ಅಂಪೈರ್ ಜೊತೆ ಕೊಹ್ಲಿ ಕೀಟಲೆ 
ಕ್ರಿಕೆಟ್

Champions Trophy Offbeat: 'ಸಾರ್ ಬನ್ನಿ.. ಕ್ಯಾಚ್.. ಕ್ಯಾಚ್ ಆಡಣ'; ಅಂಪೈರ್ ಜೊತೆ Virat kolhi ಕೀಟಲೆ, Video!

ಕ್ರಿಕೆಟಿಗ ವಿರಾಟ್ ಕೊಹ್ಲಿ ಮೈದಾನದಲ್ಲಿ ಎಷ್ಟು ಅಗ್ರೆಸಿವ್ ಆಟಗಾರನೋ ಹಾಗೆಯೇ ಮೈದಾನದಲ್ಲಿ ಆತನಷ್ಟು ಕೀಟಲೆ ಮಾಡಿ ಪ್ರೇಕ್ಷಕರನ್ನು ನಕ್ಕು ನಗಿಸುವ ಆಟಗಾರ ಮತ್ತೊಬ್ಬನಿಲ್ಲ..

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೀಟಲೆ ಪ್ರವೃತ್ತಿ ಮುಂದುವರೆದಿದ್ದು, ಈ ಬಾರಿ ನೇರವಾಗಿ ಅಂಪೈರ್ ರೊಂದಿಗೇ ಕೊಹ್ಲಿ ತಮಾಷೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಹೌದು.. ಕ್ರಿಕೆಟಿಗ ವಿರಾಟ್ ಕೊಹ್ಲಿ ಮೈದಾನದಲ್ಲಿ ಎಷ್ಟು ಅಗ್ರೆಸಿವ್ ಆಟಗಾರನೋ ಹಾಗೆಯೇ ಮೈದಾನದಲ್ಲಿ ಆತನಷ್ಟು ಕೀಟಲೆ ಮಾಡಿ ಪ್ರೇಕ್ಷಕರನ್ನು ನಕ್ಕು ನಗಿಸುವ ಆಟಗಾರ ಮತ್ತೊಬ್ಬನಿಲ್ಲ.. ಈ ಹಿಂದೆ ಭಾರತ ತಂಡದ ಆಟಗಾರರನ್ನು ಮಿಮಿಕ್ರಿ ಮಾಡಿ ಪ್ರೇಕ್ಷಕರನ್ನು ನಗುಲಿನ ಅಲೆಯಲ್ಲಿ ತೇರಿಸಿದ್ದ ಕೊಹ್ಲಿ ಈ ಬಾರಿ ನೇರವಾಗಿ ಫೀಲ್ಡ್ ಅಂಪೈರ್ ರೊಂದಿಗೇ ಕೀಟಲೆ ಮಾಡಿ ಪ್ರೇಕ್ಷಕರನ್ನು ನಗಿಸಿದ್ದಾರೆ.

ಆಸ್ಟ್ರೇಲಿಯಾದ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದ್ದು, ಆಸ್ಟ್ರೇಲಿಯಾ ತಂಡ ಉತ್ತಮ ಬ್ಯಾಟಿಂಗ್ ಮಾಡುತ್ತಿತ್ತು. ಸ್ಮಿತ್ ಉತ್ತಮ ಲಯದಲ್ಲಿದ್ದರು. ಈ ವೇಳೆ ಇಡೀ ಮೈದಾನ ಕೊಂಚ ಗಂಭೀರವಾಗಿತ್ತು.. ಇದೇ ಸಂದರ್ಭದಲ್ಲಿ ಕೊಹ್ಲಿ ಫೀಲ್ಡಿಂಗ್ ಮಾಡುವ ವೇಳೆ ಅಂಪೈರ್ ಕೈಯಲ್ಲಿದ್ದ ಚೆಂಡನ್ನು ಕೇಳಿದ್ದಾರೆ. ಆಗ ಅಂಪೈರ್ ಚೆಂಡನ್ನು ಕೊಹ್ಲಿಯತ್ತ ಎಸೆದಿದ್ದು, ಆಗ ಕೊಹ್ಲಿ ಕ್ಯಾಚ್ ಪ್ರಾಕ್ಟೀಸ್ ಮಾಡೋಣ ಎಂದು ಮತ್ತೆ ಅಂಪೈರ್ ರತ್ತ ಚೆಂಡನ್ನು ಎಸೆದಿದ್ದಾರೆ.

ಈ ವೇಳೆ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ನಗೆ ಅಲೆಯಲ್ಲಿ ತೇಲಿದರು. ಅಂಪೈರ್ ಕೂಡ ನಗುತ್ತಲೇ ಇದು ಅಂತಾರಾಷ್ಟ್ರೀಯ ಪಂದ್ಯ ಹಾಗೆಲ್ಲ ಮಾಡುವ ಹಾಗಿಲ್ಲ ಎಂಬಂತೆ ನಕ್ಕು ಪಂದ್ಯ ಮುಂದುವರೆಸಿದರು. ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ