ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 
ಕ್ರಿಕೆಟ್

ಟೆಸ್ಟ್ ಕ್ರಿಕೆಟ್ ನಿವೃತ್ತಿ ಬೆನ್ನಲ್ಲೇ ಪತ್ನಿ Anushka ಜೊತೆ ವೃಂದಾವನಕ್ಕೆ Virat Kohli ಭೇಟಿ; ಶ್ರೀಕೃಷ್ಣನ ದರ್ಶನ!

ವೃಂದಾವನದಲ್ಲಿ, ವಿರಾಟ್ ಮತ್ತು ಅನುಷ್ಕಾ ಸಂತ ಪ್ರೇಮಾನಂದ ಗೋವಿಂದ ಶರಣ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.

ಮುಂಬೈ: ಟೆಸ್ಟ್ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ವೃಂದಾವನಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.

ಶ್ರೀಕೃಷ್ಣತನ್ನ ಬಾಲ್ಯವನ್ನು ಕಳೆದ ಪವಿತ್ರ ಪಟ್ಟಣ ವೃಂದಾವನಕ್ಕೆ ಕೊಹ್ಲಿ ಮತ್ತು ಅನುಷ್ಕಾ ಭೇಟಿ ನೀಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೃಂದಾವನದಲ್ಲಿ, ವಿರಾಟ್ ಮತ್ತು ಅನುಷ್ಕಾ ಸಂತ ಪ್ರೇಮಾನಂದ ಗೋವಿಂದ ಶರಣ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.

ವಿರುಷ್ಕಾ ದಂಪತಿ ಈ ಹಿಂದೆ ಕೆಲವು ವರ್ಷಗಳಿಂದ ಹಲವಾರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವರ್ಷದ ಜನವರಿಯಲ್ಲಿ, ವಿರಾಟ್, ಅನುಷ್ಕಾ ಶರ್ಮಾ ಮತ್ತು ಅವರ ಮಕ್ಕಳು ಪ್ರೇಮಾನಂದ್ ಜಿ ಮಹಾರಾಜರ ಆಶೀರ್ವಾದ ಪಡೆಯಲು ವೃಂದಾವನಕ್ಕೆ ಭೇಟಿ ನೀಡಿದರು. ಅದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

2023 ರಲ್ಲಿ ದಂಪತಿಗಳು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು, ಈ ಜೋಡಿ ಉತ್ತರಾಖಂಡದ ಕೈಂಚಿ ಧಾಮ್‌ನಲ್ಲಿರುವ ನೀಮ್ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು.

ಕೊಹ್ಲಿ ದಿಢೀರ್ ನಿವೃತ್ತಿ

ಇನ್ನು ವಿರಾಟ್ ಕೊಹ್ಲಿ ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದರು. 2011ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ 14 ವರ್ಷಗಳ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಅಂತ್ಯಗೊಳಿಸಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ 123 ಟೆಸ್ಟ್ ಪಂದ್ಯಗಳನ್ನಾಡಿದ್ದು 9,230 ರನ್ ಗಳಿಸಿದ್ದಾರೆ. ಈ ಪೈಕಿ 30 ಶತಕಗಳು ಮತ್ತು 31 ಅರ್ಧಶತಕಗಳು ಸೇರಿವೆ.

ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಕೊಹ್ಲಿ ತಮ್ಮ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಿಳಿಸಿದ್ದಾರೆ ಎಂಬ ವರದಿಯ ನಂತರ ವಿರಾಟ್ ಅವರ ಟೆಸ್ಟ್ ನಿವೃತ್ತಿ ನಿರ್ಧಾರ ಹೊರಬಿದ್ದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತೀವ್ರ ವಿರೋಧದ ನಡುವೆಯೂ ಬಾನು ಮುಷ್ತಾಕ್ ಗೆ ದಸರಾ ಉದ್ಘಾಟನೆಗೆ ಜಿಲ್ಲಾಡಳಿತ ಅಧಿಕೃತ ಆಹ್ವಾನ! Video

ಪಾಕ್ ಹುಟ್ಟಡಗಿಸಿದ್ದ 'Game-Changer': ಭಾರತದ ಬತ್ತಳಿಕೆ ಸೇರಲಿವೆ ಮತ್ತಷ್ಟು S-400 ಏರ್ ಡಿಫೆನ್ಸ್ ಸಿಸ್ಟಮ್ಸ್!

Indian Stock Market: GST ಕೌನ್ಸಿಲ್ ಸಭೆ ಎಫೆಕ್ಟ್, Sensex 410 ಅಂಕ ಏರಿಕೆ, ರೂಪಾಯಿ ಮೌಲ್ಯವೂ ಏರಿಕೆ!

Dharmasthala: ಸೌಜನ್ಯಾ ಪ್ರಕರಣದಲ್ಲಿ SIT ಮುಂದೆ ಹಾಜರಾದ Uday jain ಹೇಳಿದ್ದೇನು?

ವಿದೇಶಿಗರಿಂದ ಧರ್ಮೋಪದೇಶ ನಿಷೇಧ: ಮಿಲಾದ್-ಉನ್-ನಬಿ ಆಯೋಜಕರಿಗೆ ಪರಮೇಶ್ವರ ಸ್ಪಷ್ಟನೆ

SCROLL FOR NEXT