ಸ್ವಸ್ತಿಕ್ ಚಿಕಾರ ದೂರ ತಳ್ಳಿದ ಸಹ ಆಟಗಾರರು 
ಕ್ರಿಕೆಟ್

IPL 2025: 'ಫೋಟೋದಲ್ಲಾದ್ರೂ ನಮಗೆ ಬಿಡು..'; Virat Kohliಯಿಂದ Swastik Chikara ದೂರ ತಳ್ಳಿದ Tim David

ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾಲಿಫೈಯರ್ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿರುವ ಆರ್ ಸಿಬಿ ತಂಡ ಫೋಟೋ ಶೂಟ್ ನಲ್ಲಿ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ ಕೊಹ್ಲಿ ಹಿಂದೆ ಹೋಗಿ ನಿಂತಿದ್ದರು.

ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಪ್ರಶಸ್ತಿ ಸೆಣಸಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿದ್ಧವಾಗಿರುವಂತೆಯೇ ತಂಡದ ಫೋಟೋ ಶೂಟ್ ನಲ್ಲಿ ಕಾಮಿಡಿ ಘಟನೆಯೊಂದು ನಡೆದಿದೆ.

ಹೌದು.. ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾಲಿಫೈಯರ್ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿರುವ ಆರ್ ಸಿಬಿ ತಂಡ ಫೋಟೋ ಶೂಟ್ ನಲ್ಲಿ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ ಕೊಹ್ಲಿ ಹಿಂದೆ ಹೋಗಿ ನಿಂತಿದ್ದರು.

ಈ ವೇಳೆ ತಂಡದ ಇತರೆ ಆಟಗಾರರೂ ಕೂಡ ಅಲ್ಲಿಗೆ ಬಂದರು. ಇದೇ ಸಂದರ್ಭದಲ್ಲಿ ಕೊಹ್ಲಿ ಕುರ್ಚಿ ಹಿಂದೆ ನಿಂತಿಕ್ಕ ಸ್ವಸ್ತಿಕ್ ಚಿಕಾರ ಅವರನ್ನು ಟಿಮ್ ಡೇವಿಡ್ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಪಕ್ಕಕ್ಕೆ ತಳ್ಳಿ.. ಏಯ್ ಆ ಕಡೆ ಹೋಗೋ.. ಫೋಟೋದಲ್ಲಾದ್ರೂ ಕೊಹ್ಲಿಯನ್ನು ನಮಗೆ ಬಿಡು ಎಂಬರ್ಥದಲ್ಲಿ ದೂರ ತಳ್ಳಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಡೀ ತಂಡ ಗ್ರೂಪ್ ಫೋಟೋಗಾಗಿ ಮೈದಾನದಲ್ಲಿ ಸೇರಿತ್ತು. ಇದಕ್ಕಾಗಿ ಮುಂದಿನ ಸಾಲಿನಲ್ಲಿ ಕುರ್ಚಿಗಳನ್ನು ಸಹ ಇರಿಸಲಾಗಿತ್ತು. ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ಅದರ ಮೇಲೆ ಕುಳಿತುಕೊಳ್ಳುತ್ತಿದ್ದರು. ಉಳಿದ ಆಟಗಾರರು ಅವರ ಹಿಂದೆ ಸಾಲಿನಲ್ಲಿ ನಿಲ್ಲಲು ಆರಂಭಿಸಿದರು. ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ ಕೂಡ ಗ್ರೂಪ್ ಫೋಟೋಗಾಗಿ ಕೊಹ್ಲಿ ಹಿಂದೆ ನಿಂತಿದ್ದರು.

ಈ ವೇಳೆ ಅಲ್ಲಿಗೆ ಬಂದ ಟಿಮ್ ಡೇವಿಡ್ ಚಿಕಾರನನ್ನು ಕೊಹ್ಲಿಯಿಂದ ದೂರ ತಳ್ಳಿದರು. ಅಲ್ಲಿಗೆ ಸುಮ್ಮನಾಗದ ಚಿಕಾರ ಮತ್ತೆ ಕೊಹ್ಲಿ ಬಳಿಕ ಬರಲು ಪ್ರಯತ್ನಿಸಿದರು. ಆಗ ಅಲ್ಲೇ ನಿಂತಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಮತ್ತೆ ಚಿಕಾರನನ್ನು ದೂರ ತಳ್ಳಿದರು.

ಡ್ರೆಸಿಂಗ್ ರೂಮ್ ನಲ್ಲಿ ಕೊಹ್ಲಿ ಬಲಗೈ ಭಂಟ ಚಿಕಾರ

ಇನ್ನು ಟಿಮ್ ಡೇವಿಡ್ ಮತ್ತು ಲಿವಿಂಗ್ ಸ್ಟೋನ್ ಚಿಕಾರರನ್ನು ತಳ್ಳಲು ಕಾರಣ ಇದೆ. ಅದೇನೆಂದರೆ ಆರ್ ಸಿಬಿ ತಂಡದ ಯಾವುದೇ ಕಾರ್ಯಕ್ರಮದಲ್ಲಿ ಕೊಹ್ಲಿಯ ಹಿಂದೆ ಮುಂದೆ ಯಾವಾಗಲೂ ಸ್ವಸ್ತಿಕ್ ಚಿಕಾರ ಇರುತ್ತಾರೆ. ವಾಸ್ತವವಾಗಿ ಇದೇ ಮೊದಲ ಬಾರಿಗೆ ಆರ್​ಸಿಬಿ ಪಾಳಯ ಸೇರಿಕೊಂಡಿರುವ ಸ್ವಸ್ತಿಕ್ ಚಿಕಾರ, ಕೊಹ್ಲಿಯ ಬಾಲವಾಗಿಬಿಟ್ಟಿದ್ದಾರೆ. ಲೈವ್ ಪಂದ್ಯದಲ್ಲೂ ಡ್ರೇಸಿಂಗ್ ರೂಮ್​ನಲ್ಲೂ, ಡಗೌಟ್​ನಲ್ಲೂ ಕೊಹ್ಲಿ ಹಿಂದೆ ಚಿಕಾರ ಇದ್ದೇ ಇರುತ್ತಾರೆ.

ಕೊಹ್ಲಿಯೇ ಈತ ಬೇಡ ಎಂದಿದ್ದರು

ಯಾವಾಗಲೂ ಕೊಹ್ಲಿ ಜೊತೆ ಇರುವ ಸ್ವಸ್ತಿಕ್ ಚಿಕಾರಾ ಸದಾ ಕಾಲ ತುಂಟಾಟ ಮಾಡುತ್ತಿರುತ್ತಾರಂತೆ. ಅವರ ಕಾಟಕ್ಕೆ ಸ್ವತಃ ಕೊಹ್ಲಿಯೇ ಬೇಸತ್ತು ಹೋಗಿದ್ದರಂತೆ. ಸ್ವಸ್ತಿಕ್ ಅವರ ನಡೆಯಿಂದ ಕೊಹ್ಲಿಗೂ ಇರಿಸು ಮುರಿಸಾಗಿದ್ದು, ಅವರು ಕೂಡ ಈ ಹಿಂದಿನ ಸಂದರ್ಶನದಲ್ಲಿ ಚಿಕಾರನನ್ನು ನನ್ನ ರೂಮ್​ನಲ್ಲಿ ಇರಿಸಿಕೊಳ್ಳಲು ಬಯಸುವುದಿಲ್ಲ ಎಂದಿದ್ದರು.

ಆರ್​ಸಿಬಿ ಆಟಗಾರರು ಕೂಡ ಚಿಕಾರನನ್ನು ಇದೇ ವಿಷಯವಾಗಿ ಸಾಕಷ್ಟು ಬಾರಿ ಕೀಟಲೆ ಮಾಡಿದ್ದಾರೆ. ಇದೀಗ ಫೋಟೋ ಶೂಟ್ ಸಮಯದಲ್ಲೂ ಚಿಕಾರ, ವಿರಾಟ್ ಬಳಿ ಬಂದಾಗ, ತಂಡದ ಆಟಗಾರರು ಚಿಕಾರನನ್ನ ಕೀಟಲೆ ಮಾಡಿದ್ದಾರೆ.

ಸ್ಫೋಟಕ ಆಲ್ರೌಂಡರ್

ಅಂದಹಾಗೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸ್ವಸ್ತಿಕ್ ಚಿಕಾರ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ, ಅವರಿಗೆ ಐಪಿಎಲ್ 2025 ರಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಉತ್ತರ ಪ್ರದೇಶ ಪರ ದೇಶೀಯ ಕ್ರಿಕೆಟ್ ಆಡುವ ಸ್ವಸ್ತಿಕ್ ಚಿಕಾರ, ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ.

ಈ ಅವಧಿಯಲ್ಲಿ, ಅವರು 33.33 ಸರಾಸರಿಯಲ್ಲಿ 200 ರನ್ ಗಳಿಸಿದ್ದಾರೆ, ಇದರಲ್ಲಿ 1 ಶತಕವೂ ಸೇರಿದೆ. ಅವರು 2 ಪ್ರಥಮ ದರ್ಜೆ ಪಂದ್ಯಗಳಲ್ಲಿ 74 ರನ್ ಮತ್ತು 4 ಟಿ20 ಪಂದ್ಯಗಳಲ್ಲಿ 15 ರನ್ ಗಳಿಸಿದ್ದಾರೆ. ಆದಾಗ್ಯೂ, ಚಿಕಾರಾ ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಬಹಳ ಕಡಿಮೆ ಅನುಭವವಿದೆ.

ಆದರೆ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ, ಅವರು ಯುಪಿ ಟಿ20 ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಚಿಕಾರ 12 ಪಂದ್ಯಗಳಲ್ಲಿ 49.90 ಸರಾಸರಿ ಮತ್ತು 185 ಸ್ಟ್ರೈಕ್ ರೇಟ್‌ನಲ್ಲಿ 499 ರನ್ ಗಳಿಸಿದರು. ಈ ಅವಧಿಯಲ್ಲಿ, ಅವರ ಬ್ಯಾಟ್‌ನಿಂದ 5 ಅರ್ಧಶತಕಗಳು ಮತ್ತು 1 ಶತಕ ಕೂಡ ಸಿಡಿದಿತ್ತು.

ಸಿಕ್ಸರ್ ಗಳ ದಾಖಲೆ

ಸ್ವಸ್ತಿಕ್ ಚಿಕಾರ ಅವರ ಸಿಕ್ಸರ್‌ಗಳ ದಾಖಲೆಯು ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಅವರ ಬ್ಯಾಟಿಂಗ್ ಸಾಮರ್ಥ್ಯ ಗಮನಾರ್ಹವಾಗಿದೆ. ಅವರು ಒಂದೇ ಇನ್ನಿಂಗ್ಸ್‌ನಲ್ಲಿ ದಾಖಲೆಯ 52 ಸಿಕ್ಸರ್‌ ಗಳನ್ನು ಸಿಡಿಸಿದ್ದರು. ಇದು ಕ್ರಿಕೆಟ್ ಜಗತ್ತಿನಲ್ಲಿ ಗಮನ ಸೆಳೆದಿರುವ ಒಂದು ಸಾಧನೆಯಾಗಿದೆ. ಚಿಕಾರ ಅವರ ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯವು ಭರವಸೆಯ ಆಲ್‌ರೌಂಡರ್ ಎಂಬ ಖ್ಯಾತಿಯ ಪ್ರಮುಖ ಭಾಗವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT