ವರುಣ್ ಚಕ್ರವರ್ತಿ 
ಕ್ರಿಕೆಟ್

Champions Trophy 2025: Varun Chakaravarthy ಐತಿಹಾಸಿಕ ದಾಖಲೆ; 9 ವಿಕೆಟ್ ಸ್ಪಿನ್ನರ್ ಗಳ ಪಾಲು, Shami ರೆಕಾರ್ಡ್ ಉಡೀಸ್!

ನ್ಯೂಜಿಲೆಂಡ್ ನ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಗಿದ್ದು ವಿಶೇಷ. ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2, ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಆ ಮೂಲಕ ನ್ಯೂಜಿಲೆಂಡ್ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಯಿತು.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಮಹಮದ್ ಶಮಿ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.

ಹೌದು.. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 249ರನ್ ಕಲೆಹಾಕಿ ನ್ಯೂಜಿಲೆಂಡ್ ಗೆ ಗೆಲ್ಲಲು 250ರನ್ ಗುರಿ ನೀಡಿತ್ತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ 45.3 ಓವರ್ ನಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು.

ಆ ಮೂಲಕ 44 ರನ್ ಗಳ ಅಂತರದಲ್ಲಿ ಪಂದ್ಯ ಸೋತಿತು. ನ್ಯೂಜಿಲೆಂಡ್ ಸೋಲಿನಲ್ಲಿ ಭಾರತದ ವರುಣ್ ಚಕ್ರವರ್ತಿ ನಿರ್ಣಾಯಕ ಪಾತ್ರ ನಿರ್ವಹಿಸಿದರು. ಆರಂಭದಿಂದಲೂ ತಮ್ಮ ಮಿಸ್ಟ್ರಿ ಸ್ಪಿನ್ ಬೌಲಿಂಗ್ ಮೂಲಕ ಕಿವೀಸ್ ಆಟಗಾರರನ್ನು ಕಾಡಿದ ವರುಣ್ ಚಕ್ರವರ್ತಿ ನಿಯಮಿತವಾಗಿ ವಿಕೆಟ್ ಪಡೆಯುತ್ತಾ ಸಾಗಿದರು. ತಮ್ಮ ಪಾಲಿನ 10 ಓವರ್ ಪೂರ್ಣಗೊಳಿಸಿದ ವರುಣ್ ಚಕ್ರವರ್ತಿ 4.20 ಸರಾಸರಿಯಲ್ಲಿ 42 ರನ್ ನೀಡಿ 5 ವಿಕೆಟ್ ಪಡೆದರು.

ನ್ಯೂಜಿಲೆಂಡ್ 9 ವಿಕೆಟ್ ಸ್ಪಿನ್ನರ್ ಗಳ ಪಾಲು

ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಗಿದ್ದು ವಿಶೇಷ. ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2, ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದರು. ಆ ಮೂಲಕ ನ್ಯೂಜಿಲೆಂಡ್ 9 ವಿಕೆಟ್ ಸ್ಪಿನ್ನರ್ ಗಳ ಪಾಲಾಯಿತು.

Nine wickets by India's spinners is the most by spinners in an innings in Champions Trophy bettering eight by Pakistan against Kenya in Edgbaston in 2004.

ವರುಣ್ ಚಕ್ರವರ್ತಿ ಐತಿಹಾಸಿಕ ದಾಖಲೆ

ವರುಣ್ ಚಕ್ರವರ್ತಿ ತಮ್ಮ ಎರಡನೇ ಏಕದಿನ ಪಂದ್ಯದಲ್ಲೇ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದು, ಇದು ಏಕದಿನ ವೃತ್ತಿಜೀವನದಲ್ಲಿ ಅವರು ಗಳಿಸಿದ ಮೊದಲ ಐದು ವಿಕೆಟ್ ಗೊಂಚಲು ಆಗಿದೆ. ಇದಕ್ಕೂ ಮೊದಲು ಸ್ಟುವರ್ಟ್ ಬಿನ್ನಿ 2014 ರಲ್ಲಿ ಮಿರ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 4 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಅಲ್ಲದೆ ಅಂದಿನ ಕಡಿಮೆ ಮೊತ್ತದ ಹೊರತಾಗಿಯೂ ಭಾರತ ಡಕ್ವರ್ತ್ ಲೂಯಿಸ್ ನಿಯಮದನ್ವಯ 47ರನ್ ಅಂತರದಲ್ಲಿ ಜಯಭೇರಿ ಭಾರಿಸಿತ್ತು.

Varun Chakaravarthy has picked a five-fer in his second ODI - the earliest by an Indian bowler in his ODI career. The previous earliest was Stuart Binny who picked 6/4 against Bangladesh in Mirpur in 2014 in his third ODI.

ಪದಾರ್ಪಣೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ

ಇನ್ನು ವರುಣ್ ಚಕ್ರವರ್ತಿ ಈ ಪಂದ್ಯದಲ್ಲಿ 42 ರನ್ ನೀಡಿ 5 ವಿಕೆಟ್ ಪಡೆದರು. ಆ ಮೂಲಕ ತಮ್ಮ ಪದಾರ್ಪಣೆ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ 2ನೇ ಬೌಲರ್ ಎಂಬ ಕೀರ್ತಿಗೆ ವರುಣ್ ಚಕ್ರವರ್ತಿ ಭಾಜನರಾಗಿದ್ದಾರೆ. ಇದಕ್ಕೂ ಮೊದಲು 2017ರಲ್ಲಿ ಆಸ್ಟ್ರೇಲಿಯಾದ ಜೋಶ್ ಹೇಜಲ್ ವುಡ್ 52ರನ್ ಗೆ 6 ವಿಕೆಟ್ ಕಬಳಿಸಿದ್ದರು. ಇದೇ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಶಮಿ 53 ರನ್ ಗೆ 5 ವಿಕೆಟ್ ಪಡೆದಿದ್ದರು.

Best figures on Champions Trophy debut

  • 6/52 Josh Hazlewood vs NZ Edgbaston 2017

  • 5/42 Varun Chakaravarthy vs NZ Dubai 2025

  • 5/53 Mohd Shami vs Ban Dubai 2025

ಭಾರತದ 2ನೇ ಆಟಗಾರ

ಇನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಬೌಲಿಂದ್ ಪ್ರದರ್ಶನ ನೀಡಿದ ಭಾರತದ ಆಟಗಾರರ ಪಟ್ಟಿಯಲ್ಲಿ ವರುಣ್ ಚಕ್ರವರ್ತಿ 2ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಇದ್ದು, ಅವರು 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 36ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ನಂತರದ 2ನೇ ಸ್ಥಾನದಲ್ಲಿ ಇದೀಗ ವರುಣ್ ಚಕ್ರವರ್ತಿ ಇದ್ದು , ಈ ಹಿಂದೆ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಮಹಮದ್ ಶಮಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಶಮಿ ಹಾಲಿ ಚಾಂಪಿಯನ್ಸ್ ಟ್ರೋಫಿಯ ಬಾಂಗ್ಲಾದೇಶ ವಿರುದ್ಧ ಶಮಿ 53 ರನ್ ಗೆ 5 ವಿಕೆಟ್ ಪಡೆದು ಈ ಪಟ್ಟಿಗೆ ಸೇರ್ಪಡೆಯಾಗಿದ್ದರು.

Best figures for India in Champions Trophy

  • 5/36 Ravindra Jadeja vs WI The Oval 2013

  • 5/42 Varun Chakravarthy vs NZ Dubai 2025

  • 5/53 Mohd Shami vs Ban Dubai 2025

  • 4/38 Sachin Tendulkar vs Aus Dhaka 1998

  • 4/45 Zaheer Khan vs Zim Colombo RPS 2002

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT