'ಹೌದು, ನಾನು ಜೀವಂತವಾಗಿದ್ದೇನೆ': ಅಮೆರಿಕದ ರಾಯಭಾರಿಯೊಂದಿಗಿರುವ ಹೊಸ ವಿಡಿಯೋ ಹಂಚಿಕೊಂಡ ಇಸ್ರೇಲ್ ಪ್ರಧಾನಿ!

ಮಂಗಳವಾರ ಬಿಡುಗಡೆಯಾದ ಇತ್ತೀಚಿನ ವಿಡಿಯೋದಲ್ಲಿ, ನೆತನ್ಯಾಹು ಹಕಬೀ ಅವರೊಂದಿಗೆ ನಡೆದುಕೊಂಡು ಮಾತನಾಡುತ್ತಿರುವುದು ಕಂಡುಬರುತ್ತದೆ.
Mike Huckabee - Benjamin Netanyahu
ಅಮೆರಿಕದ ರಾಯಭಾರಿ ಮೈಕ್ ಹಕಬೀ- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Updated on

ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಬಾರಿ ಅಮೆರಿಕದ ರಾಯಭಾರಿ ಮೈಕ್ ಹಕಬೀ ಅವರೊಂದಿಗಿರುವ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದು, ಇರಾನ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ತಾವು ಸತ್ತಿದ್ದೇನೆ ಎಂಬ ವದಂತಿ ಸುಳ್ಳು ಎಂದಿದ್ದಾರೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಾವಿಗೀಡಾಗಿದ್ದಾರೆ ಎಂದು ಕಳೆದ ವಾರದಿಂದಲೂ ಊಹಾಪೋಹಗಳು ಕೇಳಿಬರುತ್ತಿವೆ. ಬಳಿಕ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ರಿಲೀಸ್ ಮಾಡಲಾಗಿದ್ದ ವಿಡಿಯೋದಲ್ಲಿ ಅವರ ಕೈಯಲ್ಲಿ ಆರು ಬೆರಳುಗಳು ಕಂಡುಬಂದಿದ್ದು, ಇದು ವದಂತಿಗಳಿಗೆ ಇಂಬು ನೀಡಿದಂತಾಗಿತ್ತು. ಮತ್ತೊಂದು ವಿಡಿಯೋವನ್ನು ಸಹ ನಕಲಿ ಎಂದು ಹೇಳಲಾಗಿತ್ತು. ಈ ಬೆನ್ನಲ್ಲೇ ಅವರು ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮಂಗಳವಾರ ಬಿಡುಗಡೆಯಾದ ಇತ್ತೀಚಿನ ವಿಡಿಯೋದಲ್ಲಿ, ನೆತನ್ಯಾಹು ಹಕಬೀ ಅವರೊಂದಿಗೆ ನಡೆದುಕೊಂಡು ಮಾತನಾಡುತ್ತಿರುವುದು ಕಂಡುಬರುತ್ತದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲಿ ನಾಯಕನನ್ನು ವೈಯಕ್ತಿಕವಾಗಿ ಭೇಟಿಯಾಗುವಂತೆ ತನ್ನನ್ನು ಕಳುಹಿಸಿದ್ದಾರೆ ಎಂದು ಹಕಬೀ ಹೇಳುತ್ತಾರೆ.

ಹಕಬೀ: 'ಮಾನ್ಯ ಪ್ರಧಾನ ಮಂತ್ರಿಗಳೇ, ನೀವು ಚೆನ್ನಾಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷರು ನನಗೆ ಸೂಚಿಸಿದರು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ'.

ನೆತನ್ಯಾಹು: 'ಹೌದು, ಮೈಕ್. ನಾನು ಜೀವಂತವಾಗಿದ್ದೇನೆ'.

ಹಕಬೀ: 'ನಾನು ಅದನ್ನು ಪರಿಶೀಲಿಸಿದೆ ಮತ್ತು ನಿಮ್ಮನ್ನು ನೋಡಿ ನನಗೆ ಸಂತೋಷವಾಯಿತು. ಆದರೆ, ಅವರು ಅದನ್ನು ಖಚಿತಪಡಿಸಿಕೊಳ್ಳಲು ಬಯಸಿದರು. ಏಕೆಂದರೆ, ನಿಮಗೆ ತಿಳಿದಿದೆ, ನೀವಿಬ್ಬರೂ ತುಂಬಾ ಆತ್ಮೀಯರಾಗಿದ್ದೀರಿ'.

ಸಂಭಾಷಣೆಯ ಸಮಯದಲ್ಲಿ, ನೆತನ್ಯಾಹು ಹಿರಿಯ ಇರಾನಿನ ನಾಯಕರಾದ ಅಲಿ ಲಾರಿಜಾನಿ ಮತ್ತು ಬಸಿಜ್ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಅವರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಸ್ರೇಲಿ ದಾಳಿಗಳನ್ನು ಉಲ್ಲೇಖಿಸುತ್ತಾರೆ. 'ನನಗೆ ಗೊತ್ತು ಮತ್ತು ನಾವು ಪ್ರತಿ ಕೈಯಲ್ಲಿ ಐದು ಬೆರಳುಗಳೊಂದಿಗೆ ಹಸ್ತಲಾಘವ ಮಾಡುತ್ತೇವೆ ಎಂದು ನಿಮಗೆ ತಿಳಿದಿದೆ. ಆದರೆ, ನಾನು ನಿಮಗೆ ಹೇಳಲೇಬೇಕು, ನಾನು ಜೀವಂತವಾಗಿದ್ದೇನೆ. ಆದರೆ, ನನ್ನ ಬಳಿ ಈ ಕಾರ್ಡ್ ಇದೆ. ಇದು ಪಂಚ್ ಕಾರ್ಡ್. ಇಂದು, ನಾನು ಪಂಚ್ ಕಾರ್ಡ್‌ಗಳಲ್ಲಿ ಎರಡು ಹೆಸರುಗಳನ್ನು ಅಳಿಸಿಹಾಕಿದೆ ಮತ್ತು ಈ ಬ್ಯಾಚ್‌ನಲ್ಲಿ ಇನ್ನೂ ಎಷ್ಟು ಹೆಸರುಗಳು ಅಳಿಸಿಹೊಗುತ್ತವೆ ಎಂದು ನೀವು ನೋಡುತ್ತೀರಿ'.

ಹಕಬೀ: 'ಒಳ್ಳೆಯ ಸುದ್ದಿ ಏನೆಂದು ನಿಮಗೆ ಗೊತ್ತಾ? ನನ್ನ ಹೆಸರು ಪಂಚ್ ಕಾರ್ಡ್‌ನಲ್ಲಿಲ್ಲ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸುತ್ತಾರೆ.

ನೆತನ್ಯಾಹು: 'ನಿಮ್ಮ ಹೆಸರು ಒಳ್ಳೆಯ ವ್ಯಕ್ತಿಗಳ ಪಟ್ಟಿಯಲ್ಲಿದೆ. ಮತ್ತು ಅಧ್ಯಕ್ಷರು ಮತ್ತು ಯುಎಸ್ ಪಡೆಗಳು ಮಾಡುತ್ತಿರುವುದು ಅದ್ಭುತವಾಗಿದೆ. ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ನಾವು ತುಂಬಾ ಹೆಮ್ಮೆಪಡುತ್ತೇವೆ. `ಪರಮಾಣು ಶಸ್ತ್ರಾಸ್ತ್ರಗಳನ್ನು ಬಯಸುವ ಮತ್ತು ಇಸ್ರೇಲ್ ಮತ್ತು ಅಮೆರಿಕಕ್ಕೆ ಬೆದರಿಕೆಯನ್ನುಂಟುಮಾಡುವ ಅಪಾಯಕಾರಿ ಗುಂಪನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದ್ದೇವೆ ಮತ್ತು ನಾವು ಆ ಬೆದರಿಕೆಯನ್ನು ಸಕ್ರಿಯವಾಗಿ ನಾಶಪಡಿಸುತ್ತಿದ್ದೇವೆ'.

Mike Huckabee - Benjamin Netanyahu
ಸಾವಿನ ವದಂತಿಗಳ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಡಿಯೋ ರಿಲೀಸ್; ಇದು 'ಡೀಪ್‌ಫೇಕ್' ಎಂದ Grok!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com