2025ರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್‌ನಲ್ಲಿ ಭಾರತ ಎ ವಿರುದ್ಧ ಪಾಕಿಸ್ತಾನ ಎ ಪಂದ್ಯದ ಸಮಯದಲ್ಲಿ ಭಾರತೀಯ ಬ್ಯಾಟ್ಸ್‌ಮನ್ ನಮನ್ ಧೀರ್ ವಿರುದ್ಧ ಪಾಕಿಸ್ತಾನಿ ಲೆಗ್-ಸ್ಪಿನ್ನರ್ ಸಾದ್ ಮಸೂದ್ ಮೈದಾನದಲ್ಲಿ ಅತಿರೇಕದ ವರ್ತನೆ ತೋರಿಸಿದ್ದಾನೆ. ಸಾದ್ ಮಸೂದ್ ಎಸೆತದ 2ನೇ ಓವರ್‌ನ ಮೂರನೇ ಎಸೆತದಲ್ಲಿ ಧೀರ್ ಬೌಂಡರಿ ಬಾರಿಸಿದ್ದರು. ನಂತರದ ಎಸೆತದಲ್ಲಿ ಧೀರ್ ಔಟ್ ಆದರೂ ನಾಟಕೀಯ ವಿನಿಮಯ ನಡೆಯಿತು. ಧೀರ್ ಔಟ್ ಆದ ಬೆನ್ನಲ್ಲೇ ಸಾದ್ ಮಸೂದ್ ಅತಿರೇಕದ ವರ್ತನೆ ತೋರಿಸಿದನು.
ಔಟಾದ ನಂತರ, ಮಸೂದ್ ನಿರ್ಗಮಿಸುವ ಬ್ಯಾಟ್ಸ್‌ಮನ್ ಕಡೆಗೆ ತಿರುಗಿ, ಡಗೌಟ್ ಕಡೆಗೆ ಸನ್ನೆ ಮಾಡಿ ನಿರ್ಗಮಿಸುವಂತೆ ಸೂಚಿಸಿದನು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಮಸೂದ್ ಅವರ ಕ್ರಮಗಳು ಕ್ರೀಡಾ ಮನೋಭಾವದ ಗೆರೆಯನ್ನು ಮೀರಿದೆ ಎಂದು ಚರ್ಚಿಸಿದ್ದಾರೆ. ತಮ್ಮ ಶಾಂತ ನಡವಳಿಕೆ ಮತ್ತು ಸ್ಪರ್ಧಾತ್ಮಕತೆಗೆ ಹೆಸರುವಾಸಿಯಾದ ಧೀರ್, ಮಸೂದ್ ಕಡೆ ತಿರುಗಿ ನೋಡಿ ಸದ್ದಿಲ್ಲದೆ ಹೊರಟುಹೋದರು.
ಆದಾಗ್ಯೂ, ಆ ಕ್ಷಣ ಕ್ರೀಡಾಂಗಣದಲ್ಲಿ ಕೋಲಾಹಲವನ್ನು ಸೃಷ್ಟಿಸಿತು. ಈ ವೇಳೆ ಮಧ್ಯೆ ಪ್ರವೇಶಿಸಿದ ಎಂಪೈರ್ ಸಾದ್ ಮಸೂದ್ ಗೆ ಎಚ್ಚರಿಕೆ ನೀಡಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಸಿ ಘಟನೆ ಯುವ ಮತ್ತು ಅಭಿವೃದ್ಧಿ ಪಂದ್ಯಾವಳಿಗಳಲ್ಲಿಯೂ ಸಹ ಮತ್ತೆ ಕಾಣಿಸಿಕೊಳ್ಳುತ್ತಿರುವುದಕ್ಕೆ ವ್ಯಾಖ್ಯಾನಕಾರರು ಟೀಕಿಸಿದರು.
ದೋಹಾದಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯ 6ನೇ ಪಂದ್ಯದಲ್ಲಿ ಭಾರತ ಎ ವಿರುದ್ಧ ಪಾಕಿಸ್ತಾನ್ ಎ ತಂಡ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 19 ಓವರ್ಗಳಲ್ಲಿ 136 ರನ್ಗಳಿಸಿ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನಟ್ಟಿ ಪಾಕಿಸ್ತಾನ ತಂಡ 13.2 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು.