ವಿವಾದಕ್ಕೀಡಾದ ಡೇವಿಡ್ ಮಿಲ್ಲರ್ ಸಂದರ್ಶನ 
ಕ್ರಿಕೆಟ್

'Worst IPL franchise.. ನಿಮಗೆ ಮನುಷ್ಯತ್ವವೇ ಇಲ್ಲ..'; David Miller ''heartbreak” ವಿಡಿಯೋಗೆ ಅಭಿಮಾನಿಗಳ ಆಕ್ರೋಶ

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ''bigger heartbreak” ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು ಈ ವಿಡಿಯೋಗೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲಖನೌ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನವೇ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ತಂಡ ಅಭಿಮಾನಗಳ ಭಾರಿ ಆಕ್ರೋಶ ಎದುರಿಸುವಂತಾಗಿದೆ.

ಇಂದಿನಿಂದ ಐಪಿಎಲ್ ಟೂರ್ನಿ ಆರಂಭವಾಗುತ್ತಿದ್ದು, ಎಲ್ಲ 10 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲು ಸಕಲ ಯೋಜನೆ ಸಿದ್ದಪಡಿಸಿಕೊಳ್ಳುತ್ತಿವೆ. ಆದರೆ ಅತ್ತ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಾತ್ರ ಇರಲಾರದೇ ಇರುವೆ ಬಿಟ್ಟುಕೊಂಡರು ಎಂಬಂತೆ ಕ್ಷುಲ್ಲಕ ವಿಡಿಯೋ ಅಪ್ಲೋಡ್ ಮಾಡಿ ಇದೀಗ ಕ್ರಿಕೆಟ್ ಅಭಿಮಾನಿಗಳ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ.

ಹೌದು.. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ''bigger heartbreak” ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು ಈ ವಿಡಿಯೋಗೆ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

X ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೊದಲ್ಲಿ, ಮಿಲ್ಲರ್ ಅವರನ್ನು ಐಸಿಸಿ ಟೂರ್ನಿಗಳ ಸೋಲಿನ ಆಘಾತಗಳ ಕುರಿತು ಕೇಳಲಾಗಿದೆ. ಭಾರತ ವಿರುದ್ಧದ T20 ವಿಶ್ವಕಪ್ 2024 ರ ಫೈನಲ್ ಸೇರಿದಂತೆ ಕ್ರಿಕೆಟ್‌ನಲ್ಲಿ ಅವರ ಅತಿದೊಡ್ಡ ಹೃದಯಾಘಾತವನ್ನು ಆಯ್ಕೆ ಮಾಡಲು ಕೇಳಲಾಯಿತು. ಡೇವಿಡ್ ಮಿಲ್ಲರ್ ಈ ಪ್ರಶ್ನೆಗಳಿಗೆ ಒಲ್ಲದ ಮನಸ್ಸಿನಿಂದಲೇ ಉತ್ತರ ನೀಡಿದರಾದರೂ ಅವರಿಗೆ ಇದು ಇಷ್ಟವಿರಲಿಲ್ಲ ಎಂಬುದು ಅವರ ಮುಖಭಾವನೆಯಿಂದ ತಿಳಿಯುತ್ತಿತ್ತು.

ಅಭಿಮಾನಿಗಳ ಆಕ್ರೋಶ

ಇನ್ನು ಈ ವಿಡಿಯೋಗೆ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಲಕ್ನೋ ತಂಡದ ಫ್ರಾಂಚೈಸಿಗಳಿಗೆ ಮನುಷ್ಯತ್ವವೇ ಇಲ್ಲ.. ಐಪಿಎಲ್ ಸಮಯದಲ್ಲಿ ಈ ಪ್ರಶ್ನೆ ಬೇಕಿತ್ತಾ ಎಂದು ಕಿಡಿಕಾರಿದ್ದಾರೆ. ಮತ್ತೆ ಕೆಲವರು ದುಡ್ಡು ನೀಡಿ ಆಟಗಾರರನ್ನು ಖರೀದಿಸಿದ್ದೇವೆ ಎಂಬ ಧಿಮಾಕು ಅವರಿಗೆ.. ಹೀಗಾಗಿ ಬಾಯಿಗೆ ಬಂದ ಪ್ರಶ್ನೆಗಳನ್ನು ಆಟಗಾರರ ಶೋಷಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಮತ್ತೆ ಕೆಲವರು ಸಂವೇದನಾಶೀಲ ರಹಿತ ಕಾರ್ಯ ಎಂದು ಟೀಕಿಸಿದ್ದಾರೆ.

"ವಿರಾಟ್ ಕೊಹ್ಲಿ ಅಥವಾ ಸಚಿನ್ ತೆಂಡೂಲ್ಕರ್‌ಗೆ ಹೀಗೆ ಮಾಡುವುದನ್ನು ಯಾರಾದರೂ ಊಹಿಸಲು ಸಾಧ್ಯವೇ? ಇಲ್ಲ," ಎಂದು ಒಬ್ಬ ಬಳಕೆದಾರರು ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಬರೆದಿದ್ದಾರೆ, "ಐಪಿಎಲ್ ತಂಡಗಳು ವಿದೇಶಿ ಆಟಗಾರರನ್ನು ಮನುಷ್ಯರಂತೆ ನೋಡುವುದಿಲ್ಲ. ಹಣ ಪಾವತಿಸಿದ ನಂತರ, ವಿದೇಶಿ ಆಟಗಾರರು ಬಾರು ಮೇಲೆ ಸರ್ಕಸ್ ನೃತ್ಯ ಮಾಡುತ್ತಿದ್ದಾರೆ ಎಂದು ಮತ್ತೋರ್ವ ಬಳಕೆದಾರ ಟೀಕಿಸಿದ್ದಾರೆ.

"ಇದು ನೋಡಲು ತುಂಬಾ ಅನಾನುಕೂಲವಾಗಿತ್ತು, @DavidMillerSA12 ನಿಮ್ಮ ಬಗ್ಗೆ ನನಗೆ ವಿಷಾದವಿದೆ. ಅವರು ಅವನ ಎಲ್ಲಾ ವೈಫಲ್ಯಗಳನ್ನು ಅವನ ಮುಂದೆ ಎಣಿಸುತ್ತಿದ್ದಾನೆ. ಮಿಲ್ಲರ್ ಖಂಡಿತವಾಗಿಯೂ ಅನಾನುಕೂಲವಾಗಿ ಕಾಣುತ್ತಿದ್ದಾರೆ" ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಅಂದಹಾಗೆ ಹಾಲಿ ಐಪಿಎಲ್ ಋತುವಿಗಾಗಿ ಮಿಲ್ಲರ್ LSG ಯ ಪ್ರಮುಖ ಆಟಗಾರರಲ್ಲಿ ಮಿಲ್ಲರ್ ಕೂಡ ಒಬ್ಬರಾಗಿದ್ದಾರೆ. ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದ ದಕ್ಷಿಣ ಆಫ್ರಿಕಾದ ಆಟಗಾರನನ್ನು ಮೆಗಾ ಹರಾಜಿನಲ್ಲಿ ಲಕ್ನೋ 7.5 ಕೋಟಿ ರೂ.ಗೆ ಖರೀದಿಸಿತು. ಈ ಹರಾಜಿನಲ್ಲಿ ಆಟಗಾರನೊಬ್ಬನ ಸಾರ್ವಕಾಲಿಕ ದಾಖಲೆಯ ಖರೀದಿ ಶುಲ್ಕವನ್ನು ಫ್ರಾಂಚೈಸಿ ಮುರಿದು, ರಿಷಬ್ ಪಂತ್ ಅವರನ್ನು 27 ಕೋಟಿ ರೂ.ಗೆ ಖರೀದಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT