ಹೆನ್ರಿಚ್ ಕ್ಲಾಸನ್ 
ಕ್ರಿಕೆಟ್

IPL 2025: 300+ Target.. ಹೈದರಾಬಾದ್ ಗರ್ವಭಂಗ..; 'ಯಾರನ್ನೂ ಲಘುವಾಗಿ ಪರಿಗಣಿಸಿಲ್ಲ'- LSG ವಿರುದ್ಧದ ಸೋಲಿನ ಬಳಿಕ Heinrich Klaasen ಹೇಳಿಕೆ

ವೇಗಿ ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ತತ್ತರಿಸಿ 300 ಅಲ್ಲ.. 200 ಕೂಡ ದಾಟಲಿಲ್ಲ. ಹೈದರಾಬಾದ್ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಹೈದರಾಬಾದ್: ಹಾಲಿ ಐಪಿಎಲ್ ಟೂರ್ನಿಯಲ್ಲಿ ತನ್ನ ಬಲಿಷ್ಠ ಬ್ಯಾಟಿಂಗ್ ಪಡೆಯಿಂದ ದಾಖಲೆಯ 300 ರನ್ ಟಾರ್ಗೆಟ್ ಸೆಟ್ ಮಾಡುತ್ತೇವೆ ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ವಿರುದ್ಧದ ಸೋಲಿನ ಬಳಿಕ ಯಾವ ತಂಡವನ್ನೂ ಲಘವಾಗಿ ಪರಿಗಣಿಸಿಲ್ಲ ಎಂದು ಹೇಳಿಕೆ ನೀಡಿದೆ.

ಹೌದು... ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ನೀಡಿದ್ದ 191 ರನ್ ಗಳ ಗುರಿಯನ್ನು ರಿಷಬ್ ಪಂತ್ ನೇತೃತ್ವದ ಎಲ್ ಎಸ್ ಜಿ ಕೇವಲ 16.1 ಓವರ್ ನಲ್ಲಿ 5 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಲಕ್ನೋ ಪರ ನಿಕೋಲಸ್ ಪೂರನ್ (70 ರನ್)ಮತ್ತು ಮಿಚೆಲ್ ಮಾರ್ಶ್ (52 ರನ್) ಸ್ಫೋಟ ಬ್ಯಾಟಿಂಗ್ ನಡೆಸಿ ತಂಡದ ಗೆಲುವನ್ನು ಸುಲಭವಾಗಿಸಿದರು.

300 ಟಾರ್ಗೆಟ್, ಹೈದರಾಬಾದ್ ಗರ್ವಭಂಗ

ಹಾಲಿ ಟೂರ್ನಿಯಲ್ಲಿ ಪ್ರಬಲ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಹೈದರಾಬಾದ್ ತಂಡ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ 300ಕ್ಕೂ ಅಧಿಕ ರನ್ ಬಾರಿಸುವ ವಿಶ್ವಾಸ ವ್ಯಕ್ತಪಡಿಸಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಲಕ್ನೋ ತಂಡದ ವೇಗಿ ಶಾರ್ದೂಲ್ ಠಾಕೂರ್ ಬೌಲಿಂಗ್ ದಾಳಿಗೆ ತತ್ತರಿಸಿ 300 ಅಲ್ಲ.. 200 ಕೂಡ ದಾಟಲಿಲ್ಲ. ಹೈದರಾಬಾದ್ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಲಕ್ಮೋ ಪರ ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದು ಹೈದರಾಬಾದ್ ಬೃಹತ್ ಮೊತ್ತದ ಕನಸಿಗೆ ಅಡ್ಡಿಯಾದರು.

ಯಾರನ್ನೂ ಲಘುವಾಗಿ ಪರಿಗಣಿಸಿಲ್ಲ

ಇನ್ನು ಈ ಪಂದ್ಯದ ಸೋಲಿನ ಬಳಿಕ ಮಾತನಾಡಿದ ಸನ್ ರೈಸರ್ಸ್ ಹೈದರಾಬಾದ್ ಆಟಗಾರ ಹೆನ್ರಿಚ್ ಕ್ಲಾಸನ್, ನಮ್ಮ ತಂಡ ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ. ಎಲ್ಲ ತಂಡಗಳೂ ಉತ್ತಮವಾಗಿ ಆಡುತ್ತಿವೆ.. ಅದರಲ್ಲೂ ಮುಖ್ಯವಾಗಿ ಇಂತಹ ವಿಕೆಟ್‌ಗಳಲ್ಲಿ ಉತ್ತಮ ಆಟವಾಡುತ್ತಿದ್ದಾರೆ. ಈ ರೀತಿಯ ಪಿಚ್‌ಗಳಲ್ಲಿ ಯಾವುದೇ ಬೌಲಿಂಗ್‌ ವಿಭಾಗದ ಮೇಲೆ ಒತ್ತಡ ಹೇರಬಹುದು. ಆದಾಗ್ಯೂ, ಅವರು (ಎಲ್‌ಎಸ್‌ಜಿ) ಮಧ್ಯಮ ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದರು. ಹಾಗಾಗಿ, ಅವರಿಗೂ ಶ್ರೇಯ ಸಲ್ಲಬೇಕು. ಅವರು ಆರಂಭದಲ್ಲೇ ವಿಕೆಟ್‌ಗಳನ್ನು ಕಬಳಿಸಿದ್ದರಿಂದ ನಮ್ಮ ರನ್ ವೇಗಕ್ಕೆ ತಡೆ ಬಿತ್ತು. ಇವೆಲ್ಲವೂ ಆಟದ ಭಾಗ' ಎಂದು ಅಭಿಪ್ರಾಯಪಟ್ಟಿದ್ದಾರೆ.

ತವರಿನಲ್ಲಿ 300+ ಟಾರ್ಗೆಟ್ ಗುರಿ

ಸ್ಫೋಟಕ ಬ್ಯಾಟರ್‌ಗಳ ದಂಡೇ ಇರುವ ಎಸ್‌ಆರ್‌ಎಚ್‌ ಮೊದಲ ಪಂದ್ಯದಲ್ಲಿ ರಾಜಸ್ಥಾನ ಎದುರು ನಿಗದಿತ 20 ಓವರ್‌ಗಳಲ್ಲಿ 286 ರನ್‌ ಗಳಿಸಿತ್ತು. ಹೀಗಾಗಿ, ತವರಿನ (ಹೈದರಾಬಾದ್‌) ಮೈದಾನದಲ್ಲಿ ಮತ್ತೊಂದು ಜಯ ಸಾಧಿಸುವ ಲೆಕ್ಕಾಚಾರದಲ್ಲಿತ್ತು. ಆದರೆ, ಆ ತಂಡದ ಲೆಕ್ಕಾಚಾರವನ್ನು ಎಲ್‌ಎಸ್‌ಜಿ ಮಧ್ಯಮ ವೇಗಿ ಶಾರ್ದೂಲ್‌ ಠಾಕೂರ್ ತಲೆಕೆಳಗಾಗಿಸಿದರು. ಬಿರುಸಿನ ಬ್ಯಾಟರ್ ಅಭಿಷೇಕ್‌ ಶರ್ಮಾ, ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಇಶಾನ್‌ ಕಿಶನ್‌, ಅಭಿನವ್‌ ಮನೋಹರ್‌ ಹಾಗೂ ಮೊಹಮ್ಮದ್‌ ಶಮಿ ಅವರನ್ನು ಔಟ್‌ ಮಾಡುವ ಮೂಲಕ, ಎಸ್‌ಆರ್‌ಎಚ್‌ ರನ್‌ ಗಳಿಕೆಗೆ ಕಡಿವಾಣ ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT