ಯಶಸ್ವಿ ಜೈಸ್ವಾಲ್ ಶತಕ 
ಕ್ರಿಕೆಟ್

England vs India, 1st Test: ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ; Elite club ಸೇರಿದ Yashasvi Jaiswal!

ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸಿದ ಯಶಸ್ವಿ ಜೈಸ್ವಾಲ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲೇ ಶತಕ ಸಿಡಿಸುವ ಮೂಲಕ ಭಾರತ ತಂಡದ ಯಶಸ್ವಿ ಜೈಸ್ವಾಲ್ ಅಪರೂಪದ ದಾಖಲೆ ನಿರ್ಮಿಸಿ Elite club ಸೇರಿದ್ದಾರೆ.

ಹೌದು.. ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸಿದ ಯಶಸ್ವಿ ಜೈಸ್ವಾಲ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೈಸ್ವಾಲ್ 159 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 16 ಬೌಂಡರಿಗಳ ನೆರವಿನಿಂದ 101 ರನ್ ಚಚ್ಚಿದರು.

ಭಾರತ ಶುಭಾರಂಭ

ಇನ್ನು ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್ ಗೆ 91 ರನ್ ಗಳ ಅಮೋಘ ಜೊತೆಯಾಟವಾಡಿತು. ಈ ಹಂತದಲ್ಲಿ 42 ರನ್ ಗಳಿಸಿದ್ದ ರಾಹುಲ್ ಬ್ರೈಡನ್ ಕಾರ್ಸೆ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಸಾಯಿ ಸುದರ್ಶನ್ ಡಕೌಟ್ ಆಗಿ ಪದಾರ್ಪಣೆ ಪಂದ್ಯದಲ್ಲೇ ಶೂನ್ಯ ಸಾಧನೆ ಮಾಡಿದರು.

ಸಾಯಿ ಸುದರ್ಶನ್ ಔಟಾದರೂ ನಾಯಕ ಶುಭ್ ಮನ್ ಗಿಲ್ ಜೊತೆಗೂಡಿದ ಜೈಸ್ವಾಲ್ ತಮ್ಮ ಸಾಮಾನ್ಯ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿದರು. ಜೈಸ್ವಾಲ್ ಗೆ ಉತ್ತಮ ಸಾಥ್ ನೀಡಿದ ಗಿಲ್ ಕೂಡ ಅರ್ಧಶತಕ ಸಿಡಿಸಿದರು. ಈ ಹಂತದಲ್ಲಿ ಜೈಸ್ವಾಲ್ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಅವರ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 5ನೇ ಶತಕವಾಗಿದೆ. ಬಳಿಕ 101 ರನ್ ಗಳಿಸಿದ್ದ ಜೈಸ್ವಾಲ್ ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ಔಟಾದರು.

Elite club ಸೇರಿದ ಜೈಸ್ವಾಲ್

ಇನ್ನು ಈ ಪಂದ್ಯ ಮೊದಲ ಇನ್ನಿಂಗ್ಸ್ ಶತಕ ಮೂಲಕ ಜೈಸ್ವಾಲ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದು, ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ 5ನೇ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ 1952ರಲ್ಲಿ ಇದೇ ಹೆಡಿಂಗ್ಲೆ ಮೈದಾನದಲ್ಲಿ ವಿಜಯ್ ಮಂಜ್ರೇಕರ್ (133) ಇಂಗ್ಲೆಂಡ್ ನೆಲದಲ್ಲಿ ತಾವಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಇದಾದ ಬಳಿಕ 1982ರಲ್ಲಿ ಸಂದೀಪ್ ಪಾಟೀಲ್ (ಅಜೇಯ 129 ರನ್), 1996ರಲ್ಲಿ ಸೌರವ್ ಗಂಗೂಲಿ (131 ರನ್) ಮತ್ತು 2014ರಲ್ಲಿ ಮುರಳಿ ವಿಜಯ್ (146 ರನ್) ಇಂಗ್ಲೆಂಡ್ ನೆಲದಲ್ಲಿ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು. ಇದೀಗ ಈ ಅಪರೂಪದ ಪಟ್ಟಿಗೆ ಯಶಸ್ವಿ ಜೈಸ್ವಾಲ್ ಸೇರಿದ್ದಾರೆ.

Hundreds for India in maiden Test innings in England

  • 133 Vijay Manjrekar Headingley 1952

  • 129*Sandeep Patil Old Trafford 1982

  • 131 Sourav Ganguly Lord's 1996

  • 146 M Vijay Trent Bridge 2014

  • 101 Yashasvi Jaiswal Headingley 2025

ಹ್ಯಾಟ್ರಿಕ್ ಶತಕ

ಇನ್ನು ಯಶಸ್ವಿ ಜೈಸ್ವಾಲ್ ಈ ಸಾಧನೆಯನ್ನು ಈ ಹಿಂದೆ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನೆಲದಲ್ಲೂ ಮಾಡಿದ್ದರು. ವಿಂಡೀಸ್ ಪ್ರವಾಸದಲ್ಲೂ ಜೈಸ್ವಾಲ್ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಬಳಿಕ ಆಸ್ಟ್ರೇಲಿಯಾದಲ್ಲೂ ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು. ಇದೀಗ ಮೂರನೇ ಬಾರಿಗೆ ಇಂಗ್ಲೆಂಡ್ ನೆಲದಲ್ಲೂ ಶತಕ ಸಾಧನೆ ಮಾಡಿದ್ದಾರೆ.

  • - A Test hundred in West Indies in his first Test.

  • - A Test hundred in Australia in his first Test.

  • - A Test hundred in England in his first Test.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT