ನವದೆಹಲಿ: ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಯಾವುದೇ ಪಂದ್ಯದಲ್ಲೂ ಸೋಲದೆ ಅಜೇಯವಾಗಿ ICC ಚಾಂಪಿಯನ್ಸ್ ಟ್ರೋಫಿ 2025 ನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದೆ. ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯಿಂದ ಸ್ಪಿನ್ನರ್ ವರುಣ್ ಚಕ್ರವರ್ತಿವರೆಗೂ ಎಲ್ಲರೂ ಟೀಂ ಇಂಡಿಯಾ ಆಟಗಾರರು ಅದ್ಬುತ ಪ್ರದರ್ಶನ ನೀಡಿದರು.
ಆದಾಗ್ಯೂ ಮಾಜಿ ವಿಕೆಟ್ ಕೀಪರ್ -ಬ್ಯಾಟರ್ ದಿನೇಶ್ ಕಾರ್ತಿಕ್ ಮಾತ್ರ ಶ್ರೇಯಸ್ ಅಯ್ಯರ್ ಮಾತ್ರ ಭಾರತೀಯ ಕ್ರಿಕೆಟ್ ತಂಡದ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿ ಆಯ್ಕೆ ಮಾಡಿದ್ದಾರೆ. ಸ್ಥಿರ ಪ್ರದರ್ಶನದೊಂದಿಗೆ ಶ್ರೇಯಸ್ ಎಲ್ಲಾರನ್ನೂ ಆಕರ್ಷಿಸಿದ್ದಾರೆ.
ಈ ಬಾರಿಯ ಟೂರ್ನಮೆಂಟ್ ನಲ್ಲಿ ರಚಿನ್ ರವೀಂದ್ರ ನಂತರ ಎರಡನೇ ಅತಿಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಒತ್ತಡದ ಸಂದರ್ಭದಲ್ಲಿ ಅವರು ರನ್ ಗಳಿಸಿದ್ದಾರೆ ಎಂದು ದಿನೇಶ್ ಕಾರ್ತಿಕ್ Cricbuzz ಗೆ ತಿಳಿಸಿದ್ದಾರೆ.
ಶ್ರೇಯಸ್ ಅಯ್ಯರ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಲೀಗ್ ಪಂದ್ಯಗಳಲ್ಲಿ ಎರಡು ಅರ್ಧ ಶತಕ ಸೇರಿದಂತೆ ಐದು ಪಂದ್ಯಗಳಲ್ಲಿ 243 ರನ್ ಗಳಿಸಿದ ಭಾರತದ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಫೈನಲ್‌ನಲ್ಲಿ ಪ್ರಮುಖ 48 ರನ್ ಗಳಿಸಿದರು. ದುಬೈನ ನಿಧಾನಗತಿಯ ಪಿಚ್ ನಲ್ಲಿ ಭಾರತ ಸ್ಪಿನ್ ಸವಾಲು ಎದುರಿಸಿ ನಿಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕೊನೆಯ ದಿನ ಪ್ರತಿಯೊಬ್ಬ ವ್ಯಕ್ತಿಯು ತಂಡಕ್ಕಾಗಿ ಆಟ ಮುಗಿಸಲು ಬಯಸುತ್ತಾನೆ. ನಾನು ಇದನ್ನು ಎಲ್ಲಾ ದಿನಗಳಲ್ಲೂ ಮಾಡುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯು ತಂಡದ ಗೆಲುವಿಗೆ ನೀಡಿದ ಕೊಡುಗೆಯ ರೀತಿ ನನಗೆ ಸಂಸತವನ್ನುಂಟು ಮಾಡಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದರು.