ಮಿಚೆಲ್ ಸ್ಟಾರ್ಕ್  
ಕ್ರಿಕೆಟ್

T20 International Cricket: ಮಿಚೆಲ್ ಸ್ಟಾರ್ಕ್ ನಿವೃತ್ತಿ ಘೋಷಣೆ

ನಾನು ಆಸ್ಟ್ರೇಲಿಯಾ ಪರ ಆಡಿರುವ ಪ್ರತಿಯೊಂದು ಟಿ20 ಪಂದ್ಯದ ಪ್ರತಿ ನಿಮಿಷವನ್ನು, ವಿಶೇಷವಾಗಿ 2021 ರ ವಿಶ್ವಕಪ್ ನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆ ವರ್ಷ ಪ್ರಶಸ್ತಿಯನ್ನು ಗೆದ್ದ ತಂಡದ ಭಾಗವಾಗಿದ್ದರು ಸ್ಟಾರ್ಕ್.

ಸಿಡ್ನಿ: ಆಸ್ಟ್ರೇಲಿಯಾದ ಯಶಸ್ವಿ ವೇಗಿ ಮಿಚೆಲ್ ಸ್ಟಾರ್ಕ್ ಇಂದು ಮಂಗಳವಾರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು, ತಮ್ಮ ಟೆಸ್ಟ್ ಮತ್ತು ಏಕದಿನ ವೃತ್ತಿಜೀವನದತ್ತ ಗಮನ ಹರಿಸಲು ಬಯಸಿರುವುದಾಗಿ ಹೇಳಿದ್ದಾರೆ.

"ಟೆಸ್ಟ್ ಕ್ರಿಕೆಟ್ ಯಾವಾಗಲೂ ನನ್ನ ಅತ್ಯುನ್ನತ ಆದ್ಯತೆಯಾಗಿದೆ" ಎಂದು 35 ವರ್ಷದ ಸ್ಟಾರ್ಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಮುನ್ನ ಅವರ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ.

ನಾನು ಆಸ್ಟ್ರೇಲಿಯಾ ಪರ ಆಡಿರುವ ಪ್ರತಿಯೊಂದು ಟಿ20 ಪಂದ್ಯದ ಪ್ರತಿ ನಿಮಿಷವನ್ನು, ವಿಶೇಷವಾಗಿ 2021 ರ ವಿಶ್ವಕಪ್ ನ್ನು ಪ್ರೀತಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆ ವರ್ಷ ಪ್ರಶಸ್ತಿಯನ್ನು ಗೆದ್ದ ತಂಡದ ಭಾಗವಾಗಿದ್ದರು ಸ್ಟಾರ್ಕ್.

ವಿದೇಶಿ ಭಾರತ ಟೆಸ್ಟ್ ಪ್ರವಾಸ, ಆಸ್ಟ್ರೇಲಿಯಾ ಮತ್ತು 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಎದುರು ನೋಡುತ್ತಿರುವ ನಾನು, ಆಟದಲ್ಲಿ ತಾಜಾತನ, ಫಿಟ್ ನೆಸ್ ಕಾಯ್ದುಕೊಳ್ಳಲು ಮತ್ತು ಆ ಅಭಿಯಾನಗಳಿಗೆ ನನ್ನ ಅತ್ಯುತ್ತಮವಾದುದನ್ನು ನೀಡಲು ನನ್ನ ಅತ್ಯುತ್ತಮ ಮಾರ್ಗ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಸ್ಟಾರ್ಕ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 79 ವಿಕೆಟ್‌ಗಳನ್ನು ಗಳಿಸುವ ಮೂಲಕ ಆಡಮ್ ಜಂಪಾ ನಂತರ ಆಸ್ಟ್ರೇಲಿಯಾ ಪರ ಎರಡನೇ ಅತ್ಯಧಿಕ ವಿಕೆಟ್‌ಗಳನ್ನು ಗಳಿಸಿದ್ದಾರೆ.

ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಸರಣಿಗೆ ತಂಡವನ್ನು ಹೆಸರಿಸುತ್ತಿದ್ದಂತೆ ಅವರ ಘೋಷಣೆ ಹೊರಬಿದ್ದಿದೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ವೇಗದ ಬೌಲರ್‌ಗಳ ಸ್ಪಷ್ಟ ಹಾದಿಯನ್ನು ಕಾಯ್ದುಕೊಳ್ಳಲು ಅವಕಾಶ ನೀಡುವುದು ಮುಖ್ಯವಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಟಾಡ್ ಗ್ರೀನ್‌ಬರ್ಗ್ ಅಭಿಪ್ರಾಯಪಟ್ಟಿದ್ದಾರೆ.

ಮಿಚ್ ತಮ್ಮ ವೃತ್ತಿಜೀವನದ ಈ ಸಮಯದಲ್ಲಿ ತಮ್ಮ ಟೆಸ್ಟ್ ಮತ್ತು ಏಕದಿನ ವೃತ್ತಿಜೀವನವನ್ನು ಸಾಧ್ಯವಾದಷ್ಟು ವಿಸ್ತರಿಸಲು ಅನುವು ಮಾಡಿಕೊಡುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ, ಅವರ ನಿರ್ಧಾರಕ್ಕೆ ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ

ಬಿಹಾರ ಸೋಲಿನಿಂದ ಕಂಗೆಟ್ಟ ಕೈ ಪಡೆ: ಒಡೆದು ಛಿದ್ರವಾಯ್ತಾ INDIA ಒಕ್ಕೂಟ- ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಏಕಾಂಗಿ ಹೋರಾಟ?

'ಮುಂದಿನ ವರ್ಷ 17ನೇ ಬಜೆಟ್ ಮಂಡಿಸುತ್ತೇನೆ': ನಾಯಕತ್ವ ಬದಲಾವಣೆಯ ವದಂತಿಗೆ ತೆರೆ ಎಳೆದರೇ ಸಿದ್ದರಾಮಯ್ಯ?

ಮೇಕೆದಾಟು ಯೋಜನೆ: ಪ್ರಸಕ್ತ ದರಕ್ಕೆ ಪರಿಷ್ಕರಿಸಿ DPR ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ

ದೇಶಕ್ಕೆ ಹೆಮ್ಮೆ ತಂದ ತಿಪಟೂರು IAS ಅಧಿಕಾರಿ ಯಶೋಗಾಥೆ: ಮಧ್ಯಪ್ರದೇಶದಲ್ಲಿ 'ಮಣ್ಣಿನ ಮಗ'ನ ಜಲಕ್ರಾಂತಿ!

SCROLL FOR NEXT