ಭಾರತ ತಂಡ 
ಕ್ರಿಕೆಟ್

Champions Trophy 2025 Final: ದುಬಾರಿಯಾದ ವೇಗಿಗಳು, ಕಿವೀಸ್ ದಾಂಡಿಗರಿಗೆ ಮೂಗುದಾರ ಹಾಕಿದ ಸ್ಪಿನ್ನರ್ಸ್, Rohit Sharma ಚಾಣಾಕ್ಷ ನಾಯಕತ್ವ!

ಭಾರತದ ಪರ ಬೌಲಿಂಗ್ ಮಾಡಿದ್ದ ಶಮಿ ಮತ್ತು ಹಾರ್ದಿಕ್ ಪಾಂಡ್ಯ ದುಬಾರಿಯಾದರು. ಪಾಂಡ್ಯಾ ಕೇವಲ 3 ಓವರ್ ಎಸೆದು 30 ರನ್ ನೀಡಿದರೆ ಶಮಿ 9 ಓವರ್ ಎಸೆದು 74 ರನ್ ಬಿಟ್ಟುಕೊಟ್ಟರು.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವ ವ್ಯಾಪಕ ಶ್ಲಾಘನೆಗೆ ಪಾತ್ರವಾಗುತ್ತಿದೆ.

ಹೌದು.. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಅಪರೂಪದ ದಾಖಲೆಗೆ ಪಾತ್ರವಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿ ಭಾರತಕ್ಕೆ ಗೆಲ್ಲಲು 252 ರನ್ ಗಳ ಸವಾಲಿನ ಗುರಿ ನೀಡಿತು. ಒಂದು ಹಂತದಲ್ಲಿ ಕೇವಲ 7.5 ಓವರ್ ಗೇ 57 ರನ್ ಗಳಿಸಿ ನ್ಯೂಜಿಲೆಂಡ್ ಭರ್ಜರಿ ಬ್ಯಾಟಿಂಗ್ ಆಡುವ ಮುನ್ಸೂಚನೆ ನೀಡಿತ್ತು.

ದುಬಾರಿಯಾದ ಭಾರತದ ವೇಗಿಗಳು, ಶಮಿ ಕಳಪೆ ದಾಖಲೆ

ಈ ಹಂತದಲ್ಲಿ ಭಾರತದ ವೇಗಿಗಳನ್ನು ಕಿವೀಸ್ ದಾಂಡಿಗರು ಮನಸೋ ಇಚ್ಚೆ ದಂಡಿಸಿದರು. ಈ ಹಂತದಲ್ಲಿ ಭಾರತದ ಪರ ಬೌಲಿಂಗ್ ಮಾಡಿದ್ದ ಶಮಿ ಮತ್ತು ಹಾರ್ದಿಕ್ ಪಾಂಡ್ಯ ದುಬಾರಿಯಾದರು. ಪಾಂಡ್ಯಾ ಕೇವಲ 3 ಓವರ್ ಎಸೆದು 30 ರನ್ ನೀಡಿದರೆ ಶಮಿ 9 ಓವರ್ ಎಸೆದು 74 ರನ್ ಬಿಟ್ಟುಕೊಟ್ಟರು.

ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತದ 2ನೇ ದುಬಾರಿ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು 2013ರಲ್ಲಿ ಕಾರ್ಡಿಫ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಉಮೇಶ್ ಯಾದವ್ 2 ವಿಕೆಟ್ ಪಡೆದು 75 ರನ್ ಕಲೆ ಹಾಕಿದ್ದರು.

- 74 runs conceded by Mohammed Shami today is the second-most by an Indian bowler in a Champions Trophy game, after Umesh Yadav’s 2/75 against South Africa in Cardiff in 2013.

ದುಬಾರಿಯಾದ ವೇಗಿಗಗಳು, ಕಿವೀಸ್ ದಾಂಡಿಗರಿಗೆ ಮೂಗುದಾರ ಹಾಕಿದ ಸ್ಪಿನ್ನರ್ಸ್

ಇನ್ನು ಇಂದಿನ ಪಂದ್ಯದಲ್ಲಿ ಭಾರತದ ವೇಗಿಗಳು ದುಬಾರಿಯಾದರೆ, ಸ್ಪಿನ್ನರ್ ಗಳು ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಭಾರತದ ವೇಗಿಗಳು ಇಂದು 12 ಓವರ್ ಎಸೆದಿದ್ದು, ಈ ಪೈಕಿ 8.67 ಸರಾಸರಿಯಲ್ಲಿ 104 ರನ್ ನೀಡಿ ಕೇವಲ 1 ವಿಕೆಟ್ ಪಡೆದರು. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಭಾರತೀಯ ಸ್ಪಿನ್ನರ್ ಗಳು ಇಂದು ಬರೊಬ್ಬರಿ 38 ಓವರ್ ಎಸೆದು ಕೇವಲ 3.79 ಸರಾಸರಿಯಲ್ಲಿ ಕೇವಲ 144 ರನ್ ನೀಡಿ ಬರೊಬ್ಬರಿ 5 ವಿಕೆಟ್ ಪಡೆದಿದ್ದಾರೆ.

Pace vs Spin in the innings

Pace: 1/104 in 12 overs (ER: 8.67)

Spin: 5/144 in 38 overs (ER: 3.79)

ಪವರ್ ಪ್ಲೇ ನಲ್ಲಿ ಕಿವೀಸ್ ಪವರ್ ಫುಲ್ ಆಟ

ಇನ್ನು ಇಂದಿನ ಕಿವೀಸ್ ಬ್ಯಾಟಿಂಗ್ ಇನ್ನಿಂಗ್ಸ್ ನಲ್ಲಿ ಮೊದಲ 10 ಓವರ್ ನಲ್ಲಿ ಕಿವೀಸ್ ಪಡೆ 6.9 ಸರಾಸರಿಯಲ್ಲಿ 69 ರನ್ ಕಲೆಹಾಕಿತು. ಅಂತೆಯೇ ಇನ್ನಿಂಗ್ಸ್ ನ ಕೊನೆಯ 10 ಓವರ್ ಎಂದರೆ 41ನೇ ಓವರ್ ನಿಂದ 50ನೇ ಓವರ್ ವರೆಗೆ 7.9 ಸರಾಸರಿಯಲ್ಲಿ 79 ರನ್ ಕಲೆಹಾಕಿ ಕೇವಲ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ಈ ಮಧ್ಯದ 30 ಓವರ್ (11ರಿಂದ 40ನೇ ಓವರ್) ವರೆಗೂ ಕಿವೀಸ್ ಪಡೆ ಭಾರತೀಯ ಸ್ಪಿನ್ ಬೌಲಿಂಗ್ ದಾಳಿಗೆ ತುತ್ತಾಗಿ ಕೇವಲ 3.43 ಸರಾಸರಿಯಲ್ಲಿ 103ರನ್ ಮಾತ್ರ ಕಲೆಹಾಕಿತ್ತು. ಇದೇ ಹಂತದಲ್ಲಿ 4 ವಿಕೆಟ್ ಗಳನ್ನು ಕೂಡ ಕಳೆದುಕೊಂಡಿತ್ತು.

Innings progression

Overs 1-10: 69/1 (RR: 6.9)

Overs 11-40: 103/4 (RR: 3.43)

Overs 41-50: 79/2 (RR. 7.9)

ರೋಹಿತ್ ಶರ್ಮಾ ಚಾಣಾಕ್ಷ ನಾಯಕತ್ವ

ಇನ್ನು ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸುತ್ತಿದೆ ಎಂದಾಗಲೆಲ್ಲಾ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಮತ್ತು ಬೌಲಿಂಗ್ ನಲ್ಲಿ ಬದಲಾವಣೆ ತಂದು ಯಶಸ್ಸು ಪಡೆದರು. ಇದಕ್ಕೆ ಆರಂಭಿಕ 10 ಓವರ್ ಉದಾಹರಣೆಯಾಗಿದ್ದು, ಮೊದಲ 10 ಓವರ್ ನಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಆರಂಭಿಕರಾದ ವಿಲ್ ಯಂಗ್ 15 ರನ್ ಗಳಿಸಿದರೆ, ರಚಿನ್ ರವೀಂದ್ರ 37 ರನ್ ಗಳಿಸಿ ಅಪಾಯಕಾರಿಯಾಗಿ ಮಾರ್ಪಟ್ಟಿದ್ದರು.

ಈ ಹಂತದಲ್ಲಿ ರೋಹಿತ್ ಭಾರತದ ಸ್ಪಿನ್ನರ್ ಗಳಾದ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ರನ್ನು ಬೌಲಿಂಗ್ ಗೆ ಕಣಕ್ಕಿಳಿಸಿದರು. ವರುಣ್ ಚಕ್ರವರ್ತಿ ವಿಲ್ ಯಂಗ್ ರನ್ನು ಎಲ್ ಬಿ ಬಲೆಗೆ ಕೆಡವಿದರೆ, ಕುಲದೀಪ್ ಯಾದವ್ ಮೊದಲ ಎಸೆತದಲ್ಲೇ ರಚಿನ್ ರವೀಂದ್ರ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತೆಯೇ ನಂತರ ಕೇನ್ ವಿಲಿಯಮ್ಸನ್ ರನ್ನು ಕೂಡ ಔಟ್ ಮಾಡಿದರು. ಇದು ರೋಹಿತ್ ಶರ್ಮಾ ನಾಯಕತ್ವದ ಚಾಣಾಕ್ಷಣತನ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT