ರೋಹಿತ್ ಶರ್ಮಾ ಜೆರ್ಸಿಯ ಸಾಂದರ್ಭಿಕ ಚಿತ್ರ 
ಕ್ರಿಕೆಟ್

Jersey Sponsorship: ಟೀಂ ಇಂಡಿಯಾಗೆ ಜೆರ್ಸಿ ಸ್ಪಾನ್ಸರ್‌ ಶಿಪ್ ದರ ಹೆಚ್ಚಿಸಿದ BCCI; ದ್ವಿಪಕ್ಷೀಯ, ICC ಪಂದ್ಯಗಳಿಗೆ ರೇಟು ಎಷ್ಟು ಗೊತ್ತಾ?

ದ್ವಿಪಕ್ಷೀಯ ಪಂದ್ಯಗಳಿಗೆ ರೂ. 3.5 ಕೋಟಿ ಮತ್ತು ICC, ACC ಅಂತಹ ಟೂರ್ನಿಗಳಿಗೆ ಸುಮಾರು ₹ 1.5 ಕೋಟಿ ನಿಗದಿಪಡಿಸಿದೆ ಎಂದು Cricbuzz ಶುಕ್ರವಾರ ವರದಿ ಮಾಡಿದೆ

ನವದೆಹಲಿ: ಡ್ರೀಮ್ 11 ಜೊತೆಗಿನ ಒಪ್ಪಂದ ರದ್ದಾಗಿರುವುದರಿಂದ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಸ್ಪಾನ್ಸರ್‌ಶಿಪ್‌ಗಾಗಿ ಬಿಸಿಸಿಐ ಹೊಸ ಅರ್ಜಿಗಳನ್ನು ಆಹ್ವಾನಿಸಿದ ನಂತರ ಟೀಂ ಇಂಡಿಯಾಗೆ ಜೆರ್ಸಿ ಸ್ಪಾನ್ಸರ್‌ ಶಿಪ್ (jersey Sponsorship) ದರವನ್ನು ಹೆಚ್ಚಿಸಿದೆ.

ಹೊಸ ದರ ನಿಗದಿ: ದ್ವಿಪಕ್ಷೀಯ ಪಂದ್ಯಗಳಿಗೆ ರೂ. 3.5 ಕೋಟಿ ಮತ್ತು ICC, ACC ಅಂತಹ ಟೂರ್ನಿಗಳಿಗೆ ಸುಮಾರು ₹ 1.5 ಕೋಟಿ ನಿಗದಿಪಡಿಸಿದೆ ಎಂದು Cricbuzz ಶುಕ್ರವಾರ ವರದಿ ಮಾಡಿದೆ. ಆದರೆ ಬಿಸಿಸಿಐ ಮೂಲಗಳು ಹೇಳುವಂತೆ ಪ್ರಸ್ತುತ ದ್ವಿಪಕ್ಷೀಯ ಪಂದ್ಯಗಳಿಗೆ ಇರುವ ₹ 3.17 ಕೋಟಿ ಮತ್ತು ಬಹುಪಕ್ಷೀಯ ಪಂದ್ಯಗಳ ₹ 1.12 ಕೋಟಿಗಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 16 ರಂದು ಬಿಡ್:

ಬಿಸಿಸಿಐ ಈ ಕ್ರಮದೊಂದಿಗೆ ದ್ವಿಪಕ್ಷೀಯ ಪಂದ್ಯಗಳಿಗೆ ಶೇ.10 ರಷ್ಟು ಮತ್ತು ಐಸಿಸಿ ಟೂರ್ನಿಗಳಂತಹ ಪಂದ್ಯಗಳಿಗೆ ಶೇ. 3 ರಷ್ಟು ದರ ಹೆಚ್ಚಿಸುವ ಗುರಿ ಹೊಂದಿದೆ. ಸೆಪ್ಟೆಂಬರ್ 16 ರಂದು ಬಿಡ್ ನಿಗದಿಪಡಿಸಲಾಗಿದೆ.

ಈ ಹಿಂದೆ ಸೆಪ್ಟೆಂಬರ್ 2 ರಂದು ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಜೆರ್ಸಿ ಸ್ಪಾನ್ಸರ್ ನೀಡುವ ಆಸಕ್ತ ಹಾಗೂ ಪ್ರತಿಷ್ಠಿತ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಹಣದಾಟದ ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದ ಬೆನ್ನಲ್ಲೇ ಬಿಸಿಸಿಐ ಜತೆಗಿನ ಡ್ರೀಮ್11 ಒಪ್ಪಂದ ಅಧಿಕೃತವಾಗಿ ಕೊನೆಗೊಂಡಿತ್ತು.

ಅಲ್ಲದೆ, ಕ್ರೀಡಾ ಮತ್ತು ಕ್ರೀಡಾ ಉಡುಪು ತಯಾರಕರು, ಬ್ಯಾಂಕಿಂಗ್ ಮತ್ತು ಹಣಕಾಸು ಕಂಪನಿಗಳು, ಆಲ್ಕೋಹಾಲ್ ಯೇತರ ತಂಪು ಪಾನೀಯಗಳು, ಫ್ಯಾನ್‌ಗಳು, ಮಿಕ್ಸರ್ ಗ್ರೈಂಡರ್‌ಗಳು, ಸುರಕ್ಷತಾ ಲಾಕರ್ ಮತ್ತು ವಿಮಾ ಸಂಸ್ಥೆಗಳು ಹಿತಾಸಕ್ತಿ ಸಂಘರ್ಷದ ಕಾರಣ ಬಿಡ್ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿತ್ತು.

ಟೀಂ ಇಂಡಿಯಾದ ಪ್ರಮುಖ ಪ್ರಾಯೋಜಕರಾಗಲು (sponsor) ಅರ್ಹತೆಯ ಮಾನದಂಡಗಳೇನು?

ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕರಾಗಲು, ಒಬ್ಬರು ಕಳೆದ ಮೂರು ವರ್ಷಗಳಿಂದ ಕನಿಷ್ಠ ₹300,00,00,000 ವಹಿವಾಟು ಅಥವಾ ನಿವ್ವಳ ಮೌಲ್ಯವನ್ನು ಹೊಂದಿರಬೇಕು ಎಂದು BCCI ಸ್ಪಷ್ಟಪಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ಪ್ರತಿ ಬಿಡ್‌ದಾರನ ಸರಾಸರಿ ವಹಿವಾಟು ಕನಿಷ್ಠ ರೂ. 3 ಕೋಟಿ ಆಗಿರಬೇಕು. ಕಳೆದ ಮೂರು ವರ್ಷಗಳಲ್ಲಿ ಲೆಕ್ಕ ಪರಿಶೋಧನ ವರದಿಯಂತೆ ಪ್ರತಿ ಬಿಡ್ ದಾರರ ನಿವ್ವಳ ಮೌಲ್ಯ ರೂ. 3 ಕೋಟಿ ಇರಬೇಕು ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ: ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ; ಸಿದ್ದರಾಮಯ್ಯ ಹೇಳಿದ್ದು ಏನು?

SIIMA 2025: ಕನ್ನಡ ಅಷ್ಟೊಂದು ಕೆಳಮಟ್ಟಕ್ಕೆ ಇಳಿದಿಲ್ಲ; ವೇದಿಕೆಯಲ್ಲೇ ಆಯೋಜಕರಿಗೆ ದುನಿಯಾ ವಿಜಯ್ ಎಚ್ಚರಿಕೆ, Video!

IVF ಮೂಲಕ ನಟಿ ಭಾವನಾ ಅವಳಿ ಮಕ್ಕಳಿಗೆ ಜನನ; ಒಂದು ಮಗು ಸಾವು!

ಧರ್ಮಸ್ಥಳ ಕೇಸ್: ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ; ಅಣ್ಣಾಮಲೈ ವಿಚಾರಣೆ ಯಾಕಿಲ್ಲ?

'ಅವ್ನ ಬಿಟ್.. ಇವ್ನ ಬಿಟ್.. ಇನ್ಯಾರೋ..': ಲವರ್ ಜೊತೆ ವಿವಾಹಿತ ಮಹಿಳೆ ಪರಾರಿ ಕೇಸ್ ಗೆ ಬಿಗ್ ಟ್ವಿಸ್ಟ್!

SCROLL FOR NEXT