ಭಾರತ ತಂಡ ಮತ್ತು ರೋಹಿತ್ ಶರ್ಮಾ 
ಕ್ರಿಕೆಟ್

Champions Trophy 2025: ಭಾರತದ 97 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು; Rohit Sharma ಏನ್ ಧೈರ್ಯ ಗುರು!

ಆಸ್ಟ್ರೇಲಿಯಾದಂತಹ ದೈತ್ಯ ತಂಡದ ಎದುರು ಗೆಲುವು ಸಾಧಿಸಬೇಕು ಎಂದರೆ ತಂಡದ ಎಲ್ಲ ವಿಭಾಗಗಳೂ ಬಲಿಷ್ಠವಾಗಿರಬೇಕು. ಈ ನಿಟ್ಟಿನಲ್ಲಿ ಭಾರತದ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಬಲಿಷ್ಟವಾಗಿಯೇ ಇತ್ತು. ಆದರೆ..

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ದೈತ್ಯ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿ ಫೈನಲ್ ಗೇರಿದೆ. ಆದರೆ ಭಾರತದ ಈ ಮಹತ್ತರ ಗೆಲುವಿನ ಹಿಂದೆ ತಂಡದ ನಾಯಕ ರೋಹಿತ್ ಶರ್ಮಾ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ.

ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ 4 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಟೂರ್ನಿಯ ಫೈನಲ್ ಗೇರಿದೆ.

ಈ ಪಂದ್ಯದ ಗೆಲುವಿಗೆ ಹಲವು ಕಾರಣಗಳಿದ್ದು ಭಾರತೀಯ ಬೌಲರ್ ಗಳ ಸಾಂಘಿಕ ಪ್ರದರ್ಶನ ಮತ್ತು ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ಸ್ಫೋಟಕ ಬ್ಯಾಟಿಂಗ್ ತಂಡದ ಗೆಲುವಿಗೆ ಕಾರಣವಾಯಿತು. ಇದರ ಜೊತೆ ಜೊತೆಗೆ ತಂಡದ ಸಾರಥಿ ರೋಹಿತ್ ಶರ್ಮಾ ಹೆಣೆದ ಗೇಮ್ ಪ್ಲಾನ್ ಕೂಡ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿತ್ತು.

ಏಕೈಕ ವೇಗಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ

ಆಸ್ಟ್ರೇಲಿಯಾದಂತಹ ದೈತ್ಯ ತಂಡದ ಎದುರು ಗೆಲುವು ಸಾಧಿಸಬೇಕು ಎಂದರೆ ತಂಡದ ಎಲ್ಲ ವಿಭಾಗಗಳೂ ಬಲಿಷ್ಠವಾಗಿರಬೇಕು. ಈ ನಿಟ್ಟಿನಲ್ಲಿ ಭಾರತದ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಬಲಿಷ್ಟವಾಗಿಯೇ ಇತ್ತು. ಆದರೆ ಇಲ್ಲಿ ಚರ್ಚೆಗೆ ಬರುವುದು ಭಾರತದ ಬೌಲಿಂಗ್ ಲೈನ್ ಅಪ್.. ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಕೇವಲ ಒಬ್ಬೇ ಒಬ್ಬ ವೇಗದ ಬೌಲರ್ ನೊಂದಿಗೆ ಕಣಕ್ಕಿಳಿದಿತ್ತು. ಅದು ಮಹಮದ್ ಶಮಿ ಮಾತ್ರ.. ಉಳಿದಂತೆ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಬೌಲಿಂಗ್ ಮಾಡಬಲ್ಲರು. ಇನ್ನು ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ ಸ್ಪಿನ್ನರ್ ಗಳಾಗಿದ್ದಾರೆ.

97 ವರ್ಷಗಳಲ್ಲಿ ಇದೇ ಮೊದಲು

ಭಾರತವು ಒಬ್ಬನೇ ವೇಗಿಯೊಂದಿಗೆ ಐಸಿಸಿ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದು, 97 ವರ್ಷಗಳ ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು. 97 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಐಸಿಸಿ ಈವೆಂಟ್‌ನ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಭಾರತವು ಇಂತಹ ಸಂಯೋಜನೆಯನ್ನು ಮೈದಾನಕ್ಕಿಳಿಸಿದ್ದು ಇದೇ ಮೊದಲು ಎನ್ನಲಾಗಿದೆ. ಅಂತೆಯೇ ವಿಶೇಷವಾಗಿ ಐಸಿಸಿ ಏಕದಿನ ಸೆಮಿಫೈನಲ್ ಅಥವಾ ಫೈನಲ್‌ಗಳ ಬಗ್ಗೆ ಹೇಳುವುದಾದರೆ, ಒಂದು ತಂಡವು ಒಬ್ಬರಿಗಿಂತ ಹೆಚ್ಚು ವೇಗಿಗಳನ್ನು ಆಡಿಸದೇ ಇರುವುದು ಇದು ನಾಲ್ಕನೇ ನಿದರ್ಶನವಾಗಿದೆ.

ದಕ್ಷಿಣ ಆಫ್ರಿಕಾ ಮೊದಲ ತಂಡ, 4ನೇ ಉದಾಹರಣೆ

ಐಸಿಸಿ ಟೂರ್ನಿಯಲ್ಲಿ ನಾಕೌಟ್ ಹಂತದ ಪಂದ್ಯವೊಂದರಲ್ಲಿ ಏಕೈಕ ವೇಗಿಯೊಂದಿಗೆ ಕಣಕ್ಕಿಳಿದ ಮೊದಲ ತಂಡ ಎಂದರೆ ಅದು ದಕ್ಷಿಣ ಆಫ್ರಿಕಾ. ಢಾಕಾದಲ್ಲಿ 1998ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ದಕ್ಷಿಣ ಆಫ್ರಿಕಾ ಏಕೈಕ ವೇಗಿಯೊಂದಿಗೆ ಕಣಕ್ಕಿಳಿದಿತ್ತು. ಅಚ್ಚರಿ ಎಂದರೆ ಅಂದಿನ ಪಂದ್ಯವನ್ನು 4 ವಿಕೆಟ್ ಅಂತರದಲ್ಲಿ ಗೆದ್ದಿತ್ತು.

ಬಳಿಕ ಈ ಪ್ರಯೋಗ 2000ದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ಪ್ರಯೋಗಿಸಿತ್ತು. ಆದರೆ ಅಂದಿನ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅದು ಪಾಕಿಸ್ತಾನಕ್ಕೆ ತಿರುಗುಬಾಣವಾಗಿ 4 ವಿಕೆಟ್ ಅಂತರದಲ್ಲಿ ಪಾಕಿಸ್ತಾನ ಸೋತಿತ್ತು. ಬಳಿಕ ಶ್ರೀಲಂಕಾ ತಂಡ 2011ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇದೇ ಅಸ್ತ್ರವನ್ನು ಬಳಸಿತ್ತು. ಆ ಪಂದ್ಯದಲ್ಲಿ ಲಂಕಾ ಪಡೆ ತನ್ನ ಏಕೈಕ ವೇಗಿ ಲಸಿತ್ ಮಾಲಿಂಗ ಅವರೊಂದಿಗೆ ಕಣಕ್ಕಿಳಿದು ಪಂದ್ಯವನ್ನು ಗೆದ್ದು ಫೈನಲ್ ಗೇರಿತ್ತು.

ಇದೀಗ ಭಾರತ ತಂಡ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಇದೇ ಸೂತ್ರ ಮತ್ತು ಗೇಮ್ ಪ್ಲಾನ್ ಬಳಸಿಕೊಂಡು ದಾಖಲೆ ಬರೆದಿದೆ. ಬಳಸಿದ್ದು ಮಾತ್ರವಲ್ಲದೇ ಅದನ್ನು ಪರಿಣಾಮಕಾರಿಯಾಗಿ ಬಳಿಸಿಕೊಂಡು ಪಂದ್ಯ ಗೆದ್ದು ಫೈನಲ್ ಗೇರಿದೆ. ಆ ಮೂಲಕ ಈ ಸಂಯೋಜನೆಯನ್ನು ಭಾರತ ತಂಡ ತನ್ನ 97 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಳಸಿಕೊಂಡಿದೆ.

ಕಿವೀಸ್ ವಿರುದ್ಧ ಸಕ್ಸಸ್ ಕಂಡಿದ್ದ ಸಂಯೋಜನೆ

ಇನ್ನು ರೋಹಿತ್ ಶರ್ಮಾರ ಈ ಸಂಯೋಜನೆ ಭಾರತ ತಂಡಕ್ಕೆ ಹೊಸದೇನೂ ಅಲ್ಲ. ಇದೇ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿದಿತ್ತು. ಅಂದರೆ ನ್ಯೂಜಿಲೆಂಡ್ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರೋಹಿತ್ ಇದೇ ತಂಡವನ್ನೇ ಕಣಕ್ಕಿಳಿಸಿದ್ದರು. ಅಂದು ವೇಗಿ ಶಮಿಯನ್ನು ಹೊರತು ಪಡಿಸಿದರೆ ಬೇರಾವುದೇ ವೇಗದ ಬೌಲರ್ ಕಣದಲ್ಲಿರಲಿಲ್ಲ. ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿದ್ದು, ಮಧ್ಯಮ ಕ್ರಮಾಂಕದಲ್ಲಿ ಬೌಲಿಂಗ್ ಮಾಡಬಲ್ಲರು. ಇನ್ನು ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮತ್ತು ವರುಣ್ ಚಕ್ರವರ್ತಿ ಸ್ಪಿನ್ನರ್ ಗಳಾಗಿದ್ದಾರೆ. ತಂಡದ ಇತರೆ ವೇಗಿಗಳಾದ ಹರ್ಷಿತ್ ರಾಣಾ ಅಥವಾ ಅರ್ಶ್‌ದೀಪ್ ಸಿಂಗ್ ರನ್ನು ಈ ಪಂದ್ಯದಿಂದ ಕೈ ಬಿಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT