ಹ್ಯಾರಿ ಬ್ರೂಕ್ 
ಕ್ರಿಕೆಟ್

'ಭಾರತ ಸ್ವಲ್ಪ ಆತಂಕಗೊಂಡಿತ್ತು...': 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಹ್ಯಾರಿ ಬ್ರೂಕ್ ಸ್ಫೋಟಕ ಹೇಳಿಕೆ

ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತದ ಆಟಗಾರರು ಮಾಡಿದ ಆ ನಿರ್ದಿಷ್ಟ ಕ್ರಿಯೆಯು ಇಂಗ್ಲೆಂಡ್ ಪರವಾಗಿ ಕೆಲಸ ಮಾಡಿತು ಎಂದು ಬ್ರೂಕ್ ಹೇಳಿದರು.

ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತೀಯ ಆಟಗಾರರೊಂದಿಗೆ ಮೈದಾನದಲ್ಲಿನ ಉದ್ವಿಗ್ನತೆಯು ಎದುರಾಳಿ ತಂಡಕ್ಕಿಂತ ನಮ್ಮ ತಂಡಕ್ಕೆ ಹೆಚ್ಚಾಗಿ ಸಹಾಯ ಮಾಡಿದೆ ಎಂದು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಹೇಳಿದ್ದಾರೆ. ಲಾರ್ಡ್ಸ್‌ನಲ್ಲಿ ಮೂರನೇ ದಿನದಾಟದ ಅಂತ್ಯದ ವೇಳೆಗೆ ಉದ್ದೇಶಪೂರ್ವಕವಾಗಿ ಟೈಂ ವೇಸ್ಟ್ ಮಾಡುತ್ತಿದ್ದ ಇಂಗ್ಲೆಂಡ್‌ ಆರಂಭಿಕ ಆಟಗಾರರಾದ ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ವಿರುದ್ಧ ಭಾರತೀಯ ಆಟಗಾರರು ಮುಗಿಬಿದ್ದಿದ್ದರು. ಆ ಸಮಯದಲ್ಲಿ ಬೌಲಿಂಗ್ ಮಾಡುತ್ತಿದ್ದ ಜಸ್ಪ್ರಿತ್ ಬುಮ್ರಾ, ವಿಳಂಬ ತಂತ್ರವನ್ನು ಬಳಸಿದ ಕ್ರಾಲಿಗೆ ವ್ಯಂಗ್ಯವಾಗಿ ಚಪ್ಪಾಳೆ ತಟ್ಟಿದರು.

'ಉಳಿದ ಎರಡು ಪಂದ್ಯಗಳಲ್ಲಿಯೂ ಹೆಚ್ಚಿನ ಉದ್ವಿಗ್ನತೆ ಇರುತ್ತದೆಯೇ? ನನಗೆ ಬಹಳಷ್ಟು ಅಭಿನಂದನೆಗಳು ಬಂದಿವೆ. ಎಲ್ಲರೂ ಇದನ್ನು ನೋಡಲು ಅದ್ಭುತವಾಗಿದೆ ಮತ್ತು ನಾವು ಫೀಲ್ಡಿಂಗ್ ಮಾಡುವಾಗ ಇಬ್ಬರ ವಿರುದ್ಧ 11 ಇದ್ದಂತೆ ಕಾಣುತ್ತಿತ್ತು ಎಂದು ಹೇಳಿದರು. ಇದು ಒಳ್ಳೆಯ ಮೋಜಿನ ಸಂಗತಿಯಾಗಿತ್ತು. ನಾನು ಒಪ್ಪಿಕೊಳ್ಳಲೇಬೇಕು, ಆಗ ದಣಿವುಂಟಾಗುತ್ತಿತ್ತು ಆದರೆ, ಇದು ಫೀಲ್ಡಿಂಗ್ ಅನ್ನು ಹೆಚ್ಚು ಆನಂದದಾಯಕವಾಗಿಸಿತು' ಎಂದು ಬ್ರೂಕ್ ಸೋಮವಾರ ಮ್ಯಾಂಚೆಸ್ಟರ್ ಟೆಸ್ಟ್‌ಗೆ ಮುಂಚಿತವಾಗಿ ಹೇಳಿದರು.

ಆದಾಗ್ಯೂ, ನಾವು ಗಡಿಗಳನ್ನು ದಾಟುವುದಿಲ್ಲ ಎಂದು ಬ್ರೂಕ್ ಹೇಳಿದರು.

'ಹೌದು, ಖಂಡಿತ. ನಾವು ಸಾಧ್ಯವಾದಷ್ಟು ಆಟದ ಉತ್ಸಾಹದಲ್ಲಿ ಆಡಲು ಪ್ರಯತ್ನಿಸುತ್ತೇವೆ. ಆ ರಾತ್ರಿ ಬುಮ್ರಾ ಕೊನೆ ಓವರ್ ಬೌಲಿಂಗ್ ಮಾಡಿದಾಗ ಆ ಹುಡುಗರು ಕ್ರೀಪ್ಸ್ ಮತ್ತು ಡಕಿ ಮೇಲೆ ಕಠಿಣವಾಗಿ ದಾಳಿ ಮಾಡಿದರು. ನಾವು ಅದನ್ನು ನೋಡಿದ್ದೇವೆ, ನಾವು ಮರು ಮೌಲ್ಯಮಾಪನ ಮಾಡಿದ್ದೇವೆ ಮತ್ತು ಅವರಿಗೆ ತಿರುಗೇಟು ನೀಡಲು ಇದು ಸರಿಯಾದ ಸಮಯ ಎಂದು ನಾವು ಭಾವಿಸಿದ್ದೇವೆ' ಎಂದರು.

ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಭಾರತದ ಆಟಗಾರರು ಮಾಡಿದ ಆ ನಿರ್ದಿಷ್ಟ ಕ್ರಿಯೆಯು ಇಂಗ್ಲೆಂಡ್ ಪರವಾಗಿ ಕೆಲಸ ಮಾಡಿತು ಎಂದು ಬ್ರೂಕ್ ಹೇಳಿದರು.

'ಹೌದು, ಅದು ಅವರನ್ನು ಸ್ವಲ್ಪ ಹೆಚ್ಚಿನ ಒತ್ತಡಕ್ಕೆ ಒಳಪಡಿಸಿತು ಎಂದು ನಾನು ಭಾವಿಸುತ್ತೇನೆ. ಕಡಿಮೆ ಸ್ಕೋರ್ ಅನ್ನು ಬೆನ್ನಟ್ಟುವ ಆದರೆ ಕಠಿಣ ಪಿಚ್‌ನಲ್ಲಿ, ಅದು ಅವರಿಗೆ ಸ್ವಲ್ಪ ಹೆಚ್ಚುವರಿ ಒತ್ತಡ ನೀಡಿರಬಹುದು ಮತ್ತು ಅದೃಷ್ಟವಶಾತ್ ಅವರು ಕುಸಿಯಲು ಪ್ರಾರಂಭಿಸಿದರು ಮತ್ತು ನಾವು ಪಂದ್ಯವನ್ನು ಗೆದ್ದಿದ್ದೇವೆ' ಎಂದು ಅವರು ಲಾರ್ಡ್ಸ್‌ನಲ್ಲಿ 22 ರನ್‌ಗಳ ಜಯವನ್ನು ಉಲ್ಲೇಖಿಸಿ ಹೇಳಿದರು. ಭಾರತವು ಕಠಿಣ ಪಿಚ್‌ನಲ್ಲಿ 193 ರನ್‌ಗಳನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು.

ಐದು ದಿನಗಳ ಕಾಲ ನಡೆದ ಮೂರು ಪಂದ್ಯಗಳ ನಂತರ ಇಂಗ್ಲೆಂಡ್ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದು, ಸರಣಿಯ ಅತ್ಯಂತ ಸ್ಪರ್ಧಾತ್ಮಕತೆ ಬಗ್ಗೆ ತನಗೆ ಸಂದೇಶಗಳು ಬರುತ್ತಿವೆ ಎಂದು ಬ್ರೂಕ್ ಹೇಳಿದರು.

'ಲಾರ್ಡ್ಸ್ ಟೆಸ್ಟ್ ಪಂದ್ಯವು ತಾವು ವೀಕ್ಷಿಸಿದ ಅತ್ಯುತ್ತಮ ಪಂದ್ಯಗಳಲ್ಲಿ ಒಂದು ಎಂದು ಎಲ್ಲರೂ ಹೇಳಿದರು. ಆದ್ದರಿಂದ, ಇದು ಅದ್ಭುತ ಸರಣಿಯಾಗಿದೆ ಮತ್ತು ಉಳಿದ ಪಂದ್ಯಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ. 11 vs 2 ಪಿಚ್‌ನಲ್ಲಿ, ಕ್ರಿಕೆಟ್ ಆಡುವುದು ಹೇಗೆಂದು ನೀವು ತಿಳಿಯುವುದೆಂದರೆ, ತಂಡವಾಗಿ ಆಡುವುದು, ಮಾತುಕತೆ ನಡೆಸುವುದು ಮತ್ತು ಎದುರಾಳಿಗಳನ್ನು ಹೇಗೆ ಔಠ್ ಮಾಡಬೇಕೆಂದು ಕಂಡುಹಿಡಿಯಲು ಪ್ರಯತ್ನಿಸುವುದಾಗಿದೆ' ಎಂದರು.

'ನೀವು ಯಾವಾಗಲೂ ಒಳ್ಳೆಯವರಾಗಿರಬೇಕಾಗಿಲ್ಲ. ಕಳೆದ ವಾರ ನಾವು ನೋಡಿದಂತೆ, ನಾವು ಸ್ವಲ್ಪ ಕಿರಿಕಿರಿ ಉಂಟುಮಾಡಲು ಪ್ರಯತ್ನಿಸಿದ್ದೇವೆ. ಯಾರಿಗೆ ಗೊತ್ತು, ಅದು ನಮ್ಮ ಪರವಾಗಿ ಕೆಲಸ ಮಾಡಿರಬಹುದು ಅಥವಾ ನಾವು ಚೆನ್ನಾಗಿ ಬೌಲಿಂಗ್ ಮಾಡಿರಬಹುದು. ವಿಭಿನ್ನ ಸಂದರ್ಭಗಳಲ್ಲಿ ಪಂದ್ಯಗಳನ್ನು ಗೆಲ್ಲುವುದು ತೃಪ್ತಿಕರವಾಗಿದೆ' ಎಂದು ಬ್ರೂಕ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ-ಅಮಿತ್ ಶಾರನ್ನೇ ಧೈರ್ಯವಾಗಿ ಎದುರಿಸಿ ಜೈಲಿಗೆ ಹೋಗಿ ಬಂದಿದ್ದೇನೆ; ನನ್ನನ್ನು ಹೆದರಿಸಲು ಬರಬೇಡಿ: ಡಿಕೆ ಶಿವಕುಮಾರ್

GOAT India Tour: ಹೈದರಾಬಾದಿನಲ್ಲಿ 'ಮೆಸ್ಸಿ' ಮೇನಿಯಾ; ಸಿಎಂ ರೇವಂತ್ ರೆಡ್ಡಿ ಜೊತೆಗೆ ಆಟವಾಡಿ ಪ್ರೇಕ್ಷಕರನ್ನು ರಂಜಿಸಿದ ಫುಟ್ಬಾಲ್ ದಂತಕಥೆ!

ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ: ಹಳದಿ ಲೋಹದ ಸುಲಭ ಖರೀದಿಗಾಗಿ ಮಧ್ಯಮ ವರ್ಗದವರಿಗೆ ಇಲ್ಲಿದೆ ಟಿಪ್ಸ್!

ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನನಲ್ಲ: ಡಿಕೆ ಶಿವಕುಮಾರ್ ಧಮ್ಕಿಗೆ ಮೋಹನ್‌ದಾಸ್ ಪೈ ಆಕ್ರೋಶ!

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ತಿರುವನಂತಪುರಂನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; ಶಶಿ ತರೂರ್ ಹೊಗಳಿದ್ದು ಯಾರನ್ನ?

SCROLL FOR NEXT