ವಿರಾಟ್ ಕೊಹ್ಲಿ 
ಕ್ರಿಕೆಟ್

'ಹೊಸ ಆಟಗಾರರ ಗುಂಪು...': T20I Cricket ನಿವೃತ್ತಿಗೆ ಕೊನೆಗೂ ಕಾರಣ ಬಹಿರಂಗ ಪಡಿಸಿದ Virat Kohli

ಕಳೆದ ವರ್ಷ ಜೂನ್‌ನಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ, ಭಾರತ ತಂಡದಿಂದ ಟಿ20 ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಲು ಕೊಹ್ಲಿ ನಿರ್ಧರಿಸಿದ್ದರು.

ಬೆಂಗಳೂರು: ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ತಾವೇಕೆ ಟಿ20 ಮಾದರಿ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದೆ ಎಂಬುದುನ್ನು ಕೊನೆಗೂ ಬಹಿರಂಗ ಪಡಿಸಿದ್ದಾರೆ.

ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಫಾರ್ಮ್ ನ ಹೊರತಾಗಿಯೂ ಟಿ20ಐ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿ ಅಚ್ಚರಿಗೆ ಕಾರಣರಾಗಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ನಂತರ, ಭಾರತ ತಂಡದಿಂದ ಟಿ20 ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಲು ಕೊಹ್ಲಿ ನಿರ್ಧರಿಸಿದ್ದರು.

ಅದರಂತೆ ಟೂರ್ನಿ ಮುಕ್ತಾಯವಾಗುತ್ತಲೇ ವಿದಾಯ ಘೋಷಣೆ ಮಾಡಿದರು. ಕೊಹ್ಲಿ ಮಾತ್ರವಲ್ಲದೇ ಟಿ20 ಮಾದರಿ ಕ್ರಿಕೆಟ್ ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಕೂಡ ಅದೇ ದಿನ ನಿವೃತ್ತಿ ಘೋಷಣೆ ಮಾಡಿದ್ದರು.

ಆ ನಿರ್ಧಾರದಿಂದ ಇಡೀ ಕ್ರಿಕೆಟ್‌ ಜಗತ್ತೇ ಅಚ್ಚರಿಗೊಂಡಿತ್ತು. ಟಿ20 ಸ್ವರೂಪದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದ ಸಂದರ್ಭದಲ್ಲೇ ಈ ನಿರ್ಧಾರ ಎಲ್ಲರನ್ನೂ ಗೊಂದಲಕ್ಕೀಡು ಮಾಡಿತ್ತು. ಈ ಘಟನೆಯಾಗಿ ಸರಿಸುಮಾರು ಒಂದು ವರ್ಷದ ಬಳಿಕ ಕೊಹ್ಲಿ ತಮ್ಮ ನಿವೃತ್ತಿ ಘೋಷಣೆ ಹಿಂದಿನ ಸತ್ಯಾಂಶಗಳನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಕೊಹ್ಲಿ, ತಮ್ಮ ಟಿ20ಐ ನಿವೃತ್ತಿ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ.

'ಭಾರತ ಕ್ರಿಕೆಟ್ ತಂಡದ ಭವಿಷ್ಯಕ್ಕಾಗಿ ಸಂಪೂರ್ಣವಾಗಿ ಸಿದ್ಧರಾಗಿರುವ ಹೊಸ ಆಟಗಾರರ ಗುಂಪೊಂದು ಇದೆ. ಅವರಿಗೆ ಸಮಯ ಬೇಕಾಗುತ್ತದೆ ಎಂಬ ತಿಳುವಳಿಕೆಯೊಂದಿಗೆ ಭಾರತ ತಂಡದ T20 ಅಂತರರಾಷ್ಟ್ರೀಯ ಸ್ವರೂಪವನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಂಡೆ. 2026 ರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಹೊಸ ಬ್ಯಾಚ್ ಆಟಗಾರರಿಗೆ ಸಾಕಷ್ಟು ಸಮಯವನ್ನು ನೀಡಲು ಬಯಸುತ್ತೇನೆ.

ಹೊಸ ಆಟಗಾರರು ಚುಟುಕು ಕ್ರಿಕೆಟ್ ನಲ್ಲಿ ಅಭಿವೃದ್ಧಿ ಹೊಂದಲು, ಒತ್ತಡವನ್ನು ನಿಭಾಯಿಸಲು, ಪ್ರಪಂಚದ ವಿವಿಧ ಭಾಗಗಳಲ್ಲಿ ಆಡಲು ಸಾಕಷ್ಟು ಅವಕಾಶಗಳು ಬೇಕಾಗುತ್ತವೆ. ಆದ್ದರಿಂದ ವಿಶ್ವಕಪ್ ಬಂದಾಗ, ಅವರು ಸಂಪೂರ್ಣವಾಗಿ ಸಿದ್ಧರಾಗಿ ಇರಬೇಕಾಗುತ್ತದೆ ಎಂದು ವಿರಾಟ್ ಕೊಹ್ಲಿ ಹೇಳಿದರು.

'ನೀವು ತಂಡವನ್ನು ತೊರೆಯುವ ಸಂದರ್ಭದಲ್ಲಿ ಆ ತಂಡ ಉತ್ತಮ ಸ್ಥಾನದಲ್ಲಿರಲಿ ಎಂದು ಆಶಿಸುತ್ತೀರಿ. ಮುಂದಿನ ಎಂಟು ವರ್ಷಗಳ ಕಾಲ ಜಗತ್ತನ್ನು ಎದುರಿಸಲು ಸಿದ್ಧವಾಗಿರುವ ತಂಡ ನಮ್ಮಲ್ಲಿದೆ. ಶುಭ್‌ಮನ್ ಅತ್ಯುತ್ತಮ, ಶ್ರೇಯಸ್ ಫಂಟ್ಯಾಸ್ಟಿಕ್, ಕೆಎಲ್‌ ರಾಹುಲ್‌ ಮ್ಯಾಚ್‌ ಫಿನಿಷರ್‌, ಹಾರ್ದಿಕ್ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮರಾಗಿದ್ದಾರೆ.. ಹೀಗೆ ನೋಡಿದರೆ ನಮ್ಮ ಭಾರತದ ತಂಡ ಅದ್ಭುತವಾಗಿದೆ. ಕಠಿಣ ಆಸ್ಟ್ರೇಲಿಯಾ ಪ್ರವಾಸದ ನಂತರ ನಾವು ಪುಟಿದೇಳಲು ಬಯಸಿದ್ದೆವು. ದೊಡ್ಡ ಪಂದ್ಯಾವಳಿಯನ್ನು ಗೆಲ್ಲಲು ಬಯಸಿದ್ದೆವು. ಅದೇ ಥರ ಆಡಿ ತೋರಿಸಿದ್ದೇವೆ. ಅದಕ್ಕಾಗಿಯೇ ಇದು ಅದ್ಭುತ ಭಾವನೆ ಎಂದನಿಸುತ್ತದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇನ್ನು ಚೇಸಿಂಗ್ ಮಾಸ್ಟರ್, ರನ್ ಮೆಷಿನ್ ಎಂದೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಭಾರತ ತಂಡಕ್ಕಾಗಿ ಒಟ್ಟು 125 ಪಂದ್ಯಗಳಲ್ಲಿ ಆಡಿದ್ದು, 112 ಇನ್ನಿಂಗ್ಸ್‌ಗಳಲ್ಲಿ 48.7 ಸರಾಸರಿಯಲ್ಲಿ 4188 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಒಂದು ಶತಕ ಮತ್ತು 38 ಅರ್ಧಶತಕಗಳಿಸಿದ್ದು, ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರ ವೈಯಕ್ತಿಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ 122 ರನ್‌ಗಳು.

2027ರ ವಿಶ್ವಕಪ್ ಟೂರ್ನಿ ಬಳಿಕ ಏಕದಿನ ಕ್ರಿಕೆಟ್ ಗೂ ನಿವೃತ್ತಿ

ಇದೇ ವೇಳೆ ಏಪ್ರಿಲ್ 2ರಂದು ಗುಜರಾತ್ ಟೈಟಾನ್ಸ್ ಮತ್ತು ಆರ್​ಸಿಬಿ ನಡುವೆ ನಡೆದಿದ್ದ ಐಪಿಎಲ್ ಪಂದ್ಯಕ್ಕೂ ಮುನ್ನ ವಿರಾಟ್ ತನ್ನ ನಿವೃತ್ತಿಯ ದಿನಾಂಕ ಖಚಿತಪಡಿಸಿದ್ದರು. 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯದಾಗಿ ಆಡುವ ಇಚ್ಛೆಯನ್ನು ಕೊಹ್ಲಿ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT