ಹರ್ಮನ್ ಪ್ರೀತ್ ಕೌರ್ ಸಂಭ್ರಮದ ವಿಡಿಯೋ 
ಕ್ರಿಕೆಟ್

ICC ಮಹಿಳಾ ಏಕದಿನ ವಿಶ್ವಕಪ್ 2025: ಹೊಸ ಸಂಭ್ರಮಾಚರಣೆಗೆ ನಾಂದಿ ಹಾಡಿದ ನಾಯಕಿ ಹರ್ಮನ್ ಪ್ರೀತ್ ಕೌರ್; Video

ಮಹಿಳಾ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಗೆಲುವಿನ ಬಳಿಕ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಹೊಸ ಸಂಭ್ರಮಾಚರಣೆಗೆ ನಾಂದಿ ಹಾಡಿದ್ದಾರೆ.

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ 13ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್​ ಕಲೆಹಾಕಿ ಆಫ್ರಿಕಾಗೆ ಗೆಲ್ಲಲು 299 ರನ್ ಗಳ ಗುರಿ ನೀಡಿತ್ತು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ 246 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು 52 ರನ್​ಗಳ ಜಯಭೇರಿ ಬಾರಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಹೊಸ ಸಂಭ್ರಮಾಚರಣೆಗೆ ನಾಂದಿ ಹಾಡಿದ ಹರ್ಮನ್ ಪ್ರೀತ್ ಕೌರ್

ಈ ಚಾಂಪಿಯನ್ ಪಟ್ಟದೊಂದಿಗೆ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಹೊಸ ಸೆಲೆಬ್ರೇಷನ್​ಗೆ ನಾಂದಿ ಹಾಡಿದ್ದಾರೆ. ಈ ಹಿಂದೆ ಭಾರತ ಪುರುಷರ ತಂಡದ ನಾಯಕ ರೋಹಿತ್ ಶರ್ಮಾ ರೊಬೋಟ್ ವಾಕ್ ಸಂಭ್ರಮ ಮಾಡಿದ್ದರು.

ನಿನ್ನೆ ಹರ್ಮನ್ ಪ್ರೀತ್ ಕೂಡ ಅಂತಹುದೇ ವಿಶೇಷ ಸಂಭ್ರಮ ಮಾಡಿದ್ದಾರೆ. ಈ ಬಾರಿ ಹರ್ಮನ್ ಪ್ರೀತ್ ಸಹ ಆಟಗಾರ್ತಿಯರಿಗೆ ಟ್ರೋಫಿ ತಗೋ… ಕೊಡಲ್ಲ ಎನ್ನುವಂತೆ ಸಂಭ್ರಮಿಸಿ ಕಪ್ ಎತ್ತಿ ಹಿಡಿದಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಬಜೆಟ್ 2026: ಷೇರುಮಾರುಕಟ್ಟೆ 'ರಕ್ತಪಾತ', ಹೂಡಿಕೆದಾರರ 9.40 ಲಕ್ಷ ಕೋಟಿ ರೂ ನಷ್ಟ! ಕುಸಿತಕ್ಕೆ ಕಾರಣವೇನು?

'ಆಗ ಸಿದ್ಧಾರ್ಥ್, ಈಗ CJ Roy': 'ತೆರಿಗೆ ಭಯೋತ್ಪಾದನೆ'; ಐಟಿ ದಾಳಿ ಕುರಿತು ಕೇಂದ್ರಕ್ಕೆ ಉದ್ಯಮಿ Mohandas Pai ಪತ್ರ! Video

T20 World Cup 2026: 'ಟೂರ್ನಿ ಆಡ್ತೇವೆ.. ಆದ್ರೆ ಭಾರತದ ವಿರುದ್ಧ ಆಡಲ್ಲ'; ಐಸಿಸಿಗೆ PCB ಹೊಸ ತಲೆನೋವು!

ಇನ್ಮುಂದೆ ಷೇರು ಮರುಖರೀದಿ ಲಾಭಕ್ಕೂ ತೆರಿಗೆ! Capital gains ಎಂದು ಪರಿಗಣಿಸುವ ಘೋಷಣೆ

U19 World Cup: ಪಾಕಿಸ್ತಾನವನ್ನು ಬಗ್ಗು ಬಡಿದು ಭಾರತ ಸೆಮಿಫೈನಲ್‌ಗೆ ಲಗ್ಗೆ; ಅಫ್ಘಾನ್ ಜೊತೆ ಗುದ್ದಾಟ!

SCROLL FOR NEXT