ಮುಂಬೈಗೆ ಭರ್ಜರಿ ಜಯ 
ಕ್ರಿಕೆಟ್

IPL 2025: RR ವಿರುದ್ಧ MI ಗೆ ಭರ್ಜರಿ ಜಯ; ಸತತ 6ನೇ ಗೆಲವು; Hardik Pandya ಪಡೆ ಅಗ್ರಸ್ಥಾನಕ್ಕೆ, Riyan Parag ಪಡೆ ಟೂರ್ನಿಯಿಂದಲೇ ಔಟ್!

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 218 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 16.1 ಓವರ್ ನಲ್ಲಿ ಕೇವಲ 117 ರನ್ ಗಳಿಸಿ ಆಲೌಟ್ ಆಯಿತು.

ಜೈಪುರ: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 100 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 218 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 16.1 ಓವರ್ ನಲ್ಲಿ ಕೇವಲ 117 ರನ್ ಗಳಿಸಿ ಆಲೌಟ್ ಆಯಿತು.

ಆ ಮೂಲಕ ಬರೊಬ್ಬರಿ 100 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ರಾಜಸ್ತಾನದ ಪ್ರಮುಖ ಬ್ಯಾಟರ್ ಗಳು ವಿಫಲರಾಗಿದ್ದೇ ಇಂದಿನ ಸೋಲಿಗೆ ಕಾರಣವಾಯಿತು.

ಕಳೆದ ಪಂದ್ಯದ ಹೀರೋ ವೈಭವ್ ಸೂರ್ಯವಂಶಿ ಶೂನ್ಯಕ್ಕೆ ಔಟಾದರೆ, ಜೈಸ್ವಾಲ್ ಗಳಿಕೆ 13ರನ್ ಗೇ ಸೀಮಿತವಾಯಿತು. ಬಳಿಕ ಬಂದ ನಿತೀಶ್ ರಾಣಾ 9, ನಾಯಕ ರಿಯಾನ್ ಪರಾಗ್ 16, ಧ್ರುವ್ ಜುರೆಲ್ 11, ಶಿಮ್ರಾನ್ ಹೇಟ್ಮರ್ 0, ಶುಭಂ ದುಬೆ 15, ಮಹೀಶ ತೀಕ್ಷ್ಣ 2, ಕುಮಾರ್ ಕಾರ್ತಿಕೇಯ 2 ರನ್ ಗಳಿಸಿದರು.

ಅಂತಿಮ ಹಂತದಲ್ಲಿ ಕ್ರೀಸ್ ಗೆ ಇಳಿದ ಜೋಫ್ರಾ ಆರ್ಚರ್ 30 ರನ್ ಗಳಿಸಿ ಮುಂಬೈಗೆ ಕೊಂಚ ಪ್ರತಿರೋಧ ತೋರಿದರು. ಅಂತಿಮವಾಗಿ ರಾಜಸ್ತಾನ ರಾಯಲ್ಸ್ ತಂಡ 16.1 ಓವರ್ ನಲ್ಲಿ ಕೇವಲ 117 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಬರೊಬ್ಬರಿ 100 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಮುಂಬೈ ಪರ ಟ್ರೆಂಟ್ ಬೌಲ್ಟ್ ಮತ್ತು ಕರಣ್ ಶರ್ಮಾ ತಲಾ 3 ವಿಕೆಟ್ ಪಡೆದರೆ, ಬುಮ್ರಾ 2 ವಿಕೆಟ್, ದೀಪಕ್ ಚಹರ್, ಹಾರ್ದಿಕ್ ಪಾಂಡ್ಯಾ ತಲಾ 1 ವಿಕೆಟ್ ಪಡೆದರು.

ಮುಂಬೈ ಭರ್ಜರಿ ಬ್ಯಾಟಿಂಗ್

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡ ನಿಗಧಿತ 20 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 217 ರನ್ ಪೇರಿಸಿತು. ಭರ್ಜರಿ ಆರಂಭ ಪಡೆದ ಮುಂಬೈ ಮೊದಲ ವಿಕೆಟ್ ಗೇ 116 ರನ್ ಕಲೆಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ರಿಯಾನ್ ರಿಕಲ್ಟನ್ 61 ರನ್ ಕಲೆಹಾಕಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ 53 ರನ್ ಚಚ್ಚಿದರು.

ಬಳಿಕ ಬಂದ ಹಾರ್ದಿಕ್ ಪಾಂಡ್ಯಾ ಮತ್ತು ಸೂರ್ಯ ಕುಮಾರ್ ಯಾದವ್ 94 ರನ್ ಗಳ ಅಮೋಘ ಜೊತೆಯಾಟ ನೀಡಿದರು. ಹಾರ್ದಿಕ್ ಪಾಂಡ್ಯಾ 23 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 48 ರನ್ ಕಲೆಹಾಕಿದರೆ, ಸೂರ್ಯ ಕುಮಾರ್ ಯಾದವ್ ಕೂಡ 23 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 48 ರನ್ ಕಲೆಹಾಕಿದರು.

ರಾಜಸ್ತಾನ ಟೂರ್ನಿಯಿಂದಲೇ ಔಟ್

ಇನ್ನು ಈ ಪಂದ್ಯದ ಸೋಲಿನೊಂದಿಗೆ ರಾಜಸ್ತಾನ ರಾಯಲ್ಸ್ ತಂಡ ಟೂರ್ನಿಯಿಂದಲೇ ಔಟ್ ಆಗಿದೆ. ಈ ಪಂದ್ಯವೂ ಸೇರಿದಂತೆ ಒಟ್ಟು 11 ಪಂದ್ಯಗಳನ್ನಾಡಿರುವ ರಾಜಸ್ತಾನ ತಂಡ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 8 ಪಂದ್ಯಗಳಲ್ಲಿ ಸೋಲು ಕಂಡಿದೆ. ಅಂಕ ಪಟ್ಟಿಯಲ್ಲಿ ಕೇವಲ 6 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ರಾಜಸ್ತಾನ ಇನ್ನೂ 3 ಪಂದ್ಯಗಳನ್ನಾಡಲಿದ್ದು ಈ ಮೂರು ಪಂದ್ಯಗಳನ್ನು ಗೆದ್ದರೂ ಪ್ಲೇಆಫ್ ಗೇರುವ ಸಾಧ್ಯತೆ ಇಲ್ಲ.

ಅಗ್ರಸ್ಥಾನಕ್ಕೇರಿದ ಮುಂಬೈ

ಅಂತೆಯೇ ಇಂದಿನ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಹಾಲಿ ಟೂರ್ನಿಯಲ್ಲಿ ಸತತ 6ನೇ ಗೆಲುವು ಸಾಧಿಸಿದ್ದು, ಮಾತ್ರವಲ್ಲದೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಒಟ್ಟು 11 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ ತಂಡ 7 ಪಂದ್ಯಗಳಲ್ಲಿ ಗೆದ್ದು ನಾಲ್ಕರಲ್ಲಿ ಮಾತ್ರ ಸೋಲು ಕಂಡಿದೆ. ಅಂತೆಯೇ ಅಂಕ ಪಟ್ಟಿಯಲ್ಲಿ ಒಟ್ಟು 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ತನ್ನ ನೆಟ್ ರನ್ ರೇಟ್ ಅನ್ನೂ ಕೂಡ ಮುಂಬೈ ತಂಡ +1.274ಕ್ಕೇರಿಸಿಕೊಂಡು ಅಗ್ರಸ್ಥಾನಕ್ಕೆ ಜಿಗಿದಿದೆ. ಇನ್ನು ಆರ್ ಸಿಬಿ ಕೂಡ 14 ಅಂಕಗಳನ್ನೇ ಹೊಂದಿದ್ದು, ಮುಂಬೈ ಗಿಂತ ಕಡಿಮೆ ಅಂದರೆ +0.521 ನೆಟ್ ರೇಟ್ ನಿಂದಾಗಿ 2ನೇ ಸ್ಥಾನಕ್ಕೆ ಕುಸಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT