ಶಾಹೀನ್ ಶಾ ಅಫ್ರಿದಿ 
ಕ್ರಿಕೆಟ್

PCB ಗೊಂದಲ: ಪಾಕಿಸ್ತಾನ ಏಕದಿನ ತಂಡದ ನಾಯಕನಾಗಿ ಶಾಹೀನ್ ಅಫ್ರಿದಿ ನೇಮಕ; ಮೊಹಮ್ಮದ್ ರಿಜ್ವಾನ್ ಔಟ್!

25 ವರ್ಷದ ಅಫ್ರಿದಿ ಈಗ ಹೊಸ ಜವಾಬ್ದಾರಿಗಳೊಂದಿಗೆ ಮರಳಿದ್ದಾರೆ. ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ನಲ್ಲಿ 4-1 ಅಂತರದಿಂದ ಸೋತ ನಂತರ ಅವರ ನಾಯಕತ್ವ ಈ ಹಿಂದೆ ಕೊನೆಗೊಂಡಿತ್ತು.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೊಹಮ್ಮದ್ ರಿಜ್ವಾನ್ ಅವರನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ತೆಗೆದುಹಾಕಿ, ಒಂದು ವರ್ಷದ ಹಿಂದೆ ವಜಾಗೊಳಿಸಿದ್ದ ಶಾಹೀನ್ ಶಾ ಅಫ್ರಿದಿ ಅವರನ್ನು ಮತ್ತೆ ನೇಮಕ ಮಾಡಿದೆ. ರಾವಲ್ಪಿಂಡಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮಧ್ಯದಲ್ಲಿಯೇ ಈ ನಿರ್ಧಾರ ಹೊರಬಿದ್ದಿದೆ.

ಪಿಸಿಬಿ ಹೇಳಿಕೆಯಲ್ಲಿ ರಿಜ್ವಾನ್ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೂ, ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅಫ್ರಿದಿ ನಾಯಕನಾಗಿ ಮರಳಲಿದ್ದಾರೆ ಎಂದು ಹೇಳಲಾಗಿದೆ. ಮುಖ್ಯ ಕೋಚ್ ಮೈಕ್ ಹೆಸ್ಸನ್ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ನಡುವಿನ ಸಭೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಕಳೆದ ವರ್ಷ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪಾಕಿಸ್ತಾನವನ್ನು ಸರಣಿ ಗೆಲುವುಗಳಿಗೆ ಮುನ್ನಡೆಸಿದ್ದ ರಿಜ್ವಾನ್, ಈ ವರ್ಷದ ಆರಂಭದಲ್ಲಿ ತವರಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡಿದ ನಂತರ ನಾಯಕನಾಗಿ ಎಡವಿದ್ದರು.

ಪಿಸಿಬಿ ಈ ರೀತಿಯ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮೊದಲಿಗೆ ಶಾಹೀನ್‌ರನ್ನು ತೆಗೆದುಹಾಕಿದರು, ನಂತರ ಅವರನ್ನು ಮರಳಿ ಕರೆತಂದರು. ಬಾಬರ್ ಅಜಮ್ ಅವರನ್ನು ನೇಮಿಸಿದರು, ನಂತರ ಅವರನ್ನು ತೆಗೆದುಹಾಕಿದರು. ರಿಜ್ವಾನ್ ಅವರಿಗೆ ಬಡ್ತಿ ನೀಡಿದರು, ನಂತರ ಅವರನ್ನು ಕೈಬಿಟ್ಟರು. ತರಬೇತುದಾರರಾದ ಗ್ಯಾರಿ ಕರ್ಸ್ಟನ್ ಮತ್ತು ಜೇಸನ್ ಗಿಲ್ಲೆಸ್ಪಿ ಸಹ ನೇಮಕಗೊಂಡ ವಾರಗಳ ನಂತರ ಹೊರನಡೆದಿದ್ದರು. 'ಏಕದಿನ ಚಾಂಪಿಯನ್ಸ್ ಕಪ್' ಅನ್ನು ಪರಿಚಯಿಸಿದರು, ನಂತರ ಅದನ್ನು ರದ್ದುಗೊಳಿಸಿದರು. ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ಯಾವುದೇ ತರ್ಕ ಅಥವಾ ದೀರ್ಘಾವಧಿಯ ದೃಷ್ಟಿಕೋನವಿಲ್ಲ ಎಂದು ತೋರುತ್ತದೆ.

25 ವರ್ಷದ ಅಫ್ರಿದಿ ಈಗ ಹೊಸ ಜವಾಬ್ದಾರಿಗಳೊಂದಿಗೆ ಮರಳಿದ್ದಾರೆ. ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ನಲ್ಲಿ 4-1 ಅಂತರದಿಂದ ಸೋತ ನಂತರ ಅವರ ನಾಯಕತ್ವ ಈ ಹಿಂದೆ ಕೊನೆಗೊಂಡಿತು. ಆದರೆ, ಅವರು ಪಾಕಿಸ್ತಾನದ ಬೌಲಿಂಗ್ ಸಾಲಿನಲ್ಲಿ ಕೆಲವೇ ಕೆಲವು ಸ್ಥಿರ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 2023ರ ವಿಶ್ವಕಪ್‌ನಿಂದ 45 ಏಕದಿನ ವಿಕೆಟ್‌ಗಳನ್ನು ಪಡೆದಿದ್ದು, ಪೂರ್ಣ ಸದಸ್ಯ ರಾಷ್ಟ್ರದಿಂದ ಯಾವುದೇ ವೇಗದ ಬೌಲರ್ ಗಳಿಸಿದ ಅತಿ ಹೆಚ್ಚು ವಿಕೆಟ್‌ಗಳಾಗಿವೆ.

'ಪಾಕಿಸ್ತಾನದ ವೈಟ್-ಬಾಲ್ ಮುಖ್ಯ ತರಬೇತುದಾರ ಮೈಕ್ ಹೆಸ್ಸನ್ ಭಾಗವಹಿಸಿದ್ದ ಆಯ್ಕೆ ಸಮಿತಿಯ ಸಭೆಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಪಾಕಿಸ್ತಾನದ ಏಕದಿನ ತಂಡವನ್ನು ಶಾಹೀನ್ ಮುನ್ನಡೆಸಲಿದ್ದಾರೆ ಎಂದು ನಿರ್ಧರಿಸಲಾಯಿತು' ಎಂದು ಪಿಸಿಬಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 60 ಸಾವಿರ ರೂ.ಗಳ ಆರ್ಥಿಕ ಬಲ- ಸಿಎಂ ಸಿದ್ದರಾಮಯ್ಯ

ಯೋಗ್ಯತಾ ಪರವಾನಗಿ ಇಲ್ಲದೆ ಎಂಟು ಬಾರಿ ವಿಮಾನ ಹಾರಾಟ: ಏರ್ ಇಂಡಿಯಾಕ್ಕೆ 1 ಕೋಟಿ ರೂ.ದಂಡ!

T-20 ವಿಶ್ವಕಪ್ 2026: ನೆದರ್ ಲ್ಯಾಂಡ್ಸ್ ವಿರುದ್ಧ 93 ರನ್ ಅಂತರದಿಂದ ಗೆದ್ದ ಅಮೆರಿಕ!

ಅಧಿಕಾರಿ ವರ್ಗಾವಣೆಗಾಗಿ ಸಿಎಂ ಸಿದ್ದರಾಮಯ್ಯರ ನಕಲಿ ಟಿಪ್ಪಣಿ: ಪೊಲೀಸ್ ಕೇಸ್ ದಾಖಲು!

ಹೊಸ PMO ಕಚೇರಿ 'ಸೇವಾ ತೀರ್ಥ' ಕಟ್ಟಡಕ್ಕೆ ಪ್ರಧಾನಿ ಮೋದಿ ಸ್ಥಳಾಂತರ: ಮೊದಲ ದಿನವೇ ಹಲವು ಪ್ರಮುಖ ನಿರ್ಧಾರ!

SCROLL FOR NEXT