ದಿಗ್ವೇಶ್ ರಾಠಿ 
ಕ್ರಿಕೆಟ್

IPL 2025: 'ನೋಟ್ ಬುಕ್' ಸಂಭ್ರಮಾಚರಣೆ ಮಾಡಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ದಿಗ್ವೇಶ್ ರಾಠಿ; ಬಿಸಿಸಿಐ ದಂಡ?

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ ನಂತರ ದಿಗ್ವೇಶ್ ನೋಟ್‌ಬುಕ್ ಸಂಭ್ರಮಾಚರಣೆ ನಡೆಸಿದರು.

ಲಕ್ನೋ ಸೂಪರ್ ಜೈಂಟ್ಸ್ (LSG) ಸ್ಪಿನ್ನರ್ ದಿಗ್ವೇಶ್ ರಾಠಿ ಭಾನುವಾರ ಪಂಜಾಬ್ ಕಿಂಗ್ಸ್ (PBKS) ವಿರುದ್ಧದ ಐಪಿಎಲ್ 2025ರ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಪಡೆದು ತಮ್ಮ 'ನೋಟ್‌ಬುಕ್' ಸಂಭ್ರಮಾಚರಣೆಯನ್ನು ಮತ್ತೆ ಆರಂಭಿಸಿದರು. ಪಂದ್ಯಾವಳಿಯ ಅತ್ಯಂತ ಚರ್ಚೆಗೆ ಗ್ರಾಸವಾದ ಆಚರಣೆಗಳಲ್ಲಿ ಒಂದಾದ ದಿಗ್ವೇಶ್ ಅವರ ಸಂಭ್ರಮಾಚರಣೆ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಮತ್ತು ಹಲವು ಬಾರಿ ದಂಡ ವಿಧಿಸಲು ಕಾರಣವಾಗಿದೆ. ದಂಡ ವಿಧಿಸಿದ ಬಳಿಕ ದಿಗ್ವೇಶ್ ತಮ್ಮ ಸಂಭ್ರಮಾಚರಣೆಯನ್ನು ಮೈದಾನದಲ್ಲಿ ಕೂತು ಮಾಡುತ್ತಿದ್ದರು. ಶ್ರೇಯಸ್ ಅಯ್ಯರ್ ಮತ್ತು ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಔಟ್ ಮಾಡಿದ ನಂತರ, ದಿಗ್ವೇಶ್ ತಮ್ಮ ವಿಶಿಷ್ಟ ಸಂಭ್ರಮಾಚರಣೆಯನ್ನು ಮತ್ತೆ ಆರಂಭಿಸಿದರು.

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದ ನಂತರ ದಿಗ್ವೇಶ್ ನೋಟ್‌ಬುಕ್ ಸಂಭ್ರಮಾಚರಣೆ ನಡೆಸಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಪ್ರಬ್‌ಸಿಮ್ರನ್ ವಿಕೆಟ್ ಪಡೆದ ನಂತರ ಅವರು ಅದನ್ನು ಮತ್ತೊಮ್ಮೆ ಮಾಡಿದರು.

ಇದಕ್ಕೂ ಮೊದಲು ಎಲ್‌ಎಸ್‌ಜಿ ಮತ್ತು ಪಿಬಿಕೆಎಸ್ ನಡುವೆ ನಡೆದ ಪಂದ್ಯದ ವೇಳೆ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದಾಗ, ದಿಗ್ವೇಶ್ ಅವರು ಮೊದಲಿಗೆ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿದ್ದರು. ಆಗ ಬಿಸಿಸಿಐ ದಂಡ ವಿಧಿಸಿತ್ತು.

ಈ ಆವೃತ್ತಿಯ ಆರಂಭದಲ್ಲಿ ದಿಗ್ವೇಶ್‌ ರಾಠಿ ಅವರಿಗೆ ಪದೇ ಪದೆ ದಂಡ ವಿಧಿಸಲಾಗಿತ್ತು. ನಂತರ ಅವರು ತಮ್ಮ ಸಂಭ್ರಮಾಚರಣೆಯನ್ನು ಕೈಯಿಂದ ಮೈದಾನದಲ್ಲಿ ನೆಲದ ಮೇಲೆ ಮಾಡುತ್ತಿದ್ದರು. ಆದಾಗ್ಯೂ, ಭಾನುವಾರದ ಪಂದ್ಯದ ವೇಳೆ ಮತ್ತೆ ಕೈಯಿಂದ ಸಂಭ್ರಮಾಚರಣೆ ಮಾಡಿದರು. ಇದೀಗ ಮತ್ತೊಮ್ಮೆ ಬಿಸಿಸಿಐ ದಿಗ್ವೇಶ್‌ಗೆ ದಂಡ ವಿಧಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಆದಾಗ್ಯೂ, ಪಂಜಾಬ್ ಕಿಂಗ್ಸ್ ತಂಡ ಎಲ್‌ಎಸ್‌ಜಿ ವಿರುದ್ಧ 37 ರನ್‌ಗಳ ಸಮಗ್ರ ಜಯ ಸಾಧಿಸಿತು. ಐಪಿಎಲ್ 2025 ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆಡಿರುವ 11 ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ಮೀರಾಬಾಯಿ ಚಾನುಗೆ ಬೆಳ್ಳಿ ಪದಕ: 98ರ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮೊದಲ ಪದಕ!

ಕೊನೆಗೂ ಭಾರತವೇ ಬೇಕಾಯ್ತು: Iran ಸಮಸ್ಯೆಗೆ IMEEC ಒಂದೇ ಪರಿಹಾರ- Donald Trump

ಭೀಕರ ಅಪಘಾತ; ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಪಿಕಪ್ ಕ್ರೇನ್, Video

ಜಪಾನ್ ವಿರುದ್ಧ ಗೋಲ್ಡನ್ ಡಕ್; Unwanted Record ಸೃಷ್ಟಿಸಿದ ಅಭಿಷೇಕ್ ಶರ್ಮಾ: ಈ ದಾಖಲೆ ಮುರಿಯುವುದು ಯಾರಿಗೂ ಅಸಾಧ್ಯ!