ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ಭರ್ಜರಿ ಜಯ 
ಕ್ರಿಕೆಟ್

Asia Cup 2025: ಮಾಜಿ ಚಾಂಪಿಯನ್ SriLanka ಗೆ Bangladesh ಶಾಕ್; 4 ವಿಕೆಟ್ ಗೆಲುವು

ಶ್ರೀಲಂಕಾ ನೀಡಿದ್ದ 169 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ 19.5 ಓವರ್ ನಲ್ಲೇ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಜಯಭೇರಿ ಬಾರಿಸಿತು.

ದುಬೈ: ಏಷ್ಯಾಕಪ್ 2025 ಕ್ರಿಕೆಟ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಶ್ರೀಲಂಕಾಗೆ ಬಾಂಗ್ಲಾದೇಶ ತಂಡ ಶಾಕ್ ನೀಡಿದ್ದು, 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಇಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 169 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ 19.5 ಓವರ್ ನಲ್ಲೇ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಜಯಭೇರಿ ಬಾರಿಸಿತು.

ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ಸೈಫ್ ಹಸನ್ (61) ಮತ್ತು ಮಧ್ಯಮ ಕ್ರಮಾಂಕದಲ್ಲಿ ತೌಹಿದ್ ಹೃದೋಯ್ (58) ಅರ್ಧಶತಕಗಳ ನೆರವಿನಿಂದ 169 ರನ್ ಗಳಿಸಿ ಜಯ ಗಳಿಸಿತು. ಆ ಮೂಲಕ 4 ವಿಕೆಟ್ ಅಂತರದ ಗೆಲುವು ದಾಖಲಿಸಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು.

ಮಧ್ಯಮ ಕ್ರಮಾಂಕದಲ್ಲಿ ಶನಕ (64) ಅರ್ಧಶತಕ ಗಳಿಸಿದ್ದು ಬಿಟ್ಟರೆ, ಉಳಿದಾವ ಬ್ಯಾಟರ್ ಗಳಿಂದ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ನಿಸ್ಸಾಂಕಾ 22, ಕುಶಾಲ್ ಮೆಂಡಿಸ್ 34, ನಾಯಕ ಅಸಲಂಕಾ 21 ರನ್ ಗಳಿಸಿದರು.

ಬಾಂಗ್ಲಾದೇಶ ಪರ ಮುಸ್ತಫಿಜುರ್ 3, ಮೆಹ್ದಿ ಹಸನ್ 2 ಮತ್ತು ಟಸ್ಕಿನ್ ಅಹ್ಮದ್ 1 ವಿಕೆಟ್ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಂಪು ಕೋಟೆ ಬಳಿ ಕಾರು ಸ್ಫೋಟ 'ಭಯೋತ್ಪಾದಕ ದಾಳಿ': ಕೇಂದ್ರ ಸರ್ಕಾರ

ಧರ್ಮಸ್ಥಳ ಕೇಸ್: ತಿಮರೋಡಿ, ಗಿರೀಶ್ ಮಟ್ಟಣನವರ್ ತಂಡಕ್ಕೆ ಹೈಕೋರ್ಟ್ ಶಾಕ್; SIT ತನಿಖೆಗೆ ಅನುಮತಿ!

'BJP, ECಯಿಂದ ಬಹಿರಂಗವಾಗಿಯೇ ಮತಗಳ್ಳತನ': ಒಬ್ಬ ವ್ಯಕ್ತಿಯಿಂದ ಹಲವು ಕಡೆ ಮತದಾನ; ಪೋಸ್ಟ್ ಹಂಚಿಕೊಂಡ ರಾಹುಲ್

ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರೆದರೆ ತಪ್ಪೇನು?- DK Shivakumar; ಸಿಎಂ ಹುದ್ದೆ ಕನಸು ಕೈಬಿಟ್ಟ DCM?

GST ಕಡಿತ, ಆಹಾರ ವಸ್ತುಗಳ ಬೆಲೆ ಇಳಿಕೆ; ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಹಣದುಬ್ಬರ

SCROLL FOR NEXT