ಶಾಹಿದ್ ಅಫಿದಿ, ಇರ್ಫಾನ್ ಪಠಾಣ್ ಸಾಂದರ್ಭಿಕ ಚಿತ್ರ 
ಕ್ರಿಕೆಟ್

'Dog Meat' Controversy: ಬೆನ್ನ ಹಿಂದೆ ಮಾತನಾಡುವುದಲ್ಲ, ನೇರಾ ನೇರಾ ಮಾತನಾಡಬೇಕು; ಪಠಾಣ್ ಗೆ ಅಫ್ರಿದಿ ಸವಾಲು!

ಏಷ್ಯಾ ಕಪ್ 2025 ರಲ್ಲಿ 'ಹ್ಯಾಂಡ್‌ಶೇಕ್' ಮಾಡದ ಭಾರತೀಯ ಆಟಗಾರರ ವರ್ತನೆಯನ್ನು ಶಾಹಿದ್ ಅಫ್ರಿದಿ ಟೀಕಿಸಿದ್ದರು.

ನಾಯಿ ಮಾಂಸ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಾಗೂ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ನಡುವಣ ಮತ್ತೊಮ್ಮೆ ವಾಗ್ಯುದ್ದ ಭುಗಿಲೆದಿದ್ದೆ.

ವಿವಾದಾತ್ಮಕ ಹೇಳಿಕೆ ನೀಡುವುದಕ್ಕೆ ಹೆಸರುವಾಸಿಯಾಗಿರುವ ಅಫ್ರಿದಿ, ಪಠಾಣ್ ತಮ್ಮ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ್ದು, ಅವರು ತಮ್ಮೊಂದಿಗೆ ಮುಖಾಮುಖಿಯಾಗಿ ಮಾತನಾಡುವಂತೆ ಸವಾಲು ಹಾಕಿದ್ದಾರೆ.

ನನ್ನ ಮುಂದೆ ಯಾರೇ ಮಾತನಾಡಲಿ, ಅವರಿಗೆ ನಾನು ಕೂಡಾ ಪರಿಪೂರ್ಣ ಉತ್ತರವನ್ನು ನೀಡಬಲ್ಲೆ ಎಂದು ಅಫ್ರಿದಿ ಪಾಕಿಸ್ತಾನ ಟಿವಿ ಚಾನೆಲ್ ನಲ್ಲಿ ಹೇಳಿದ್ದಾರೆ. ಏಷ್ಯಾ ಕಪ್ 2025 ರಲ್ಲಿ 'ಹ್ಯಾಂಡ್‌ಶೇಕ್' ಮಾಡದ ಭಾರತೀಯ ಆಟಗಾರರ ವರ್ತನೆಯನ್ನು ಶಾಹಿದ್ ಅಫ್ರಿದಿ ಟೀಕಿಸಿದ್ದರು.

ಈ ನಡುವೆ ಮತ್ತೆ ನಾಯಿ ಮಾಂಸ ವಿವಾದ ಕೆಣಕಿರುವ ಅಫ್ರಿದಿ, ಮುಖಾಮುಖಿಯಾಗಿ ಮಾತನಾಡುವವರನ್ನು ಸ್ಪರ್ಧಿ ಅಂದುಕೊಳ್ಳುತ್ತೇನೆ. ಬೆನ್ನ ಹಿಂದೆ ಯಾರೂ ಬೇಕಾದ್ರು ಮಾತನಾಡಿಕೊಳ್ಳಬಹುದು. ಆದರೆ, ನನ್ನ ಮುಂದೆ ಮಾತನಾಡಬಲ್ಲರನ್ನು ಎದುರಿಸಲು ನಾನು ಇಷ್ಟಪಡುತ್ತೇನೆ. ಪರಿಪೂರ್ಣ ಪ್ರತ್ಯುತ್ತರವನ್ನೂ ನೀಡಬಲ್ಲೆ ಎಂದು ಅಫ್ರಿದಿ ಪಾಕಿಸ್ತಾನಿ ಟಿವಿ ಚಾನೆಲ್ ಸಮಾ ಟಿವಿಯಲ್ಲಿ ಹೇಳಿದರು.

ಏನಿದು ನಾಯಿ ಮಾಂಸ ವಿವಾದ?

2006 ರಲ್ಲಿನ ಇಬ್ಬರು ಕ್ರಿಕೆಟಿಗರ ನಡುವಿನ ಬಿಸಿ ಸಂಭಾಷಣೆಯನ್ನು ಪಠಾಣ್ ಬಹಿರಂಗಪಡಿಸಿದಾಗ ವಿವಾದ ಹುಟ್ಟಿಕೊಂಡಿತ್ತು. 2006ರ ಪ್ರವಾಸದ ಸಮಯದಲ್ಲಿ ನಾವು ಕರಾಚಿಯಿಂದ ಲಾಹೋರ್ ಗೆ ವಿಮಾನದಲ್ಲಿ ಹೋಗಿದ್ದೇವು. ಎರಡೂ ತಂಡಗಳು ಒಟ್ಟಿಗೆ ಪ್ರಯಾಣಿಸುತ್ತಿದ್ದೇವು. ಅಫ್ರಿದಿ ಬಂದು ನನ್ನ ತಲೆ ಮೇಲೆ ಕೈ ಇಟ್ಟು ನನ್ನ ಕೂದಲನ್ನು ಹಾಳು ಮಾಡಿದರು. ನಾನು ಹೇಗಿದ್ದೇನೆ ಎಂದು ಅವರು ನನ್ನನ್ನು ಕೇಳಿದರು. ಆಗ ಅಬ್ದುಲ್ ರಜಾಕ್ ನನ್ನ ಜೊತೆ ಕುಳಿತಿದ್ದರು. ನಾನು ಅವರನ್ನು ಕೇಳಿದೆ ಇಲ್ಲಿ ಯಾವ ರೀತಿಯ ಮಾಂಸ ಲಭ್ಯವಿದೆ ಎಂದು. ಅವರು ವಿವಿಧ ಪ್ರಾಣಿಗಳ ಮಾಂಸ ಲಭ್ಯವಿದೆ ಎಂದು ಹೇಳಿದರು. ಇದಾದ ನಂತರ ನಾನು ನಾಯಿ ಮಾಂಸ ಲಭ್ಯವಿದೆಯೇ ಎಂದು ಕೇಳಿದೆ. ನನ್ನ ಮಾತು ಕೇಳಿ ಅಚ್ಚರಿಗೊಂಡ ರಜಾಕ್, ನನ್ನ ಹೇಳಿಕೆಯ ಹಿಂದಿನ ಕಾರಣವನ್ನು ಕೇಳಿದರು. ನಾನು ಅಫ್ರಿದಿಯ ಕಡೆಗೆ ಬೆರಳು ತೋರಿಸಿ ಅವನು ನಾಯಿ ಮಾಂಸ ತಿಂದಿದ್ದಾನೆ. ಅದಕ್ಕಾಗಿ ಅವನು ಒಂದೇ ರೀತಿ ಬೊಗಳುತ್ತಿದ್ದಾನೆ ಎಂದು ಪಠಾಣ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ಅದೇ ವಿಚಾರವನ್ನು ಮತ್ತೆ ಸಂದರ್ಶಕರು ಅಫ್ರಿದಿ ಕೇಳಿದಾಗ, ಇರ್ಫಾನ್ ವಿರುದ್ಧ ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Gujarat: ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸ್ಕೆಚ್; ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಗುಜರಾತ್ ATS!

ಸರಗೂರು: ಮಾನವ, ದನಗಳ ಕೊಂದಿದ್ದ ಹುಲಿ ಕೊನೆಗೂ ಸೆರೆ, ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?

'ಯುದ್ಧ ಭುಗಿಲೆದ್ದರೆ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ': ಆಫ್ಘಾನಿಸ್ತಾನ, ಪಾಕಿಸ್ತಾನ ಜೊತೆ ಶಾಂತಿ ಮಾತುಕತೆ ಮತ್ತೆ ವಿಫಲ

'vote chori': ರಾಜ್ಯದ 1.12 ಕೋಟಿ ಜನರಿಂದ 'ಕೈ' ಸಹಿ ಸಂಗ್ರಹ, ನ.10ಕ್ಕೆ ಹೈಕಮಾಂಡ್'ಗೆ ಸಲ್ಲಿಕೆ

ಜಾರ್ಜಿಯಾದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ನ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗಳ ಬಂಧನ, ಗಡೀಪಾರಿಗೆ ಸಿದ್ಧತೆ

SCROLL FOR NEXT