ಯುಜ್ವೇಂದ್ರ ಚಾಹಲ್ - ಆರ್‌ಜೆ ಮಹ್ವಾಶ್ 
ಕ್ರಿಕೆಟ್

'ಅವರು ನೋವಿನಲ್ಲೇ ಆಡಿದರು': ಯುಜ್ವೇಂದ್ರ ಚಾಹಲ್ ಬಗ್ಗೆ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ RJ ಮಹ್ವಾಶ್

ಪಿಬಿಕೆಎಸ್‌ನ ಲೀಗ್ ಹಂತದ ಪಂದ್ಯಗಳ ಅಂತ್ಯದ ವೇಳೆಗೆ, ಬೆರಳಿನ ಗಾಯದಿಂದಾಗಿ ಚಾಹಲ್ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದರು.

ಐಪಿಎಲ್ 2025ರಲ್ಲಿ ಪಂಜಾಬ್ ಕಿಂಗ್ಸ್ (PBKS) ಪರ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ಯುಜ್ವೇಂದ್ರ ಚಾಹಲ್ ಕೂಡ ಒಬ್ಬರು. ಹರಾಜಿನಲ್ಲಿ 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಚಾಹಲ್ ಆಡಿರುವ 13 ಇನಿಂಗ್ಸ್‌ಗಳಲ್ಲಿ ನಾಲ್ಕು ವಿಕೆಟ್ ಗೊಂಚಲು ಸೇರಿದಂತೆ ಒಟ್ಟು 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಪಿಬಿಕೆಎಸ್‌ನ ಲೀಗ್ ಹಂತದ ಪಂದ್ಯಗಳ ಅಂತ್ಯದ ವೇಳೆಗೆ, ಬೆರಳಿನ ಗಾಯದಿಂದಾಗಿ ಚಾಹಲ್ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದರು. ಮೇ 18 ರಂದು ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಪಂದ್ಯವನ್ನು ಆಡಿದ ನಂತರ, ಜೂನ್ 1 ರಂದು ಮುಂಬೈ ಇಂಡಿಯನ್ಸ್ (MI) ವಿರುದ್ಧದ ಐಪಿಎಲ್ 2025 ಕ್ವಾಲಿಫೈಯರ್ 2ನಲ್ಲಿ ಮತ್ತು ಫೈನಲ್ ಪಂದ್ಯದಲ್ಲಿ ಆಡಿದರು.

ಯುಜ್ವೇಂದ್ರ ಚಾಹಲ್ ಜೊತೆ ಆಗಾಗ್ಗೆ ಕಾಣಿಸಿಕೊಳ್ಳುವ ಆರ್‌ಜೆ ಮಹ್ವಾಶ್, ಐಪಿಎಲ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿಯೇ ಸ್ಟಾರ್ ಆಟಗಾರನ ಪಕ್ಕೆಲುಬುಗಳು ಮುರಿದಿದ್ದವು ಮತ್ತು ನಂತರ ಅವರ ಬೆರಳು ಮುರಿದಿತ್ತು' ಎಂದು ಬಹಿರಂಗಪಡಿಸಿದ್ದಾರೆ.

'ಗಾಯಗೊಂಡಿದ್ದರು ಕೂಡ ಅವರು ಕೊನೆಯ ಪಂದ್ಯದವರೆಗೂ ಹೋರಾಡಿದರು, ಪಂದ್ಯಾವಳಿಯಲ್ಲಿ ಉಳಿದರು ಮತ್ತು ಆಡಿದರು! ಮತ್ತು ಇದು ಯುಜ್ವೇಂದ್ರ ಚಾಹಲ್ ಅವರಿಗೆ ವಿಶೇಷ ಪೋಸ್ಟ್ ಆಗಿದೆ. ಏಕೆಂದರೆ, ಜನರಿಗೆ ತಿಳಿದಿಲ್ಲದ ವಿಷಯವೆಂದರೆ ಅವರ ಪಕ್ಕೆಲುಬುಗಳು ಎರಡನೇ ಪಂದ್ಯದ ವೇಳೆಯೇ ಮುರಿದಿದ್ದವು ಮತ್ತು ನಂತರ ಅವರ ಬೌಲಿಂಗ್ ಮಾಡುವ ಬೆರಳು ಮುರಿದಿತು. ಈ ವ್ಯಕ್ತಿ ಇಡೀ ಆವೃತ್ತಿಯಲ್ಲಿ 3 ಮುರಿತಗಳೊಂದಿಗೆ ಆಡಿದರು!' ಎಂದು ಆರ್‌ಜೆ ಮಹ್ವಾಶ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

'ನಾವೆಲ್ಲರೂ ಅವರುವ ನೋವಿನಿಂದ ಕಿರುಚುವುದು ಮತ್ತು ಅಳುವುದನ್ನು ನೋಡಿದ್ದೇವೆ. ಆದರೆ, ಅವರು ಎಂದಿಗೂ ಬಿಟ್ಟುಕೊಡುವುದನ್ನು ನೋಡಿಲ್ಲ! ನನ್ನ ಪ್ರಕಾರ, ನಿಮ್ಮಲ್ಲಿ ಎಂತಹ ಯೋಧನ ಮನೋಭಾವವಿದೆ?? ತಂಡವು ಕೊನೆಯ ಎಸೆತದವರೆಗೂ ಹೋರಾಡುತ್ತಲೇ ಇತ್ತು! ಈ ವರ್ಷ ಈ ತಂಡದ ಬೆಂಬಲಿಗರಾಗಿರುವುದು ಗೌರವವಲ್ಲದೆ ಬೇರೇನೂ ಅಲ್ಲ! ಚೆನ್ನಾಗಿ ಆಡಿದರು. ಈ ಚಿತ್ರಗಳಲ್ಲಿರುವ ಎಲ್ಲ ಜನರು ನನ್ನ ಹೃದಯವನ್ನು ಗೆದ್ದಿದ್ದಾರೆ. ಮುಂದಿನ ವರ್ಷ ನಿಮ್ಮನ್ನು ಭೇಟಿಯಾಗುತ್ತೇವೆ! ಅಲ್ಲದೆ, ಪ್ರಶಸ್ತಿ ಗೆದ್ದ ಆರ್‌ಸಿಬಿ ಮತ್ತು ಅಭಿಮಾನಿಗಳಿಗೆ ಅಭಿನಂದನೆಗಳು. ಎಲ್ಲರೂ ಚೆನ್ನಾಗಿ ಆಡಿದರು ಮತ್ತು ಶ್ರಮಿಸಿದರು! ಕ್ರಿಕೆಟ್ ಮತ್ತು ಐಪಿಎಲ್ .. ಮತ್ತೊಮ್ಮೆ ನನ್ನ ದೇವರು! ನಮಗೆ ನಿಜವಾಗಿಯೂ ಭಾರತೀಯರಿಗೆ ಹಬ್ಬ' ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT