ಶ್ರೇಯಸ್ ಅಯ್ಯರ್ 
ಕ್ರಿಕೆಟ್

IPL 2025: 'ಬೆನ್ನಿಗೆ ಚೂರಿ ಹಾಕುವುದು ಸುಲಭ...'; ಡ್ರೆಸ್ಸಿಂಗ್ ರೂಂ ಮನಸ್ಥಿತಿ ಬಗ್ಗೆ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್

'ಕಳೆದ ಕೆಲವು ವರ್ಷಗಳಿಂದ ರಿಕಿ ಮತ್ತು ನನ್ನ ನಡುವೆ ಸೌಹಾರ್ದತೆ ಇದೆ. ಅವರು ನನಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾರೆ. ಅವರು ಮೈದಾನದಲ್ಲಿ ನನಗೆ ನಿರ್ಣಾಯಕವಾಗಿರಲು ಅವಕಾಶ ನೀಡುತ್ತಾರೆ. ಇದೆಲ್ಲವೂ ಉತ್ತಮ ರೀತಿಯಲ್ಲಿ ಕೊನೆಗೊಂಡಿದೆ' ಎಂದು ಅಯ್ಯರ್ ಪಂದ್ಯದ ನಂತರ ಹೇಳಿದರು.

ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಂಜಾಬ್ ಕಿಂಗ್ಸ್ (PBKS) ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಮೂಲಕ ಕ್ವಾಲಿಫೈಯರ್ ಪಂದ್ಯ ಆಡುವ ಅವಕಾಶವನ್ನು ಖಚಿತಪಡಿಸಿಕೊಂಡಿದೆ. 'ನನ್ನ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸ್ವಾತಂತ್ರ್ಯ' ನೀಡಿದ್ದಕ್ಕಾಗಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರಿಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಧನ್ಯವಾದ ಅರ್ಪಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಮೂರನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಅವರನ್ನು ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೈಬಿಡಲಾಗಿತ್ತು. ಬಳಿಕ ಪಂಜಾಬ್ ಕಿಂಗ್ಸ್ ತಂಡ ಅಯ್ಯರ್ ಅವರನ್ನು ಖರೀದಿಸಿತ್ತು. ಇದೀಗ 2014ರ ನಂತರ ಮೊದಲ ಬಾರಿಗೆ ಪಂಜಾಬ್ ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸುವ ಮೂಲಕ ಅಯ್ಯರ್ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

'ಕಳೆದ ಕೆಲವು ವರ್ಷಗಳಿಂದ ರಿಕಿ ಮತ್ತು ನನ್ನ ನಡುವೆ ಸೌಹಾರ್ದತೆ ಇದೆ.ಅವರು ನನಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾರೆ. ಅವರು ಮೈದಾನದಲ್ಲಿ ನನಗೆ ನಿರ್ಣಾಯಕವಾಗಿರಲು ಅವಕಾಶ ನೀಡುತ್ತಾರೆ. ಇದೆಲ್ಲವೂ ಉತ್ತಮ ರೀತಿಯಲ್ಲಿ ಕೊನೆಗೊಂಡಿದೆ' ಎಂದು ಅಯ್ಯರ್ ಪಂದ್ಯದ ನಂತರ ಹೇಳಿದರು.

'ಪ್ರತಿಯೊಬ್ಬರೂ ಸರಿಯಾದ ಸಮಯದಲ್ಲಿ ಫಾರ್ಮ್ ಕಂಡುಕೊಂಡರು. ಮೊದಲ ಪಂದ್ಯದಿಂದಲೇ ನಾವು ಪರಿಸ್ಥಿತಿಯ ಹೊರತಾಗಿಯೂ ಗೆಲ್ಲಬೇಕೆಂಬ ಮನಸ್ಥಿತಿಯಲ್ಲಿದ್ದೆವು. ನಾವು ಸಂಕಷ್ಟದಲ್ಲಿದ್ದಾಗ ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ತಂಡಕ್ಕೆ ಬೆಂಬಲ ನೀಡಿದ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೂ ಧನ್ಯವಾದಗಳು' ಎಂದರು.

'ಆಟಗಾರರ ನಿರ್ವಹಣೆಯಲ್ಲಿ ರಿಕಿ ಅದ್ಭುತವಾಗಿದ್ದಾರೆ, ಅವರ ವಿಶ್ವಾಸ ಗಳಿಸುವುದು ನನಗೂ ಮುಖ್ಯ. ತಂಡ ಆರಂಭಿಕ ಹಂತದಲ್ಲಿ ಗೆಲುವು ಕಂಡಾಗಲೇ ಅದು ಸಂಭವಿಸಿತು. ಅವರೊಂದಿಗೆ ಮಾತುಕತೆಗಳನ್ನು ಸಹ ನಡೆಸಿದ್ದೆ. ನೀವು ಪಂದ್ಯಾವಳಿಯ ಉದ್ದಕ್ಕೂ ಉತ್ತಮ ಸಂಬಂಧ ಕಾಪಾಡಿಕೊಳ್ಳಬೇಕು. ಡ್ರೆಸ್ಸಿಂಗ್ ರೂಮ್ ವಾತಾವರಣ ಕೂಡ ಅತ್ಯುತ್ತಮವಾಗಿದೆ. ನೀವು ಕುಸಿತ ಕಾಣುತ್ತಿರುವಾಗ, ಪರಸ್ಪರ ಬೆನ್ನಿಗೆ ಚೂರಿ ಹಾಕುವುದು ಸುಲಭ' ಎಂದು ಅವರು ಹೇಳಿದರು.

ಪ್ರಿಯಾಂಶ್ ಆರ್ಯ (35 ಎಸೆತಗಳಲ್ಲಿ 62) ಮತ್ತು ಜೋಶ್ ಇಂಗ್ಲಿಸ್ (42 ಎಸೆತಗಳಲ್ಲಿ 73) ಅವರ ಅದ್ಭುತ ಇನಿಂಗ್ಸ್‌ಗಳನ್ನು ಅಯ್ಯರ್ ಶ್ಲಾಘಿಸಿದರು.

'ಪ್ರಿಯಾಂಶ್ ಆರಂಭ ಮಾಡಿದ ರೀತಿ ಅದ್ಭುತವಾಗಿತ್ತು, ಯುವ ಆಟಗಾರ ನಿರ್ಭೀತರು. ಅವರು ನೆಟ್ಸ್‌ನಲ್ಲಿ ಎಲ್ಲಾ ರೀತಿಯಲ್ಲೂ ಟಿಕ್ ಮಾಡುತ್ತಾರೆ. ಪೂರ್ವಸಿದ್ಧತೆಯ ಪರಿಣಾಮಗಳು ಈಗ ಮೈದಾನದಲ್ಲಿ ಕಾಣಿಸುತ್ತಿವೆ. ಇಂಗ್ಲಿಸ್ ಮಾತ್ರ ತಮ್ಮ ಸ್ಥಾನ ಬದಲಾಯಿಸುತ್ತಾ ಬಂದಿದ್ದಾರೆ. ಅವರು ಹೊಸ ಚೆಂಡನ್ನು ಆಡಲು ಇಷ್ಟಪಡುವುದರಿಂದ, ಅವರು ಹೆಚ್ಚಿನ ಎಸೆತಗಳನ್ನು ಆಡಬೇಕೆಂದು ನಾನು ಬಯಸಿದ್ದೆ. ಇದು ಈಗ ಅದ್ಭುತಗಳನ್ನು ಮಾಡಿದೆ. ಅವರು ವಿನಾಶಕಾರಿ ಮತ್ತು ಉತ್ತಮ ಮನೋಭಾವ ಹೊಂದಿರುವ ದೊಡ್ಡ ಆಟಗಾರ ಎಂದು ನಮಗೆ ತಿಳಿದಿದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT