ಹಾರ್ದಿಕ್ ಪಾಂಡ್ಯ 
ಕ್ರಿಕೆಟ್

IPL 2025: MI ಸತತ ಆರನೇ ಗೆಲುವು; ಶಾಟ್ ಗಳ ಕುರಿತು ಹಾರ್ದಿಕ್ ಪಾಂಡ್ಯ ಹೇಳಿದ್ದು ಹೀಗೆ...

ಶಾಟ್ ಗಳ ಮಹತ್ವವನ್ನು ಪ್ರಸ್ತಾಪಿಸಿದ ಹಾರ್ದಿಕ್ ಪಾಂಡ್ಯ, ಬೌಂಡರಿಗಳನ್ನು ಗುರಿಯಾಗಿಸಿಕೊಂಡು ಪರಿಣಾಮಕಾರಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಹಾಗೂ ರಿಯಾನ್ ಅವರನ್ನು ಕೊಂಡಾಡಿದರು.

ಜೈಪುರ: ರಾಜಸ್ಥಾನ ರಾಯಲ್ಸ್ ವಿರುದ್ಧದ 100 ರನ್ ಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ತಂಡದ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ.

ಶಾಟ್ ಗಳ ಮಹತ್ವವನ್ನು ಪ್ರಸ್ತಾಪಿಸಿದ ಹಾರ್ದಿಕ್ ಪಾಂಡ್ಯ, ಬೌಂಡರಿಗಳನ್ನು ಗುರಿಯಾಗಿಸಿಕೊಂಡು ಪರಿಣಾಮಕಾರಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಹಾಗೂ ರಿಯಾನ್ ಅವರನ್ನು ಕೊಂಡಾಡಿದರು.

ಹೌದು. ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ, ನಾವು ಇನ್ನೂ 15 ರನ್ ಗಳಿಸಬಹುದಿತ್ತು. ಅದನ್ನು ತಪ್ಪಿಸಿಕೊಂಡಿದ್ದೇವೆ. ಹೆಚ್ಚಿನ ಶಾಟ್ ಹೊಡೆಯುವ ಬಗ್ಗೆ ನಾವು ಪರಸ್ಪರ ಮಾತನಾಡುತ್ತಿದ್ದೇವು. ಗ್ಯಾಪ್ ನೋಡಿ ಶಾಟ್ ಹೊಡೆದರೆ ಅದಕ್ಕೆ ಬೆಲೆ ಇರುತ್ತದೆ ಎಂದರು.

ರೋಹಿತ್ ಶರ್ಮಾ ಮತ್ತು ರಿಯಾನ್ ಅದೇ ರೀತಿಯಲ್ಲಿ ಬ್ಯಾಟಿಂಗ್ ಮಾಡಿದರು. ರಿಯಾನ್ ಬೌಂಡರಿಗಳನ್ನು ಗುರಿಯಾಗಿಸಿಕೊಂಡು ಹೊಡೆದ ಶಾಟ್ ಗಳು ಅದ್ಬುತವಾಗಿತ್ತು ಎಂದು ಕೊಂಡಾಡಿದರು.

ಬ್ಯಾಟ್ ಮನ್ ಶಿಪ್ ಮತ್ತು ಬೌಲಿಂಗ್ ದಾಳಿ ಬಗ್ಗೆಯೂ ಮಾತನಾಡಿದ ಹಾರ್ದಿಕ್ ಪಾಂಡ್ಯ, ಪರಿಸ್ಥಿತಿಗೆ ತಕ್ಕಂತೆ ಆಟವಾಡಬೇಕು. ಬ್ಯಾಟ್ ಮನ್ ಶಿಪ್ ತುಂಬಾ ಚೆನ್ನಾಗಿತ್ತು. ಎಲ್ಲಾ ಬೌಲರ್ ಗಳ ಗುರಿ ಸ್ಪಷ್ಪವಾಗಿತ್ತು. ನಮ್ಮಗಾಗಿ ಆಟವಾಡುತ್ತಿದ್ದು, ಆದೇ ರೀತಿಯಲ್ಲಿ ಮುಂದುವರೆಯುತ್ತೇವೆ. ಅತ್ಯಂತ ಶಿಸ್ತುಬದ್ಧವಾಗಿ ಗಮನವನ್ನು ಕೇಂದ್ರೀಕರಿಸಲು ಬಯಸುತ್ತೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ

1,322 ಕೋಟಿ ರೂ. ವಂಚನೆ ಪ್ರಕರಣ: Zee ಮಾಲೀಕ ಸುಭಾಷ್ ಚಂದ್ರ ವಿರುದ್ಧ FIR ದಾಖಲಿಸಿದ ಸಿಬಿಐ!

ಹಲ್ಲೆ ಆರೋಪ: ಒಂದು ದಿನದ ಪೊಲೀಸ್ ಕಸ್ಟಡಿಗೆ ಹಿಂದುತ್ವ ಇನ್ ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್‌!

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ