ಪಾಕ್ ಆಟಗಾರರು 
ಕ್ರಿಕೆಟ್

Asia Cup 2025 ಸೋಲಿನ ಬೆನ್ನಲ್ಲೇ ಬರೆ, ಬಾಲ ಬಿಚ್ಚಿದ್ದ ಆಟಗಾರರ ಪುಡಿಗಾಸಿಗೂ PCB ಕೊಕ್ಕೆ!, NOC 'Suspension'

2025 ರ ಏಷ್ಯಾ ಕಪ್‌ನಲ್ಲಿ ಭಾರತದ ವಿರುದ್ಧದ ಸತತ ಮೂರು ಸೋಲುಗಳ ಪರಿಣಾಮ ಪಾಕಿಸ್ತಾನಿ ಕ್ರಿಕೆಟಿಗರಿಗೆ ಭಾರಿ ನಷ್ಟವನ್ನುಂಟುಮಾಡಿದೆ.

ಲಾಹೋರ್: ಏಷ್ಯಾಕಪ್ 2025 ಫೈನಲ್ ನಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ ತೀವ್ರ ಮುಜುಗರಕ್ಕೀಡಾಗಿದ್ದು ಇದೀಗ ಪಾಕ್ ಆಟಗಾರರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಬರೆ ಹಾಕಿದೆ.

ಹೌದು.. 2025 ರ ಏಷ್ಯಾ ಕಪ್‌ನಲ್ಲಿ ಭಾರತದ ವಿರುದ್ಧದ ಸತತ ಮೂರು ಸೋಲುಗಳ ಪರಿಣಾಮ ಪಾಕಿಸ್ತಾನಿ ಕ್ರಿಕೆಟಿಗರಿಗೆ ಭಾರಿ ನಷ್ಟವನ್ನುಂಟುಮಾಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ವಿದೇಶಿ ಟಿ 20 ಲೀಗ್‌ಗಳಲ್ಲಿ ಭಾಗವಹಿಸುವ ಆಟಗಾರರಿಗೆ ಎಲ್ಲಾ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ಅಮಾನತುಗೊಳಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಪಾಕ್ ಆಟಗಾರರಿಗೆ ವಿದೇಶಿ-ಸ್ವದೇಶಿ ಲೀಗ್ ಆಡಲು ನೀಡಲಾಗಿದ್ದ ಎನ್ಒಸಿಯನ್ನು ಪಿಸಿಬಿ ರದ್ದು ಮಾಡಿದೆ. ಮುಂದಿನ ದಿನಗಳಲ್ಲಿ ಆಟಗಾರರಿಗೆ ಪ್ರದರ್ಶನ ಆಧಾರಿತ ವ್ಯವಸ್ಥೆಯಡಿ ಎನ್ ಒಸಿ ನೀಡುವುದಾಗಿ ಹೇಳಿದೆ ಎಂದು ವರದಿಯಾಗಿದೆ.

ಏಷ್ಯಾ ಕಪ್ 2025ರ ಫೈನಲ್ ನಲ್ಲಿ ಭಾರತ ವಿರುದ್ಧ ಪರಾಭವಗೊಂಡ ಹತಾಷೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ತನ್ನ ಆಟಗಾರರು ವಿದೇಶಿ ಲೀಗ್ ಗಳಲ್ಲಿ ಆಡುವುದಕ್ಕೆ ಅಂಕುಶ ಹಾಕಲು ಹೊರಟಿದೆ. ವಿದೇಶಿ ಲೀಗ್ ಗಳಲ್ಲಿ ಆಡಲು ಅಲ್ಲಿನ ಕ್ರಿಕೆಟಿಗರಿಗೆ ನೀಡಲಾಗಿದ್ದ ನಿರಾಕ್ಷೇಪಣಾ ಪತ್ರ(NOC) ಗಳನ್ನು ರದ್ದುಗೊಳಿಸಿದೆ.

ಜೊತೆಗೆ ಹೊಸದಾಗಿ ನಿರಾಕ್ಷೇಪಣಾ ಪತ್ರಗಳನ್ನೂ ನೀಡಲು ನಿರಾಕರಿಸಿದೆ. ಹೀಗಾಗಿ ಪಾಕ್ ನ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಮೊಹಮ್ಮದ್ ರಿಜ್ವಾನ್, ಶಾಹಿನ್ ಶಾ ಅಫ್ರಿದಿ ಸೇರಿದಂತೆ ಅನೇಕ ಕ್ರಿಕೆಟಿಗರಿಗೆ ತೊಂದರೆ ಆಗುವ ಎಲ್ಲಾ ಸಾಧ್ಯತೆ ಇದೆ.

"ಪಿಸಿಬಿ ಅಧ್ಯಕ್ಷರ ಅನುಮೋದನೆಯೊಂದಿಗೆ, ಲೀಗ್‌ಗಳು ಮತ್ತು ಇತರ ಹೊರಗಿನ ಪಂದ್ಯಾವಳಿಗಳಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಆಟಗಾರರಿಗೆ ಎಲ್ಲಾ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ" ಎಂದು ಪಿಸಿಬಿ ಮೂಲಗಳು ತಿಳಿಸಿವೆ.

ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಆಟಗಾರರ ಮೌಲ್ಯಮಾಪನಗಳಿಗೆ ಲಿಂಕ್ ಮಾಡುವ ಮೂಲಕ ರಾಷ್ಟ್ರೀಯ ಮತ್ತು ದೇಶೀಯ ಪ್ರದರ್ಶನಗಳನ್ನು ಪ್ರೋತ್ಸಾಹಿಸುವುದು ಪಿಸಿಬಿ ಗುರಿಯಾಗಿದೆ. ಆದಾಗ್ಯೂ, ಈ ಮೌಲ್ಯಮಾಪನದ ಅವಧಿ ಮತ್ತು ಎನ್‌ಒಸಿ ಅಮಾನತು ಯಾವಾಗ ತೆಗೆದುಹಾಕಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಪಾಕ್ ಆಟಗಾರರ ಕಿಸೆಗೇ ಕೈಹಾಕಿದ ಪಿಸಿಬಿ

ಇನ್ನು ಎನ್‌ಒಸಿಗಳನ್ನು ಅಮಾನತುಗೊಳಿಸಿದ ಹಿಂದಿನ ಕಾರಣವನ್ನು ಮಂಡಳಿಯು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಆದರೆ ನಿರ್ಧಾರವನ್ನು ಆಟಗಾರರಿಗೆ ತಿಳಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ SA20, ILT20 ಮತ್ತು BBL ನಂತಹ ವಿದೇಶಿ ಲೀಗ್‌ಗಳು ಪ್ರಾರಂಭವಾಗಲಿದ್ದು, ಪಾಕಿಸ್ತಾನ ಮಂಡಳಿಯ ನಿರ್ಧಾರವು ಅದರ ಕೆಲವು ಉನ್ನತ ಆಟಗಾರರನ್ನು ಅನಿಶ್ಚಿತ ಪರಿಸ್ಥಿತಿಗೆ ಸಿಲುಕಿಸಿದೆ.

ಈ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿಸದಿದ್ದರೆ, ಪಾಕಿಸ್ತಾನಿ ಆಟಗಾರರು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಸೆಪ್ಟೆಂಬರ್ 29 ರಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಮೈರ್ ಅಹ್ಮದ್ ಸೈಯದ್ ಅವರು ತಿಳಿಸಿದ ಈ ನಿರ್ಧಾರವು, ಬಿಗ್ ಬ್ಯಾಷ್ ಲೀಗ್ ಮತ್ತು ಐಎಲ್‌ಟಿ 20 ನಂತಹ ಪ್ರಮುಖ ಲೀಗ್‌ಗಳಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗಿದ್ದ ಬಾಬರ್ ಅಜಮ್, ಶಾಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ ಮತ್ತು ಫಹೀಮ್ ಅಶ್ರಫ್ ಸೇರಿದಂತೆ ಹಲವಾರು ಉನ್ನತ ಆಟಗಾರರ ಮೇಲೆ ಪರಿಣಾಮ ಬೀರುತ್ತದೆ.

ತಾವೇ ಮಾಡಿಕೊಂಡ ಎಡವಟ್ಟು, ಬಾಲ ಬಿಚ್ಚಿದ್ದ ಪಾಕಿಗಳು

ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ಮತ್ತು ಮೈದಾನದ ಹೊರಗಿನ ವಿವಾದಗಳು ಹೆಚ್ಚಾಗಿದ್ದರಿಂದ ಪಿಸಿಬಿಯು ಈ ಕ್ರಮಕ್ಕೆ ಮುಂದಾಗಿದೆ. ನಿರಂತರ ಸೋಲುಗಳಿಂದ ಕಂಗೆಟ್ಟಿರುವ ಮಂಡಳಿ ಇದೀಗ ಪಾಕಿಸ್ತಾನ ತಂಡದ ಪುನರ್ ನಿರ್ಮಾಣಕ್ಕೆ ಹೊರಟಿದ್ದು ಮಂಗಳವಾರ ಈ ಮಹತ್ವದ ನಿರ್ದಾರವನ್ನು ಪ್ರಕಟಿಸಿದೆ. ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (COO) ಸುಮೇರ್ ಅಹ್ಮದ್ ಸೈಯದ್ ಅವರು ಈ ಬಗ್ಗೆ ಅಧಿಸೂಚನೆ ಸಹ ಹೊರಡಿಸಿದ್ದಾರೆ. ಮೂಲಗಳ ಪ್ರಕಾರ "ವಿದೇಶಿ ಲೀಗ್‌ಗಳು ಮತ್ತು ಪಂದ್ಯಾವಳಿಗಳಲ್ಲಿ ಭಾಗವಹಿಸಲು ನೀಡಲಾದ ಎಲ್ಲಾ NOC ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ." ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನೋ ಶೇಕ್ ಹ್ಯಾಂಡ್ ವಿವಾದ, ಭಾರತ ವಿರೋಧಿ ಸನ್ಹೆಗಳು

ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ಧ ಫೈನಲ್ ಸೇರಿ ಆಡಿದ ಮೂರು ಪಂದ್ಯಗಳನ್ನು ಸಹ ಪಾಕಿಸ್ತಾನ ತಂಡ ಸೋತಿತ್ತು. ಪಾಕ್ ಆಟಗಾರರು ತಮ್ಮ ಪ್ರದರ್ಶನದ ಮೇಲೆ ಗಮನ ಕೇಂದ್ರೀಕರಿಸುವ ಬದಲಾಗಿ ಭಾರತೀಯ ಆಟಗಾರರನ್ನು ಛೇಡಿಸುವುದು, ಭಾರತ ವಿರೋಧಿ ಸನ್ಹೆಗಳನ್ನು ಮಾಡುವುದನ್ನು ಮುಂದುವರೆಸಿದ್ದರು. ಅದರ ಪರಿಣಾಮವೇ ಲೀಗ್, ಸೂಪರ್ 4 ಮತ್ತು ಫೈನಲ್ ನಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸುಂಕ ಅನಿಶ್ಚಿತತೆ ಮಧ್ಯೆ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ RBI

'Vishwaguru' exposed: ಮುನೀರ್ ಹಾಡಿ ಹೊಗಳಿದ ಟ್ರಂಪ್! ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ!

Madhya Pradesh: 15 ದಿನದಲ್ಲಿ 6 ಮಕ್ಕಳ ಕಿಡ್ನಿ ಫೇಲ್, ಸಾವು..! 2 Cough Syrup ನಿಷೇಧ! ICMR ತಂಡ ದೌಡು

Video: 'ಕರ್ನಾಟಕದಲ್ಲಿ ಹಿಂದಿ ಮಾತಾಡು..' ಬುರ್ಖಾಧಾರಿ ಮಹಿಳೆ ಉದ್ಧಟತನ, ಸರಿಯಾಗಿ ಜಾಡಿಸಿದ 'ಕನ್ನಡತಿ'

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 69ಕ್ಕೆ ಏರಿಕೆ

SCROLL FOR NEXT