ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಇಂದಿನ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಪಂದ್ಯ ವಿಶೇಷ ದಾಖಲೆಯೊಂದಕ್ಕೆ ಪಾತ್ರವಾಗಿದ್ದು, ಉಭಯ ತಂಡಗಳ ಬೌಲರ್ ಗಳು ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ಹೌದು.. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 249ರನ್ ಕಲೆಹಾಕಿ ನ್ಯೂಜಿಲೆಂಡ್ ಗೆ ಗೆಲ್ಲಲು 250ರನ್ ಗುರಿ ನೀಡಿತ್ತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ 45.3 ಓವರ್ ನಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 44 ರನ್ ಗಳ ಅಂತರದಲ್ಲಿ ಪಂದ್ಯ ಸೋತಿತು.
ಇಂಡೋ-ಕಿವೀಸ್ ಬೌಲರ್ ಗಳ ವಿಶೇಷ ದಾಖಲೆ!
ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ 8 ಓವರ್ ಎಸೆದ ಮ್ಯಾಟ್ ಹೆನ್ರಿ 42 ರನ್ 5 ವಿಕೆಟ್ ಕಬಳಿಸಿದರೆ, ಭಾರತದ ಪರ ವರುಣ್ ಚಕ್ರವರ್ತಿ ಕೂಡ 10 ಓವರ್ ಎಸೆದು 42 ರನ್ ನೀಡಿ 5 ವಿಕೆಟ್ ಪಡೆದರು. ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಉಭಯ ತಂಡಗಳ ಬೌಲರ್ ಗಳು ತಲಾ 5 ವಿಕೆಟ್ ಗಳ ಗೊಂಚಲು ಸಾಧಿಸಿರುವುದು ಇದೇ ಮೊದಲು.
ಅಂತೆಯೇ ಚಾಂಪಿಯನ್ಸ್ ಟ್ರೋಫಿಯ ಒಂದೇ ಪಂದ್ಯದಲ್ಲಿ ಎರಡು ಬಾರಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ನಿದರ್ಶನ ಕೂಡ ಇದಾಗಿದೆ.