ಹರ್ಮನ್‌ಪ್ರೀತ್ ಕೌರ್ , ಸ್ಮೃತಿ ಮಂಧಾನ 
ಕ್ರಿಕೆಟ್

ಮಹಿಳಾ ಏಕದಿನ ವಿಶ್ವಕಪ್ 2025: ಚೊಚ್ಚಲ ಪ್ರಶಸ್ತಿ ಗೆದ್ದ ಬೆನ್ನಲ್ಲೇ 'ನಾಯಕತ್ವ' ತ್ಯಜಿಸಲು ಹರ್ಮನ್‌ಪ್ರೀತ್ ಕೌರ್ ಗೆ ಹೆಚ್ಚಿದ ಒತ್ತಡ! ಕಾರಣವೇನು?

ಮುಂದಿನ ಏಕದಿನ ವಿಶ್ವಕಪ್ 2029 ಕ್ಕೆ ನಿಗದಿಯಾಗಿದ್ದು, ಮುಂದಿನ ವರ್ಷ ಯುಕೆಯಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ.

ಮುಂಬೈ: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಚೊಚ್ಚಲ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಹರ್ಮನ್‌ಪ್ರೀತ್ ಕೌರ್ ಗೆ ನಾಯಕತ್ವ' ತ್ಯಜಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಹೌದು, ತಂಡದ ಒಳಿತಿಗಾಗಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಿಂದ ಕೆಳಗಿಳಿಯಬೇಕೆಂದು ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಒತ್ತಾಯಿಸಿದ್ದಾರೆ. ಇದು ಬಹಳ ಹಿಂದಿಯೇ ಆಗಬೇಕಿತ್ತು ಎಂದು ಅವರು ಹೇಳಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ರಂಗಸ್ವಾಮಿ, ಬ್ಯಾಟ್ಸ್‌ಮನ್ ಮತ್ತು ಉತ್ತಮ ಫೀಲ್ಡರ್ ಆಗಿರುವ ಆಗಿರುವ 36 ವರ್ಷದ ಹರ್ಮನ್‌ಪ್ರೀತ್‌ ನಾಯಕತ್ವ ತ್ಯಜಿಸುವುದರಿಂದ ತುಂಬಾ ಅನುಕೂಲವಾಗಲಿದೆ. ತಂಡದ ದೀರ್ಘಾವಧಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಯನ್ನು ಮಾಡಬೇಕು ಎಂದು ಅವರು ಹೇಳಿದರು.

ಮುಂದಿನ ಏಕದಿನ ವಿಶ್ವಕಪ್ 2029 ಕ್ಕೆ ನಿಗದಿಯಾಗಿದ್ದು, ಮುಂದಿನ ವರ್ಷ ಯುಕೆಯಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ.

ಹೊಸ ನಾಯಕಿ ಯಾರು? 29 ವರ್ಷದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಹೊಸ ನಾಯಕಿ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಿರುತ್ತದೆ. ಇದು ತಡವಾಗಿದೆ. ಏಕೆಂದರೆ ಹರ್ಮನ್ ಬ್ಯಾಟ್ಸ್‌ಮನ್ ಮತ್ತು ಫೀಲ್ಡರ್ ಆಗಿ ಅದ್ಭುತ ಆಟಗಾರ್ತಿ. ಆದರೆ ಕಾರ್ಯತಂತ್ರದ ದೃಷ್ಟಿಯಿಂದ ಅವರು ಕೆಲವೊಮ್ಮೆ ಎಡವಬಹುದು. ನಾಯಕತ್ವದ ಹೊರೆ ಇಲ್ಲದೆ ಅವರು ಹೆಚ್ಚಿನ ಕೊಡುಗೆ ನೀಡಬಹುದು ಎಂದು ಭಾವಿಸುತ್ತೇನೆ. ಭಾರತೀಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ಮತ್ತು ಹರ್ಮನ್ ಅವರ ಸ್ವಂತ ಹಿತದೃಷ್ಟಿಯಿಂದ, ನಾಯಕತ್ವದ ಹೊರೆ ಇಲ್ಲದೆ ಅವರು ಬ್ಯಾಟ್ಸ್‌ಮನ್ ಆಗಿ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಹರ್ಮನ್ ಪ್ರೀತ್ ಕೌರ್ ಇನ್ನೂ ಮೂರರಿಂದ ನಾಲ್ಕು ವರ್ಷಗಳ ಕ್ರಿಕೆಟ್ ನಲ್ಲಿ ಆಡಬಹುದು. ನಾಯಕಿಯಾಗಿಲ್ಲದಿದ್ದರೆ ಅವರಿಗೆ ಆಡಲು ಹೆಚ್ಚಿನ ಅವಕಾಶ ಸಿಗುತ್ತದೆ. ಸ್ಮೃತಿಯನ್ನು ಎಲ್ಲಾ ಮಾದರಿಗಳಿಗೂ ನಾಯಕಿಯನ್ನಾಗಿ ಮಾಡಬೇಕು. ಭವಿಷ್ಯದ ವಿಶ್ವಕಪ್‌ಗಳಿಗೂ ಯೋಜನೆ ರೂಪಿಸಬೇಕಾಗುತ್ತದೆ ಎಂದು ಶಾಂತಾ ರಂಗಸ್ವಾಮಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

INDIA bloc ಅಧಿಕಾರಕ್ಕೆ ಬಂದರೆ ಬಿಹಾರ ರೈತರಿಗೆ ಬಂಪರ್ ಕೊಡುಗೆ: ತೇಜಸ್ವಿ ಯಾದವ್

ಕಬ್ಬಿಗೆ ದರ ನಿಗದಿಗೆ ಆಗ್ರಹ: ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದ ರೈತರ ಹೋರಾಟ, ಸರ್ಕಾರದ ವಿರುದ್ಧ ಆಕ್ರೋಶ

ಸಚಿವ ಸಂಪುಟ ಪುನಾರಚನೆ: ಆತುರದ ನಿರ್ಧಾರ ಕೈಗೊಳ್ಳದೆ, ಕಾದು ನೋಡುವ ತಂತ್ರ ಅಳವಡಿಸಿಕೊಂಡ 'ಕೈ' ಕಮಾಂಡ್

ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್‌ಗೆ ಆಡಳಿತ ವಿರೋಧಿ ಅಲೆ ಸಹಾಯ ಮಾಡುತ್ತದೆ: ಸಿಎಂ ಸಿದ್ದರಾಮಯ್ಯ

ನವರತ್ನ ಧಾರಣೆ: ಗ್ರಹಗಳ ಅಧಿಪತಿ 'ಸೂರ್ಯ'ನ ಫಲ ಪಡೆಯಲು ಯಾವ ರತ್ನ ಧರಿಸಬೇಕು?

SCROLL FOR NEXT