಲ್ಲಿ 28, ಐದು ಬೌಂಡರಿ) 48 ರನ್ ಗಳ ಜೊತೆಯಾಟದೊಂದಿಗೆ ಉತ್ತಮ ಆರಂಭ ನೀಡಿದರು.

ರಾವಲ್ (51 ಎಸೆತಗಳಲ್ಲಿ 36, ಮೂರು ಬೌಂಡರಿ) ಹರ್ಲೀನ್ ಡಿಯೋಲ್ (44 ಎಸೆತಗಳಲ್ಲಿ 27, ನಾಲ್ಕು ಬೌಂಡರಿ) ಅವರೊಂದಿಗೆ 46 ರನ್‌ಗಳ ಜೊತೆಯಾಟ ನಡೆಸಿದರು. ಆದರೆ, ಭಾರತವು ರಾವಲ್, ಡಿಯೋಲ್ ಮತ್ತು ನಾಯಕಿ ಹರ್ಮನ್ ಪ್ರೀತ್ (17) ಅವರ ವಿಕೆಟ್ ಅನ್ನು ಬೇಗ ಕಳೆದುಕೊಂಡಿತು. ಆಗ 27.1 ಓವರ್‌ಗಳಲ್ಲಿ 124/4 ಕ್ಕೆ ಇಳಿಯಿತು.

ಜೆಮಿಮಾ ರೊಡ್ರಿಗಸ್ (54 ಎಸೆತಗಳಲ್ಲಿ 48, ಐದು ಬೌಂಡರಿ) ಐದನೇ ವಿಕೆಟ್‌ಗೆ ದೀಪ್ತಿ ಶರ್ಮಾ ಅವರೊಂದಿಗೆ 87 ರನ್‌ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸಿದರು.

ಜೆಮಿಮಾ ಔಟಾದ ನಂತರ ರಿಚಾ ಘೋಷ್ ಅವರೂ ಬೇಗನೆ ಔಟಾದರೆ, ದೀಪ್ತಿ (64 ಎಸೆತಗಳಲ್ಲಿ 62*, ಮೂರು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ) ಮತ್ತು ಅಮನ್‌ಜೋತ್ ಕೌರ್ (14 ಎಸೆತಗಳಲ್ಲಿ 20*, ಮೂರು ಬೌಂಡರಿ) ಭಾರತಕ್ಕೆ 10 ಎಸೆತಗಳು ಬಾಕಿ ಇರುವಾಗಲೇ ನಾಲ್ಕು ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಚಾರ್ಲಿ ಡೀನ್ (2/52) ಇಂಗ್ಲೆಂಡ್‌ನ ಅಗ್ರ ಬೌಲರ್ ಆಗಿದ್ದರೆ, ಕೇಟ್ ಕ್ರಾಸ್, ಎಕಸ್ಟಲ್ ಮತ್ತು ಲಾರೆನ್ ಫೈಲರ್ ತಲಾ ಒಂದು ವಿಕೆಟ್ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT