ಚೆನ್ನೈ ಸೂಪರ್ ಕಿಂಗ್ಸ್ (CSK) ಆಲ್‌ರೌಂಡರ್ ರವೀಂದ್ರ ಜಡೇಜಾ ಇದೀಗ ಫ್ರಾಂಚೈಸಿಯಿಂದ ಹೊರಬರುವ ಹಾದಿಯಲ್ಲಿದ್ದಾರೆ. 2011ರಲ್ಲಿ ತಂಡವನ್ನು ಸೇರಿದ ಜಡೇಜಾ, CSK ಯಲ್ಲಿ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ಆದರೆ, ಈಗ ಫ್ರಾಂಚೈಸಿಯಲ್ಲಿನ ಅವರ ಪ್ರಯಾಣವು ಕೊನೆಗೊಳ್ಳುತ್ತಿರುವಂತೆ ತೋರುತ್ತಿದೆ. ಫ್ರಾಂಚೈಸಿಯು ರಾಜಸ್ಥಾನ ರಾಯಲ್ಸ್ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಸಂಜು ಸ್ಯಾಮ್ಸನ್ ಅವರೊಂದಿಗೆ ಜಡೇಜಾ ಅವರನ್ನು ಬದಲಾಯಿಸಿಕೊಳ್ಳಲು ನೋಡುತ್ತಿದೆ ಎಂದು ವರದಿಯಾಗಿದೆ. CSK ದಿಗ್ಗಜ ಸುರೇಶ್ ರೈನಾ, ಜಡೇಜಾ ಅವರನ್ನು RRಗೆ ಮಾರಾಟ ಮಾಡದಿರಲು ಫ್ರಾಂಚೈಸಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಜಿಯೋಸ್ಟಾರ್ ಜೊತೆಗಿನ ಚಾಟ್‌ನಲ್ಲಿ, ಜಡೇಜಾ ಅವರನ್ನು ಸಿಎಸ್‌ಕೆ ಉಳಿಸಿಕೊಳ್ಳಬೇಕು. ಯಾವುದೇ ಬೆಲೆ ತೆತ್ತಾದರೂ ಸರಿ ಜಡೇಜಾ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ಫ್ರಾಂಚೈಸಿಗೆ ತಿಳಿಸಿದರು.
'ನೂರ್ ಅಹ್ಮದ್ ಅವರನ್ನು ಉಳಿಸಿಕೊಳ್ಳಬೇಕು. ಅವರು ಮಿಸ್ಟರಿ ಸ್ಪಿನ್ನರ್ ಆಗಿರುವುದರಿಂದ ಅವರನ್ನು ಉಳಿಸಿಕೊಳ್ಳಬೇಕು. ಎಂಎಸ್ ಧೋನಿ ಅವರನ್ನು ಖಂಡಿತವಾಗಿಯೂ ಉಳಿಸಿಕೊಳ್ಳಬೇಕು; ಅವರು ಈ ವರ್ಷ ಆಡುತ್ತಿದ್ದಾರೆ. ರುತುರಾಜ್ ಗಾಯಕ್ವಾಡ್ ನಾಯಕನಾಗಿ ಮುಂದುವರಿಯಬೇಕು. ರವೀಂದ್ರ ಜಡೇಜಾ ಅವರನ್ನು ಮತ್ತೆ ಉಳಿಸಿಕೊಳ್ಳಬೇಕು. ಅವರು ಸಿಎಸ್‌ಕೆ ಪರ ಗನ್ ಪ್ಲೇಯರ್ ಆಗಿದ್ದಾರೆ. ಹಲವಾರು ವರ್ಷಗಳಲ್ಲಿ ಅವರು ತಂಡಕ್ಕಾಗಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ 'ಸರ್ ರವೀಂದ್ರ ಜಡೇಜಾ' ತಂಡದಲ್ಲಿರಬೇಕು' ಎಂದರು.
'ಸಿಎಸ್‌ಕೆ ತಂಡದಿಂದ ಡೆವೊನ್ ಕಾನ್ವೆ ಅವರನ್ನು ಬಿಡುಗಡೆ ಮಾಡಬೇಕು. ಸಿಎಸ್‌ಕೆಗೆ ಸ್ಥಳೀಯ ಆರಂಭಿಕ ಆಟಗಾರನ ಅಗತ್ಯವಿದ್ದು, ಅವರನ್ನು ಅವರು ಮಿನಿ-ಹರಾಜಿನಲ್ಲಿ ಎದುರು ನೋಡುತ್ತಾರೆ. ವಿಜಯ್ ಶಂಕರ್ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಪಡೆದಿದ್ದಾರೆ. ಆದ್ದರಿಂದ ಸಿಎಸ್‌ಕೆ ಅವರನ್ನು ಸಹ ಬಿಡುಗಡೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ದೀಪಕ್ ಹೂಡಾ ಅವರನ್ನು ಸಹ ಬಿಡುಗಡೆ ಮಾಡಬೇಕು. ಮಿನಿ-ಹರಾಜಿನಲ್ಲಿ ತಂಡಕ್ಕೆ ಅದೇ ಸಂಯೋಜನೆಯನ್ನು ಒದಗಿಸಬಲ್ಲ ಬಹಳಷ್ಟು ಆಟಗಾರರು ಇದ್ದಾರೆ. ಈ ಆಟಗಾರರಿಗೆ ಕಳೆದ ವರ್ಷ ಅವಕಾಶಗಳು ಸಿಕ್ಕವು ಮತ್ತು ಅವರು ಹೇಗೆ ಆಡಿದರು ಎಂಬುದನ್ನು ನಾವು ನೋಡಿದ್ದೇವೆ. ಆದ್ದರಿಂದ, ಬಹುಶಃ ಸಿಎಸ್‌ಕೆ ಹೊಸಬರನ್ನು ಹುಡುಕಬೇಕಾಗಬಹುದು' ಎಂದು ಹೇಳಿದರು.