ರಜತ್ ಪಾಟೀದಾರ್ - ಭುವನೇಶ್ವರ್ ಕುಮಾರ್ - ಯಶ್ ದಯಾಳ್ 
ಕ್ರಿಕೆಟ್

IPL 2025, RCB vs CSK: ವೇಗಿ ಯಶ್ ದಯಾಳ್ 'ತಂಡದ ಪ್ರಮುಖ ಬೌಲರ್'; RCB ನಾಯಕ ರಜತ್ ಪಾಟೀದಾರ್ ಮೆಚ್ಚುಗೆ!

ಪಂದ್ಯದ ನಂತರ ಗೆಲುವಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ರಜತ್ ಪಾಟೀದಾರ್, 'ಇದು ಬಿಗಿಯಾದ ಪಂದ್ಯವಾಗಿತ್ತು. ಆದರೆ, ಬ್ಯಾಟಿಂಗ್ ಮಾಡಿದ ರೀತಿಗೆ ಬ್ಯಾಟ್ಸ್‌ಮನ್‌ಗಳಿಗೆ ಶ್ರೇಯಸ್ಸು ಸಲ್ಲುತ್ತದೆ. ಬೌಲರ್‌ಗಳು ಧೈರ್ಯ ತೋರಿಸಿದ ರೀತಿ ಅದ್ಭುತವಾಗಿತ್ತು' ಎಂದು ಹೇಳಿದರು.

ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 2 ರನ್‌ಗಳ ರೋಚಕ ಜಯ ಸಾಧಿಸಿದ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಯಕ ರಜತ್ ಪಾಟೀದಾರ್, ಸಿಎಸ್‌ಕೆ ಜೊತೆಗಿನ ಘರ್ಷಣೆ 'ಬಿಗಿಯಾದ' ಪಂದ್ಯವಾಗಿ ಪರಿಣಮಿಸಿತು ಮತ್ತು ಪಂದ್ಯದಲ್ಲಿ ತಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದರು ಎಂದರು. ಈ ಗೆಲುವು ಆರ್‌ಸಿಬಿ ತಂಡವನ್ನು ಐಪಿಎಲ್ 2025 ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದೆ. ಐಪಿಎಲ್ 2025ನೇ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳಲ್ಲಿ ಎಂಟರಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಸಿಎಸ್‌ಕೆ ತಂಡವು ಟೂರ್ನಿಯಲ್ಲಿ ಒಂಬತ್ತನೇ ಪಂದ್ಯದಲ್ಲಿ ಸೋಲು ಕಂಡಿದೆ.

ಪಂದ್ಯದ ನಂತರ ಗೆಲುವಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ರಜತ್ ಪಾಟೀದಾರ್, 'ಇದು ಬಿಗಿಯಾದ ಪಂದ್ಯವಾಗಿತ್ತು. ಆದರೆ, ಬ್ಯಾಟಿಂಗ್ ಮಾಡಿದ ರೀತಿಗೆ ಬ್ಯಾಟ್ಸ್‌ಮನ್‌ಗಳಿಗೆ ಶ್ರೇಯಸ್ಸು ಸಲ್ಲುತ್ತದೆ. ಬೌಲರ್‌ಗಳು ಧೈರ್ಯ ತೋರಿಸಿದ ರೀತಿ ಅದ್ಭುತವಾಗಿತ್ತು' ಎಂದು ಹೇಳಿದರು.

ಇದಲ್ಲದೆ, ವೇಗದ ಬೌಲರ್ ಯಶ್ ದಯಾಳ್ ಅವರನ್ನು ಶ್ಲಾಘಿಸಿದ ಅವರು, ಯಶ್ ದಯಾಳ್ ಅವರು 20ನೇ ಓವರ್‌ನಲ್ಲಿ ಅಸಾಧಾರಣವಾಗಿ ಬೌಲಿಂಗ್ ಮಾಡಿದರು. ರವೀಂದ್ರ ಜಡೇಜಾ ಮತ್ತು ಎಂಎಸ್ ಧೋನಿಯಂತಹ ಅನುಭವಿ ಬ್ಯಾಟ್ಸ್‌ಮನ್‌ಗಳ ಎದುರು 15 ರನ್‌ಗಳನ್ನು ಡಿಫೆಂಡ್ ಮಾಡಿಕೊಂಡರು ಎಂದರು.

'ಅವರು (ಯಶ್ ದಯಾಳ್) ತಂಡದ ಪ್ರಮುಖ ಬೌಲರ್ ಆಗಿದ್ದು, ಅವರು ಡೆತ್ ಸ್ಪೆಷಲಿಸ್ಟ್. ಕೊನೆಯ ಓವರ್ ಅನ್ನು ಯಶ್‌ಗೆ ನೀಡುವುದು ಸ್ಪಷ್ಟವಾದ ಆಲೋಚನೆಯಾಗಿತ್ತು. ಕಳೆದ ವರ್ಷ ಸಹ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ನನಗೆ ಅವರ ಬಗ್ಗೆ ಹೆಮ್ಮೆಯಿದೆ. ನನಗೆ ಸುಯಾಶ್ ಅವರ ಮೇಲೂ ವಿಶ್ವಾಸವಿತ್ತು, ಇಲ್ಲಿಯವರೆಗೆ, ಅವರು ಆರ್‌ಸಿಬಿ ಪರ ಉತ್ತಮ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಆ ನಿರ್ಧಾರ 50-50 ಆಗಿತ್ತು. ಆದರೆ, ನಾನು ನನ್ನ ಬೌಲರ್‌ಗೆ ಬೆಂಬಲ ನೀಡಿದ್ದೇನೆ ಮತ್ತು ಅವರು ಉತ್ತಮ ಪ್ರದರ್ಶನ ನೀಡಿದರು' ಎಂದು 31 ವರ್ಷದ ಆಟಗಾರ ಹೇಳಿದರು.

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರೊಮಾರಿಯೊ ಶೆಫರ್ಡ್ (14 ಎಸೆತಗಳಲ್ಲಿ 53* ರನ್‌) ಮತ್ತು ಲುಂಗಿ ಎನ್‌ಗಿಡಿ (4 ಓವರ್‌ಗಳಲ್ಲಿ 3/30) ಅವರನ್ನು ಶ್ಲಾಘಿಸಿದರು.

'ಬ್ಯಾಟಿಂಗ್‌ಗೆ ಬಂದ ಕೂಡಲೇ ಆ ದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವುದು ಸುಲಭವಲ್ಲ; ಅವರಿಗೆ ಆ ಶಕ್ತಿ ಮತ್ತು ಕೌಶಲ್ಯವಿದೆ. ನಾನು ಅವರ ದೀರ್ಘ ಸಿಕ್ಸರ್‌ಗಳನ್ನು ಆನಂದಿಸುತ್ತಿದ್ದೇನೆ. ಅವರು (ಲುಂಗಿ ಎನ್‌ಗಿಡಿ) ಸಾಕಷ್ಟು ಅನುಭವಿ ಬೌಲರ್ ಮತ್ತು ಸಾಕಷ್ಟು ವೈಟ್-ಬಾಲ್ ಕ್ರಿಕೆಟ್ ಆಡಿದ್ದಾರೆ ಮತ್ತು ನನಗೆ ಅವರ ಮೇಲೆ ವಿಶ್ವಾಸವಿದೆ. ಅಂಕಪಟ್ಟಿಯಲ್ಲಿ ಮೇಲಿರುವುದು ಸಕಾರಾತ್ಮಕವಾಗಿದೆ. ನಾವು ಪ್ಲೇಆಫ್‌ಗೆ ಅರ್ಹತೆ ಪಡೆಯುವುದರ ಗುರಿಯನ್ನು ಹೊಂದಿಲ್ಲ. ಉಳಿದಿರುವ ಮೂರು ಪಂದ್ಯಗಳು ಹೆಚ್ಚು ನಿರ್ಣಾಯಕ ಮತ್ತು ನಾವು ಮೂರು ಪಂದ್ಯಗಳಲ್ಲಿ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ. ಸ್ವಲ್ಪ ಪಾರ್ಟಿ ಮಾಡುತ್ತೇವೆ ಆದರೆ ಕೊನೆಯಲ್ಲಿ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT