ಗಂಗೂಲಿ, ಗಂಭೀರ್, ಶಮಿ ಸಾಂದರ್ಭಿಕ ಚಿತ್ರ 
ಕ್ರಿಕೆಟ್

ಮೊಹಮ್ಮದ್ ಶಮಿ ವಾಪಸ್ ಕರೆ ತನ್ನಿ: ಕೋಲ್ಕತ್ತಾ ಟೆಸ್ಟ್ ಸೋಲಿನ ನಂತರ ಗೌತಮ್ ಗಂಭೀರ್‌ಗೆ ಗಂಗೂಲಿ!

ಕೊಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್​ಗಳಿಂದ ಸೋತಿತು. ಈ ಮೂಲಕ ಟೀಮ್ ಇಂಡಿಯಾಗೆ ತವರಿನಲ್ಲಿ ಹೀನಾಯ ಸೋಲುಣಿಸಿದ ದಕ್ಷಿಣ ಆಫ್ರಿಕಾ, ಭಾರತೀಯ ನೆಲದಲ್ಲಿ 15 ವರ್ಷಗಳ ನಂತರ ಸ್ಮರಣೀಯ ಗೆಲುವು ಸಾಧಿಸಿತು.

ಕೋಲ್ಕತ್ತ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಸೋಲಿನ ನಂತರ ಮೊಹಮ್ಮದ್ ಶಮಿ ಅವರನ್ನು ಮತ್ತೆ ಟೆಸ್ಟ್ ತಂಡಕ್ಕೆ ಕರೆ ತನ್ನಿ ಎಂದು ಬಿಸಿಸಿಐನ ಮಾಜಿ ಅಧ್ಯಕ್ಷ ಮತ್ತು ಭಾರತ ತಂಡದ ನಾಯಕ ಸೌರವ್ ಗಂಗೂಲಿ ಗೌತಮ್ ಗಂಭೀರ್‌ಗೆ ಸಲಹೆ ನೀಡಿದ್ದಾರೆ.

ಕೊಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 30 ರನ್​ಗಳಿಂದ ಸೋತಿತು. ಈ ಮೂಲಕ ಟೀಮ್ ಇಂಡಿಯಾಗೆ ತವರಿನಲ್ಲಿ ಹೀನಾಯ ಸೋಲುಣಿಸಿದ ದಕ್ಷಿಣ ಆಫ್ರಿಕಾ, ಭಾರತೀಯ ನೆಲದಲ್ಲಿ 15 ವರ್ಷಗಳ ನಂತರ ಸ್ಮರಣೀಯ ಗೆಲುವು ಸಾಧಿಸಿತು.

ಶಮಿ ಕೊನೆಯ ಬಾರಿಗೆ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದರು. ತದನಂತರ ಇಂಗ್ಲೆಂಡ್ ಪ್ರವಾಸ ಮತ್ತು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಅವರನ್ನು ಕೈಬಿಡಲಾಗಿತ್ತು. ಶಮಿ ವರ ಫಿಟ್‌ನೆಸ್ ಉತ್ತಮವಾಗಿಲ್ಲ ಎಂದು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಹೇಳಿದ್ದರು.

ಸ್ಪೋರ್ಟ್ಸ್ ಟ್ಯಾಕ್ ಜೊತೆ ಮಾತನಾಡಿದ ಗಂಗೂಲಿ, ಮುಂದಿನ ಪಂದ್ಯಗಳಲ್ಲಿ ಶಮಿ, ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಲ್ಲಿ ಗಂಭೀರ್ ನಂಬಿಕೆ ಇಡಬೇಕು. "ಶಮಿ ಮತ್ತು ಸ್ಪಿನ್ನರ್‌ಗಳು ಭಾರತವನ್ನು ಟೆಸ್ಟ್ ನಲ್ಲಿ ಗೆಲ್ಲಿಸಬಲ್ಲರು" ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಹಾಲಿ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಹೇಳಿದ್ದಾರೆ.

ನನಗೆ ಗೌತಮ್ ಎಂದರೆ ತುಂಬಾ ಇಷ್ಟ. ಅವರು 2011 ಮತ್ತು ಟಿ20 ವಿಶ್ವಕಪ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಇನ್ನೂ ಸ್ವಲ್ಪ ಕಾಲ ಮುಂದುವರೆಯುತ್ತಾರೆ. ಆದರೆ ಅವರು ಭಾರತದ ಉತ್ತಮ ಪಿಚ್‌ಗಳಲ್ಲಿ ಆಡಬೇಕು. ಬುಮ್ರಾ, ಸಿರಾಜ್ ಮತ್ತು ಶಮಿ ಅವರ ಮೇಲೆ ನಂಬಿಕೆ ಇಡಬೇಕು. ಶಮಿ ಈ ಟೆಸ್ಟ್ ನಲ್ಲಿ ಆಡಲು ಅರ್ಹರಾಗಿದ್ದರು ಅನಿಸುತ್ತದೆ ಎಂದರು.

"ಗಂಭೀರ್ ಮತ್ತು ಭಾರತೀಯ ತಂಡದ ಆಡಳಿತ ಮಂಡಳಿ ಉತ್ತಮ ಟ್ರ್ಯಾಕ್‌ಗಳಲ್ಲಿ ಆಡಬೇಕು ಮತ್ತು ಪಿಚ್ ಅನ್ನು ಪಂದ್ಯದಿಂದ ಹೊರಗಿಡಬೇಕು. ಬೇಗನೆ ಪಂದ್ಯ ಮುಗಿಯುವುದನ್ನು ನೋಡುವ ಬದಲು ಐದು ದಿನಗಳಲ್ಲಿ ಟೆಸ್ಟ್ ಗೆಲ್ಲಲು ಪ್ರಯತ್ನಿಸಬೇಕಾಗಿದೆ. ಉತ್ತಮ ವಿಕೆಟ್ ಕೀಳಬೇಕಾಗಿದೆ. ಒಂದು ವೇಳೆ ಭಾರತದ ಬ್ಯಾಟರ್ ಗಳು 350-400 ರನ್ ಗಳಿಸದಿದ್ದರೆ ಟೆಸ್ಟ್ ಪಂದ್ಯ ಗೆಲ್ಲಲು ಸಾಧ್ಯವಾಗುವುದಿಲ್ಲ. ಗಂಭೀರ್ ಈ ಮಾತನ್ನು ಕೇಳಬೇಕಾಗಿದೆ ಎಂದು ಗಂಗೂಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಹಿಂಸಾಚಾರ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ: ICT ತೀರ್ಪು

"ನನಗೆ ಚಿಂತೆಯೇ ಇಲ್ಲ. ಅಲ್ಲಾಹ್ ಜೀವ ಕೊಟ್ಟಿದ್ದಾನೆ.. ಅವನೇ ತೆಗೆದುಕೊಳ್ಳುತ್ತಾನೆ": ಕೋರ್ಟ್ ತೀರ್ಪಿಗೂ ಮೊದಲು ಶೇಖ್ ಹಸೀನಾ!

ಬಿಹಾರ ರಾಜ್ಯಪಾಲ ಆರಿಫ್ ಖಾನ್ ಭೇಟಿಯಾದ ನಿತೀಶ್ ಕುಮಾರ್

Congo copper mine: ಕಾಂಗೋದಲ್ಲಿ ಭೀಕರ ಗಣಿ ಅವಘಡ, ಭೂ ಕುಸಿತದಲ್ಲಿ ಕನಿಷ್ಟ 80 ಮಂದಿ ಸಾವು! Video

ಸೌದಿಯಲ್ಲಿ ಬಸ್–ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ: 45 ಮಂದಿ ಭಾರತೀಯ ಯಾತ್ರಿಕರು ದುರ್ಮರಣ, ಸಹಾಯವಾಣಿ ಆರಂಭ

SCROLL FOR NEXT