ರೋಹಿತ್ ಶರ್ಮಾ, ಶಾಹಿದ್ ಅಫ್ರಿದಿ ಸಾಂದರ್ಭಿಕ ಚಿತ್ರ 
ಕ್ರಿಕೆಟ್

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯ: ಶಾಹಿದ್ ಅಫ್ರಿದಿ 'ವಿಶ್ವ ದಾಖಲೆ' ಮುರಿಯಲು ರೋಹಿತ್ ಶರ್ಮಾ ಸಜ್ಜು!

ಪ್ರಸ್ತುತ ಅವರು 351 ಸಿಕ್ಸರ್ ಬಾರಿಸುವುದರೊಂದಿಗೆ ವಿಶ್ವದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರಿಗಿಂತ ರೋಹಿತ್ ಶರ್ಮಾ ಕೇವಲ ಎರಡು ಸಿಕ್ಸರ್ ಹಿಂದಿದ್ದಾರೆ.

ರಾಂಚಿ: ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಇಂದು ರಾಂಚಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮತ್ತೊಂದು ವಿಶ್ವ ದಾಖಲೆ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ.

ಈ ಪಂದ್ಯದಲ್ಲಿ ಮೂರು ಸಿಕ್ಸರ್ ಎತ್ತಿದ್ದರೆ ವಿಶ್ವದಲ್ಲಿಯೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಸದ್ಯ ಈ ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಹೆಸರಿನಲ್ಲಿದೆ.

ಪ್ರಸ್ತುತ ಅವರು 351 ಸಿಕ್ಸರ್ ಬಾರಿಸುವುದರೊಂದಿಗೆ ವಿಶ್ವದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರಿಗಿಂತ ರೋಹಿತ್ ಶರ್ಮಾ ಕೇವಲ ಎರಡು ಸಿಕ್ಸರ್ ಹಿಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ರೋಹಿತ್ 352 ಸಿಕ್ಸರ್ ಸಿಡಿಸಿದರೆ ಅವರು ಶಾಹಿದ್ ಅಫ್ರಿದಿಯಲ್ಲಿ ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆಯುತ್ತಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಅವರ ಫಾರ್ಮ್ ಅನ್ನು ಪರಿಗಣಿಸಿದರೆ, ಹಿಟ್‌ಮ್ಯಾನ್ ಈ ಸಾಧನೆಯನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲ್ಲ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ವಿವರ:

1. ಶಾಹಿದ್ ಅಫ್ರಿದಿ ( ಪಾಕಿಸ್ತಾನ) 351

2. ರೋಹಿತ್ ಶರ್ಮಾ (ಭಾರತ) 349

3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್ ) 331

4. ಸನತ್ ಜಯಸೂರ್ಯ (ಶ್ರೀಲಂಕಾ) 270

5.ಎಂಎಸ್ ಧೋನಿ( ಭಾರತ) 229

ರೋಹಿತ್ ಶರ್ಮಾ ಏಕದಿನ ಪಂದ್ಯ ಭವಿಷ್ಯ: ವಯಸ್ಸಿನ ಹೊರತಾಗಿಯೂ ರೋಹಿತ್ ಶರ್ಮಾ 50 ಓವರ್‌ಗಳ 2027 ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವ ಗುರಿಯನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET: ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ಪುಣೆ ಉಪನ್ಯಾಸಕಿ ಬಂಧನ

IPL 2026: SRH ವಿರುದ್ಧ RCB ಗೆ ಸೋಲು, ಸೋತರೂ ಅಗ್ರ ಸ್ಥಾನ ಅಬಾಧಿತ! ಕ್ವಾಲಿಫೈಯರ್ ಗೆ ಲಗ್ಗೆ

IPL 2026: SRH ಕನಸಿಗೆ ಕೊಳ್ಳಿ ಇಟ್ಟ RCB, ಗೆಲುವಿನ ಹೊರತಾಗಿಯೂ Eliminater ಅನಿವಾರ್ಯ!

NEET UG ಪ್ರಶ್ನೆಪತ್ರಿಕೆ ಸೋರಿಕೆ: ಈ ಬಾರಿ ಶೇ.100ರಷ್ಟು ದೋಷರಹಿತ ಮರು ಪರೀಕ್ಷೆ; ಕಠಿಣ ಕ್ರಮ ಎಂದ Dharmendra Pradhan

Rudraprayag ಭೀಕರ ಭೂಕುಸಿತ: ಸ್ಥಳದಲ್ಲೇ ಓರ್ವನ ಸಾವು, ಇಬ್ಬರು ಗಂಭೀರ, Video

SCROLL FOR NEXT