ಪಾಕಿಸ್ತಾನದ ಆಟಗಾರ ಶಹನವಾಜ್ ದಹಾನಿ, ಹರ್ಭಜನ್ ಸಿಂಗ್ 
ಕ್ರಿಕೆಟ್

ಪಾಕ್ ಆಟಗಾರರೊಂದಿಗೆ 'ಹ್ಯಾಂಡ್ ಶೇಕ್ ಇಲ್ಲ' ನೀತಿಗೆ ತೀಲಾಂಜಲಿ: ಫ್ಯಾನ್ಸ್ ಗೆ ಅಚ್ಚರಿ ಮೂಡಿಸಿದ ಹರ್ಭಜನ್ ಸಿಂಗ್! Video

ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕಬಾರದು ಎಂಬ ಭಾರತೀಯ ಕ್ರಿಕೆಟಿಗರ ಇತ್ತೀಚಿನ ನೀತಿಗೆ ಇದು ವ್ಯತಿರಿಕ್ತವಾಗಿತ್ತು.

ಅಬುದಾಬಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟಿಗರ ನಡುವಿನ ಇತ್ತೀಚಿನ ವಿವಾದದ ನಡುವೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಬುಧವಾರ ಅಬುಧಾಬಿಯಲ್ಲಿ ನಡೆದ ಟಿ10 ಲೀಗ್‌ನಲ್ಲಿ ಹರ್ಭಜನ್ ಸಿಂಗ್ ಪಾಕಿಸ್ತಾನದ ವೇಗಿ ಶಹನವಾಜ್ ದಹಾನಿಗೆ ಹ್ಯಾಂಡ್ ಶೇಕ್ ಮಾಡಿರುವುದು ಕಂಡುಬಂದಿದೆ.

10 ಓವರ್‌ಗಳ ಪಂದ್ಯದಲ್ಲಿ ದಹಾನಿ 10 ರನ್ ಗಳಿಗೆ ಎರಡು ವಿಕೆಟ್ ಗಳಿಸುವುದರೊಂದಿಗೆ ಹರ್ಭಜನ್ ನೇತೃತ್ವದ ಆಸ್ಪಿನ್ ಸ್ಟಾಲಿಯನ್ಸ್ ತಂಡವು ನಾರ್ದರ್ನ್ ವಾರಿಯರ್ಸ್ ವಿರುದ್ಧ ನಾಲ್ಕು ರನ್‌ಗಳ ಸೋಲನ್ನು ಅನುಭವಿಸಿತು. ಕೊನೆಯ ಎಸೆತದಲ್ಲಿ ರನೌಟ್ ಆದ ಹರ್ಭಜನ್, ಪಂದ್ಯದ ನಂತರ ವಾರಿಯರ್ಸ್‌ನ ದಹಾನಿಗೆ ಹ್ಯಾಂಡ್ ಶೇಕ್ ಮಾಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕಬಾರದು ಎಂಬ ಭಾರತೀಯ ಕ್ರಿಕೆಟಿಗರ ಇತ್ತೀಚಿನ ನೀತಿಗೆ ಇದು ವ್ಯತಿರಿಕ್ತವಾಗಿತ್ತು.

ಕಳೆದ ವಾರ ದೋಹಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್‌ನಲ್ಲಿ ಭಾರತ ಎ ಮತ್ತು ಪಾಕಿಸ್ತಾನ್ ಶಾಹೀನ್ಸ್ ಆಟಗಾರ್ತಿಯರು ಪಂದ್ಯ ಪ್ರಾರಂಭವಾಗುವ ಮೊದಲು ಹ್ಯಾಂಡ್‌ಶೇಕ್‌ ಮಾಡಿರಲಿಲ್ಲ. ಕಳೆದ ತಿಂಗಳು ಕೊಲಂಬೊದಲ್ಲಿ ಪಾಕಿಸ್ತಾನ ವಿರುದ್ಧದ ಮಹಿಳಾ ವಿಶ್ವಕಪ್ ಪಂದ್ಯದ ಸಮಯದಲ್ಲಿಯೂ ಭಾರತ ಮಹಿಳಾ ತಂಡವು ಹ್ಯಾಂಡ್‌ಶೇಕ್ ಮಾಡಿರಲಿಲ್ಲ.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಜುಲೈ 19 ರಂದು ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ವರ್ಲ್ಡ್ ಚಾಂಪಿಯನ್ಸ್​ ಟೂರ್ನಿಯಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ಹಿಂದೇಟು ಹಾಕಿದ್ದರು.

ಹೀಗಾಗಿ ಈ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಈ ವರ್ಷ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ಮಾರ್ಚ್ 9 ರಂದು ನಡೆದ ಫೈನಲ್ ಸೇರಿದಂತೆ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

Vaikunta Ekadasi: ತಿರುಮಲ ವೈಕುಂಠ ದ್ವಾರ ದರ್ಶನ ಕುರಿತು TTD ಮಹತ್ವದ ಮಾಹಿತಿ, ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ಲಭ್ಯ!

News headlines 20-11-2025| ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ 5 ವರ್ಷ ನಾನೇ ಸಿಎಂ-ಸಿದ್ದರಾಮಯ್ಯ; ಡಿಕೆ ಶಿವಕುಮಾರ್ ಆಪ್ತರು ದಿಢೀರ್ ದೆಹಲಿಗೆ ಪ್ರಯಾಣ; ATM ವಾಹನ ದರೋಡೆ ಕೇಸ್: ತಿರುಪತಿಯಲ್ಲಿ ಇಬ್ಬರ ಬಂಧನ; ಧರ್ಮಸ್ಥಳ ಪ್ರಕರಣ: ಕೋರ್ಟ್ ಗೆ SIT ತನಿಖಾ ವರದಿ ಸಲ್ಲಿಕೆ

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ; AK-47 ಕಾರ್ಟ್ರಿಡ್ಜ್‌ಗಳು ಪತ್ತೆ!

SCROLL FOR NEXT