ಸ್ಟೀವ್ ಸ್ಮಿತ್ ದಾಖಲೆ 
ಕ್ರಿಕೆಟ್

WTC Final 2025: 100 ವರ್ಷಗಳ ಹಳೆಯ ಐತಿಹಾಸಿಕ ದಾಖಲೆ ಮುರಿದ Steve Smith; Warren Bardsley ಯಾರು ಗೊತ್ತಾ?

ಹಾಲಿ ಲಂಡನ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ಮಿತ್ ಈ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.

ಲಂಡನ್: ಆಧುನಿಕ ಕ್ರಿಕೆಟ್ ಶ್ರೇಷ್ಠ ಬ್ಯಾಟರ್ ಗಳಲ್ಲಿ ಒಬ್ಬರು ಎಂದೇ ಖ್ಯಾತಿ ಗಳಿಸಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (Steve Smith) 100 ವರ್ಷಗಳ ಹಳೆಯ ಐತಿಹಾಸಿಕ ದಾಖಲೆಯೊಂದನ್ನು ಮುರಿದಿದ್ದಾರೆ.

ಹೌದು.. ಹಾಲಿ ಲಂಡನ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ಮಿತ್ ಈ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.

ಕ್ರಿಕೆಟ್ ನ ಎಲ್ಲ ಮಾದರಿಗಳಲ್ಲಿ ಅತ್ಯಂತ ಕಠಿಣ ಮಾದರಿ ಮತ್ತು ದೀರ್ಘ ಸ್ವರೂಪದ ಆಟ ಎಂದೇ ಹೇಳಲಾಗುವ ಟೆಸ್ಟ್ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾದ ಬಲಗೈ ಬ್ಯಾಟರ್ ಸ್ಟೀವ್ ಸ್ಮಿತ್ ಈ ಸಾಧನೆ ಮಾಡಿದ್ದಾರೆ.

ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ರಿಟೀಷೇತರ ಆಟಗಾರ ಎಂಬ ಕೀರ್ತಿಗೆ ಭಾಜನವಾಗುವ ಮೂಲಕ ಸ್ಮಿತ್ ಮತ್ತೊಮ್ಮೆ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

100 ವರ್ಷಗಳ ದಾಖಲೆ ಪತನ

ಇನ್ನು ಸ್ಮಿತ್ ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ 112 ಎಸೆತಗಳಲ್ಲಿ 10 ಬೌಂಡರಿ ಸಹಿತ 66 ರನ್ ಗಳಿಸಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ತಮ್ಮ ಟೆಸ್ಟ್ ರನ್ ಗಳಿಕೆಯನ್ನು 591ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಈ ಕ್ರೀಡಾಂಗಣದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮೊದಲ ಬ್ರಿಟೀಷೇತರ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದು ಅಲ್ಲದೆ 100 ವರ್ಷಗಳ ಹಿಂದೆ ಇದೇ ದಾಖಲೆ ನಿರ್ಮಿಸಿದ್ದ ವಾರೆನ್ ಬಾರ್ಡ್ಸ್ಲಿ ಅವರ ಐತಿಹಾಸಿಕ ದಾಖಲೆಯನ್ನು ಮುರಿದರು.

ಈ ಪಟ್ಟಿಯಲ್ಲಿ ಸ್ಮಿತ್ ಮತ್ತು ವಾರೆನ್ ಬಾರ್ಡ್ಸ್ಲೇ ಹೊರತು ಪಡಿಸಿ ಮತ್ತೋರ್ವ ಬ್ರಿಟೀಷೇತರ ಆಟಗಾರ ಇದ್ದು ಅದು ವಿಂಡೀಸ್ ನ ದೈತ್ಯ ಆಟಗಾರ ಸರ್ ಗಾರ್ಫೀಲ್ಡ್ ಸೋಬರ್ಸ್... ಇವರು ಲಾರ್ಡ್ಸ್ ಮೈದಾನದಲ್ಲಿ 571 ರನ್ ಕಲೆಹಾಕಿದ್ದಾರೆ. ಆಸ್ಟ್ರೇಲಿಯಾದ ವಾರೆನ್ ಬಾರ್ಡ್ಸ್ಲಿ 575 ರನ್ ಕಲೆಹಾಕಿದ್ದರು.

ಇಷ್ಟಕ್ಕೂ ಯಾರು ಗೊತ್ತಾ Warren Bardsley?

ವಾರೆನ್ ಬಾರ್ಡ್ಸ್ಲಿ ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್ ಆಗಿದ್ದರು, ಅವರು 1909-1926 ರವರೆಗೆ ಆಸಿಸ್ ತಂಡದಲ್ಲಿ ಸಕ್ರಿಯರಾಗಿದ್ದರು. ಅವರು ತಂಡಕ್ಕಾಗಿ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದರು. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ, ಬಾರ್ಡ್ಸ್ಲಿ 41 ಟೆಸ್ಟ್ ಪಂದ್ಯಗಳನಾಡಿದ್ದು, 40.47 ರ ಸರಾಸರಿಯಲ್ಲಿ 2,469 ರನ್ ಗಳಿಸಿದ್ದಾರೆ. ಈ ಪೈಕಿ 6 ಶತಕಗಳು ಮತ್ತು 14 ಅರ್ಧಶತಕಗಳನ್ನು ಸಹ ಗಳಿಸಿದ್ದರು.

ಇಂದು WTC ಫೈನಲ್ ಪಂದ್ಯ ನಡೆಯುತ್ತಿರುವ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಇದೇ ಬಾರ್ಡ್ಸ್ಲಿ 575 ರನ್ ಕಲೆಹಾಕಿದ್ದರು. ಆ ಮೂಲಕ ಲಾರ್ಡ್ಸ್ ನಲ್ಲಿ ಅತೀ ರನ್ ಕಲೆಹಾಕಿದ ಬ್ರಿಟೇಷತರ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ಆದರೆ ಈ ದಾಖಲೆಯನ್ನು ಕಳೆದ 100 ವರ್ಷಗಳಿಂದ ಯಾರೂ ಮುರಿದಿರಲಿಲ್ಲ. ಇದೀಗ ಸ್ಟೀವ್ ಸ್ಮಿತ್ ಈ ದಾಖಲೆಯನ್ನು ಹಿಂದಿಕ್ಕಿ ಐತಿಹಾಸಿಕ ಸಾಧನೆಗೈದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi: ಕೆಂಪು ಕೋಟೆ ಬಳಿ ಕಾರಿನಲ್ಲಿ ಸ್ಫೋಟ; ಕನಿಷ್ಠ 9 ಸಾವು, 20 ಜನರಿಗೆ ಗಾಯ; ದೆಹಲಿಯಲ್ಲಿ ಹೈ ಅಲರ್ಟ್; Video

Delhi ಸ್ಫೋಟ: ತನಿಖೆಗೆ ಕೈಜೋಡಿಸುವಂತೆ NIA, NSGಗೆ ಅಮಿತ್ ಶಾ ಆದೇಶ; ಕಾರು ಮಾಲೀಕ ವಶಕ್ಕೆ

Delhi ಕೆಂಪುಕೋಟೆ ಬಳಿ ಕಾರು ಸ್ಫೋಟ; ಬೆಂಗಳೂರಿನಲ್ಲೂ ತೀವ್ರ ಕಟ್ಟೆಚ್ಚರ; ಗಸ್ತು, ತಪಾಸಣೆ ಹೆಚ್ಚಿಸಲು ಸೂಚನೆ

Delhi Blast: ಬೆಳಗ್ಗೆ ಸ್ಫೋಟಕ ವಶ, ಸಂಜೆ ಭಾರೀ ಸ್ಫೋಟ; 'ದೊಡ್ಡ ಪಿತೂರಿ' ಬಗ್ಗೆ ಉತ್ತರಿಸುವಂತೆ ಕೇಂದ್ರಕ್ಕೆ ಕೇಜ್ರಿವಾಲ್ ಆಗ್ರಹ

Delhi ಕಾರು ಸ್ಫೋಟದ ಬಗ್ಗೆ ಅಮಿತ್ ಶಾ ಜೊತೆ ಪ್ರಧಾನಿ ಮೋದಿ ಚರ್ಚೆ

SCROLL FOR NEXT