ಗಾಯಗೊಂಡು ಆ್ಯಂಬುಲೆನ್ಸ್‌ನಲ್ಲಿ ಮೈದಾನದಿಂದ ಹೊರನಡೆದ ರಿಷಭ್ ಪಂತ್ 
ಕ್ರಿಕೆಟ್

ಆರು ವಾರ ವಿಶ್ರಾಂತಿಗೆ ಸೂಚನೆ; ಟೆಸ್ಟ್ ಸರಣಿಯಿಂದ ರಿಷಭ್ ಪಂತ್ ಔಟ್, ಇಶಾನ್ ಕಿಶನ್ ತಂಡಕ್ಕೆ ಸೇರ್ಪಡೆ!

ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ರಿಷಭ್ ಪಂತ್ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದಾಗ ಚೆಂಡು ಅವರ ಬಡಿದಿತ್ತು. ಬಳಿಕ ಪಂತ್ ನೋವಿನಿಂದಲೇ ಮೈದಾನದಿಂದ ಆ್ಯಂಬುಲೆನ್ಸ್‌ನಲ್ಲಿ ಹೊರಗೆ ತೆರಳಿದರು.

ಭಾರತ ಕ್ರಿಕೆಟ್ ತಂಡದ ಉಪನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕಾಲ್ಬೆರಳಿನ ಮೂಳೆ ಮುರಿತದ ಬಳಿಕ ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಕ್ರಿಸ್ ವೋಕ್ಸ್ ಅವರ ಎಸೆತವು ಅವರ ಕಾಲಿಗೆ ಬಡಿದ ಕಾರಣ ರಕ್ತಸ್ರಾವ ಮತ್ತು ಊತ ಉಂಟಾಗಿದ್ದರಿಂದ ರಿಟೈರ್ಡ್ ಹರ್ಟ್ ಆಗಿ ಮೈದಾನದಿಂದ ಹೊರನಡೆದರು.

ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ರಿಷಭ್ ಪಂತ್ ಅವರ ಕಾಲ್ಬೆರಳಿನ ಮುರಿತದಿಂದಾಗಿ ಅವರಿಗೆ 6 ವಾರಗಳ ವಿಶ್ರಾಂತಿಗೆ ಸೂಚಿಸಲಾಗಿದೆ. ಬ್ಯಾಟ್ಸ್‌ಮನ್ ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದಾಗ ಚೆಂಡು ಅವರ ಬ್ಯಾಟ್‌ಗೆ ಬಡಿದು ನಂತರ ಕಾಲಿಗೆ ಅಪ್ಪಳಿಸಿತು. ಬಳಿಕ ಪಂತ್ ನೋವಿನಿಂದಲೇ ಮೈದಾನದಿಂದ ಆ್ಯಂಬುಲೆನ್ಸ್‌ನಲ್ಲಿ ಹೊರಗೆ ತೆರಳಿದರು.

'ಸ್ಕ್ಯಾನ್ ವರದಿಯಲ್ಲಿ ಮೂಳೆ ಮುರಿತ ಕಂಡುಬಂದಿದ್ದು, ಅವರಿಗೆ ಆರು ವಾರಗಳ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ. ನೋವು ನಿವಾರಕ ಔಷಧಿ ತೆಗೆದುಕೊಳ್ಳುವ ಮೂಲಕ ಅವರು ಮತ್ತೆ ಬ್ಯಾಟಿಂಗ್ ಮಾಡಲು ಬರಬಹುದೇ ಎಂಬುದರ ಕುರಿತು ವೈದ್ಯಕೀಯ ತಂಡ ಪ್ರಯತ್ನಿಸುತ್ತಿದೆ. ನಡೆಯಲು ಅವರಿಗೆ ಬೆಂಬಲ ಬೇಕಾಗಿದೆ ಮತ್ತು ಅವರ ಬ್ಯಾಟಿಂಗ್ ಸಾಧ್ಯತೆಗಳು ತುಂಬಾ ಕಡಿಮೆ' ಎಂದು ಬಿಸಿಸಿಐನ ಮೂಲವೊಂದು ತಿಳಿಸಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಿಂದ ಪಂತ್ ಹೊರಗುಳಿದಿರುವುದರಿಂದ ಭಾರತ ತಂಡವು ಬ್ಯಾಟಿಂಗ್‌ನಲ್ಲಿ ಹೊಡೆತ ಬಿದ್ದಂತಾಗುತ್ತದೆ. ನಾಲ್ಕನೇ ಟೆಸ್ಟ್‌ನಲ್ಲಿ ಅವರು ಬ್ಯಾಟಿಂಗ್ ಮಾಡಬಹುದೇ ಎಂದು ನೋಡಲು ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ನೋವು ನಿವಾರಕ ಇಂಜೆಕ್ಷನ್ ನೀಡಲು ಪ್ರಯತ್ನಿಸಲಿದೆ ಎಂದು ವರದಿ ಹೇಳುತ್ತದೆ. ಆದರೂ, ಆ ಸಾಧ್ಯತೆಗಳು ತೀರಾ ಕಡಿಮೆ. ಗಾಯಗೊಂಡು ರಿಟೈರ್ಡ್ ಹರ್ಟ್ ಆಗುವ ಮುನ್ನ ಪಂತ್ 48 ಎಸೆತಗಳಲ್ಲಿ 37 ರನ್ ಗಳಿಸುವಲ್ಲಿ ಯಶಸ್ವಿಯಾದರು. 5ನೇ ಟೆಸ್ಟ್‌ಗೆ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಯ್ಕೆದಾರರು ನೋಡುತ್ತಿದ್ದಾರೆ ಎಂದು ವರದಿಯಾಗಿದೆ.

ಭಾರತ ಈಗಾಗಲೇ ಬ್ಯಾಕ್-ಅಪ್ ಕೀಪರ್ ಅನ್ನು ಹೊಂದಿದ್ದು, ಲಾರ್ಡ್ಸ್‌ನಲ್ಲಿ ನಡೆದ IND vs ENG 3ನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆದ ಎಸೆತವನ್ನು ಬೌಂಡರಿಗೆ ಹೋಗದಂತೆ ತಡೆಯಲು ಪ್ರಯತ್ನಿಸುವಾಗ ಕೈಬೆರಳಿಗೆ ಗಾಯವಾದ ನಂತರ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಾತಿಗಣತಿ ಸಮೀಕ್ಷೆಗೆ ನಿತ್ಯವೂ ಸಮಸ್ಯೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಸಿಎಂ ಮುಂದು, ಇಂದು ಮಹತ್ವದ ಸಭೆ

Donald Trump ಸುಂಕ ಘೋಷಣೆ ಅ.1ರಿಂದ ಜಾರಿ: ಯಾವುದಕ್ಕೆ ಎಷ್ಟು ತೆರಿಗೆ? ಇಲ್ಲಿದೆ ಮಾಹಿತಿ...

ತಿಂಡಿ ತಿನ್ನಲು ಒಂದು ಗಂಟೆ ಸಮಯ ಬೇಕಿತ್ತು, ಆ ವೇಳೆ ಆತ್ಮಹತ್ಯೆ ಯೋಚನೆಯೂ ಬಂದಿತ್ತು: ನರಕಯಾತನೆ ಬಿಚ್ಚಿಟ್ಟ ಸಲ್ಮಾನ್ ಖಾನ್

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ: Sonam Wangchuk ಸಂಸ್ಥೆ ಪರವಾನಗಿ ರದ್ದುಪಡಿಸಿದ ಕೇಂದ್ರ ಸರ್ಕಾರ

ಮಾಲೀಕರು-ಬಾಡಿಗೆದಾರರ ನಡುವೆ ಘರ್ಷಣೆ ಹೆಚ್ಚಳ: ಬಾಡಿಗೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಅಸ್ತು!

SCROLL FOR NEXT