ಸಿಡ್ನಿ: ಶನಿವಾರ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ವೇಗಿ ಹರ್ಷಿತ್ ರಾಣಾ 8.4 ಓವರ್‌ಗಳಲ್ಲಿ 39 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಹರ್ಷಿತ್ ಬೌಲಿಂಗ್ ನಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ ನಲ್ಲೂ ಮಿಂಚಿದರು.
ಎರಡನೇ ಏಕದಿನ ಪಂದ್ಯದಲ್ಲಿ ಕೊನೆಯಲ್ಲಿ ಬಂದು ಬ್ಯಾಟಿಂಗ್ ಮಾಡಿದ್ದ ಹರ್ಷಿತ್ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾಗಿದ್ದರು. ಆದರೂ, ಟೀಂ ಇಂಡಿಯಾದಲ್ಲಿ ಅವರ ಆಯ್ಕೆ ಕುರಿತು ಹೊರಗಿನಿಂದ ಟೀಕೆಗಳು ಕೇಳಿಬರುತ್ತಲೇ ಇತ್ತು. ಈ ಟೀಕೆಗಳಿಗೆ ಸ್ಪಷ್ಟ ಉತ್ತರ ನೀಡಲು ಹರ್ಷಿತ್ ಎದುರು ನೋಡುತ್ತಿದ್ದಂತೆಯೇ ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟ ಎಚ್ಚರಿಕೆ ನೀಡಿದ್ದರು ಎಂದು ಹೇಳಲಾಗಿದೆ.
ಇವರಿಬ್ಬರ ನಡುವಿನ ಫೋನ್ ಸಂಭಾಷಣೆಯನ್ನು ಹರ್ಷಿತ್ ಅವರ ಬಾಲ್ಯದ ಕೋಚ್ ಶ್ರವಣ್ ಕುಮಾರ್ ಬಹಿರಂಗಪಡಿಸಿದ್ದಾರೆ "ಕಾರ್, ವಾರ್ನಾ ಬಹರ್ ಬಿಥಾ ಡುಂಗಾ( ಚೆನ್ನಾಗಿ ಆಡು, ಇಲ್ಲದಿದ್ರೆ ತಂಡದಿಂದ ಹೊರಗೆ ಕೂರುವಂತೆ ಮಾಡ್ತೀನಿ) ಅಂತಾ ಗಂಭೀರ್ ಸ್ಪಷ್ಟ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಶ್ರವಣ್, ಗೌತಮ್ ಗಂಭೀರ್ ನನಗೆ ಕರೆ ಮಾಡಿ, ಹರ್ಷಲ್ ರಾಣಾ ಪ್ರದರ್ಶನದ ಬಗ್ಗೆ ಹೊರಗಿನ ಟೀಕಾಕಾರರ ಬಾಯಿ ಮುಚ್ಚಿಸಲು ಬಯಸಿರುವುದಾಗಿ ಹೇಳಿದರು. ಹರ್ಷಿತ್ ನ್ನು ಕೆಟ್ಟದಾಗಿ ಬೈದಿದ್ದರು. ಉತ್ತಮವಾಗಿ ಆಡು ಇಲ್ಲವಾದರೆ, ತಂಡದಿಂದ ಹೊರಗೆ ಹೊರಗೆ ಕೂರುವಂತೆ ಮಾಡ್ತೀನಿ ಅಂದಿದ್ದರು ಎಂದು ತಿಳಿಸಿದರು.
ಇನ್ನೂ 23 ವರ್ಷದ ರಾಣಾ ತೀವ್ರ ಟೀಕೆಗೆ ಗುರಿಯಾಗಿದ್ದು, ಗಂಭೀರ್ ಜೊತೆಗಿನ ಸಂಪರ್ಕದಿಂದಲೂ ಆರೋಪಗಳು ಕೇಳಿಬಂದಿದ್ದವು. ಆತನಿಗೆ ಇನ್ನೂ ಸ್ವಲ್ಪ ಸಮಯ ನೀಡಬೇಕಾಗಿದೆ ಎಂದು ಹೇಳಿದ ಶ್ರವಣ್, ಹರ್ಷಿತ್ ವಿರುದ್ಧ ಟೀಕೆ ಮಾಡಿದ್ದ 1983ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ವಿರುದ್ಧ ವಾಗ್ದಾಳಿ ನಡೆಸಿದರು.