ದುಬೈ ನಲ್ಲಿ ಚಾಂಪಿಯನ್ಸ್ ಟ್ರೋಫಿಯ ಭಾರತ-ನ್ಯೂಜಿಲ್ಯಾಂಡ್ ಪಂದ್ಯ ನಡೆಯುತ್ತಿದ್ದು, ಪಾಕ್ ವಿರುದ್ಧ ಶತಕ ದಾಖಲಿಸಿ 3 ವಿಶ್ವದಾಖಲೆ ನಿರ್ಮಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 11 ರನ್ ಗಳಿಸಿ ಔಟ್ ಆಗಿದ್ದಾರೆ. ಆದರೂ ಸಹ ವಿರಾಟ್ ಕೊಹ್ಲಿ ಹೊಸ ದಾಖಲೆಗೆ ತಮ್ಮ ಹೆಸರು ಸೇರಿಸಿದ್ದಾರೆ. ವಿರಾಟ್ ಕೊಹ್ಲಿ ಈ ದಾಖಲೆ ನಿರ್ಮಿಸಿರುವ 7ನೇ ಭಾರತೀಯ ಕ್ರಿಕೆಟ್ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಇಂದಿನ ಪಂದ್ಯದ ದಾಖಲೆಯ ಮೂಲಕ ಕೊಹ್ಲಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್ ಸಾಲಿಗೆ ಸೇರ್ಪಡೆಯಾಗಿದ್ದಾರೆ.
ಎಲ್ಲಾ ಮಾದರಿಗಳಲ್ಲಿ ಟೀಮ್ ಇಂಡಿಯಾ ಪರ ಅಸ್ಥಿರ ಪ್ರದರ್ಶನ ನೀಡಿದ ನಂತರ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಪ್ರವೇಶಿಸಿದರು. ಟೂರ್ನಿಯ ಭಾರತದ ಮೊದಲ ಪಂದ್ಯದಲ್ಲಿ, ಬಾಂಗ್ಲಾದೇಶ ವಿರುದ್ಧ ರಿಷದ್ ಹೊಸೈನ್ 22 ರನ್ ಗಳಿಸಿ ಔಟಾದರು. ಆದಾಗ್ಯೂ, ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ ಕೊಹ್ಲಿ ಶತಕ ದಾಖಲಿಸುವ ಮೂಲಕ ಬ್ಯಾಟಿಂಗ್ ಲಯ ಕಂಡುಕೊಂಡರು.
ಈ ಪಂದ್ಯದ ವೇಳೆ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 14,000 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದರು. ಭಾರತ-ನ್ಯೂಜಿಲ್ಯಾಂಡ್ ಪಂದ್ಯ ವಿರಾಟ್ ಕೊಹ್ಲಿಗೆ 300ನೇ ಒಡಿಐ ಪಂದ್ಯವಾಗಿದ್ದು, 300 ರ ಲೆಜೆಂಡರಿ ಕ್ಲಬ್ ಪ್ರವೇಶಿಸಿದ್ದಾರೆ.
ಸಚಿನ್ ತೆಂಡೂಲ್ಕರ್ - 463 ಪಂದ್ಯಗಳು, 18,426 ರನ್ ಗಳು
ಎಂಎಸ್ ಧೋನಿ - 347 ಪಂದ್ಯಗಳು, 10,599 ರನ್ ಗಳು
ರಾಹುಲ್ ದ್ರಾವಿಡ್ - 340 ಪಂದ್ಯಗಳು, 10,768 ರನ್ ಗಳು
ಮೊಹಮ್ಮದ್ ಅಜರುದ್ದೀನ್ - 334 ಪಂದ್ಯಗಳು, 9,378 ರನ್ ಗಳು
ಸೌರವ್ ಗಂಗೂಲಿ - 308 ಪಂದ್ಯಗಳು, 11,221 ರನ್
ಯುವರಾಜ್ ಸಿಂಗ್ - 301 ಪಂದ್ಯಗಳು, 8,609 ರನ್
ವಿರಾಟ್ ಕೊಹ್ಲಿ - 300* ಪಂದ್ಯಗಳು, 14,085 ರನ್