ಅಂಬಟಿ ರಾಯುಡು 
ಕ್ರಿಕೆಟ್

IPL 2025: 'MI ಒಮ್ಮೆ ಪ್ಲೇಆಫ್‌ಗೆ ಬಂದರೆ...'; ಇತರ ತಂಡಗಳಿಗೆ ಎಚ್ಚರಿಕೆ ನೀಡಿದ CSK ಮಾಜಿ ಆಟಗಾರ ಅಂಬಾಟಿ ರಾಯುಡು

ಮುಂಬೈ ನೀಡಿದ 218 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ಬೌಲರ್‌ಗಳ ದಾಳಿಗೆ ತತ್ತರಿಸಿತು.

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡವು ಈ ಆವೃತ್ತಿಯಲ್ಲಿ ಸತತ ಆರನೇ ಗೆಲುವು ಸಾಧಿಸಿದ್ದು, ಐದು ಬಾರಿಯ ಚಾಂಪಿಯನ್‌ ತಂಡಕ್ಕೆ ಯಶಸ್ಸು ಅವರ ಸ್ಮಾರ್ಟ್ ಯೋಜನೆ ಮತ್ತು ಆಟಗಾರರು ತಮ್ಮ ಪಾತ್ರಗಳಿಗೆ ಪರಿಪೂರ್ಣವಾಗಿ ಅಂಟಿಕೊಳ್ಳುವುದರಿಂದ ಬಂದಿದೆ ಎಂದು ಭಾರತದ ಮಾಜಿ ಬ್ಯಾಟರ್ ಅಂಬಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ.

ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ತಂಡವು ರಾಜಸ್ಥಾನ್ ರಾಯಲ್ಸ್ ಅನ್ನು ಜೈಪುರದಲ್ಲಿ 100 ರನ್‌ಗಳಿಂದ ಸೋಲಿಸಿದೆ. ಈ ಮೂಲಕ ಆಡಿರುವ 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದ್ದು, 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಿಯಾನ್ ರಿಕಲ್ಟನ್ (61), ರೋಹಿತ್ ಶರ್ಮಾ (54), ಸೂರ್ಯಕುಮಾರ್ ಯಾದವ್ (ಔಟಾಗದೆ 48) ಮತ್ತು ಹಾರ್ದಿಕ್ ಪಾಂಡ್ಯ (ಔಟಾಗದೆ 48) ತಂಡವನ್ನು 2 ವಿಕೆಟ್ ನಷ್ಟಕ್ಕೆ 217 ರನ್‌ದಳಿಗೆ ಮುನ್ನಡೆಸಿದರು.

ಮುಂಬೈ ನೀಡಿದ 218 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ಬೌಲರ್‌ಗಳ ದಾಳಿಗೆ ತತ್ತರಿಸಿತು. 16.1 ಓವರ್ಗಳಲ್ಲಿಯೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 117 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ನೆರವಾದರು.

ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡ ಸತತ ಆರು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನದಿಂದ ನಂಬರ್ 1 ಸ್ಥಾನಕ್ಕೇರಿದೆ. ಪ್ಲೇಆಫ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.

'ಮುಂಬೈ ಇಂಡಿಯನ್ಸ್‌ನ ಯಶಸ್ಸು ಸ್ಮಾರ್ಟ್ ಪ್ಲಾನಿಂಗ್‌ನಿಂದ ಬಂದಿದೆ. ಇಂದು ಅವರು ಬೌಲ್ ಮಾಡಿದ ಶಾರ್ಟ್‌ಬಾಲ್‌ಗಳ ಸಂಖ್ಯೆಯನ್ನು ನೋಡಿ, ಇದು ವಾಂಖೆಡೆಯಲ್ಲಿ ಅಪರೂಪ. ಆದರೆ, ಅವರು ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡರು. ಇದು ಐಪಿಎಲ್‌ನ ಅಂತ್ಯಕ್ಕೆ ಬಂದಾಗ, ಮುಂಬೈ ಇಂಡಿಯನ್ಸ್ ತಂಡವು ಉತ್ತಮವಾಗಿ ಆಡುತ್ತದೆ. ಪ್ರತಿಯೊಬ್ಬ ಆಟಗಾರರು ತಮ್ಮ ಪಾತ್ರ ಏನೆಂಬುದನ್ನು ಅರಿತುಕೊಳ್ಳುತ್ತಾರೆ ಮತ್ತು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಾರೆ ಮತ್ತು ಒತ್ತಡವನ್ನು ನಿಭಾಯಿಸುತ್ತಾರೆ. ಅವರ ಪ್ಲೇಯಿಂಗ್ ಇಲೆವೆನ್‌ನಲ್ಲಿ 9 ರಿಂದ 10 ಮಂದಿಯನ್ನು ಪಂದ್ಯ ವಿಜೇತರೆಂದು ಗುರುತಿಸಬಹುದು' ಎಂದು ರಾಯುಡು JioHotstar ನಲ್ಲಿ ಹೇಳಿದರು.

'ಸೂರ್ಯಕುಮಾರ್ ಯಾದವ್ ಬೌಲರ್‌ಗಳ ಮೇಲೆ ಹೇರುವ ಒತ್ತಡವು ಅಗಾಧವಾಗಿದೆ. ಬೌಲರ್‌ಗಳಿಗೆ ಅವರು ದೊಡ್ಡ ಹಿಟ್ಟರ್‌ ಮತ್ತು ಬುದ್ಧಿವಂತ ಬ್ಯಾಟರ್‌ ಆಗಿ ಕಾಣಿಸುತ್ತಾರೆ. ಅವರು ನೇರವಾಗಿ ನೆಲದಲ್ಲಿ ಅಥವಾ ವಿಕೆಟ್‌ಕೀಪರ್‌ನ ಹಿಂದೆ ಚೆಂಡನ್ನು ಬೌಂಡರಿಯತ್ತ ಅಟ್ಟಬಹುದು. ಅವರು ಬಹುಮುಖತೆಯನ್ನು ಹೊಂದಿದ್ದಾರೆ. ಪರಿಸ್ಥಿತಿ ಯಾವುದೇ ಇದ್ದರೂ, ಬೌಲರ್‌ಗಳ ಮೇಲೆ ತಾವೇ ಮೇಲುಗೈ ಸಾಧಿಸುತ್ತಾರೆ. ಅದುವೇ ಅವರ ವಿಶೇಷತೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT